ಹೋಳಿ ಹಬ್ಬದ ಪ್ರಯುಕ್ತ ಶಾಂತಿ ಸಭೆ

ಕೆಂಭಾವಿ : ಪಟ್ಟಣದ ಪೋಲಿಸ ಠಾಣೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಶಾಂತಿ ಸಭೆ ಆಯೋಜಿಸಲಾಗಿತ್ತು ಶಾಂತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಕ್ರೈಂ ಪಿಎಸ್ ಐ ಹಣಮಂತ್ರಾಯ ಸಿದ್ದಾಪೂರ ಹೋಳಿ ಹಬ್ಬದಲ್ಲಿ ರಂಗಗಳ ಆಟ, ಗುಲಾಲ, ಎರಚಿ ಡಿಜೆ ಸಂಗೀತದಿಂದ ಉತ್ಸಾಹದಿಂದ ನೆಡೆಯುವ ಹಬ್ಬವಾಗಿದೆ. ಆದರೆ ಯುವಕರ ನಡುವೆ ಗಲಭೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಲುಪುವ ಸಾಧ್ಯತೆ ಇರುತ್ತದೆ.
ಆದ್ದರಿಂದ ಯಾವುದೇ ಧರ್ಮಗಳಿಗೆ ಧಕ್ಕೆಯಾಗದಂತೆ ನೆಡೆದುಕೊಳ್ಳಬೇಕು ಇಂತಹ ಶಾಂತಿ ಸಭೆಗಳು ತೊಂದರೆಗಳನ್ನು ತಡೆಯಲು ಸಹಾಯ ಮಾಡುತ್ತವೆ. ಪೊಲೀಸ್ ಗಸ್ತು ಹೆಚ್ಚಿಸಿ, ನಿಮಗೆ ಬೇಕಾದ ರೀತಿಯಲ್ಲಿ ರಕ್ಷಣೆ ನೀಡುಲು ಇಲಾಖೆ ಸಿದ್ಧವಿದೆ ಎಂದರು.
ಶಾಂತಿ ಸೌಹಾರ್ದತೆಯಿಂದ ಒಬ್ಬರಿಗೊಬ್ಬರಂತೆ ಸಹಬಾಳ್ವೆಯಿಂದ ಆಚರಣೆ ಮಾಡುವದು ನಿಜವಾದ ಹಬ್ಬವವಿದಂತೆ ಅದಕ್ಕಾಗಿ ಎಲ್ಲರೂ ಹೋಳಿಹುಣ್ಣಿಮೆಯಲ್ಲಿ ತಮ್ಮ ವ್ಯಯಕ್ತಿಕ ದ್ವೇಷ ಹಾಗೂ ಅಸೂಯೆ ಮಾಡುವದು ತಪ್ಪು ಅಂತಹ ಸನ್ನಿವೇಶ ಕಂಡುಬಂದ್ರೆ ಕಾನೂನಿನ ಕ್ರಮ ತೆಗೆದುಕೊಳ್ಳಲಾಗುವದು ಇದರಿಂದ ಎಲ್ಲರೂ ವೈರತ್ವ ದ್ವೇಷ ಬಾವನೆಗಳನ್ನು ಬಿಟ್ಟು ಹೋಳಿ ಬಣ್ಣದ ಎಲ್ಲರೂ ಖುಷಿಯಾಗಿ ಹಬ್ಬ ಆಚರಿಸಿ ರಂಜಾನ್ ಹಬ್ಬ ಇದ್ದು ಎಲ್ಲರೊಂದಿಗೆ ಬಾಂದ್ಯವದಿಂದ ಹಬ್ಬ ಆಚರಿಸಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡ ದೇವಿಂದ್ರಪ್ಪ ವಠಾರ( ಮಾಸ್ತರ) ನಮ್ಮ ವಲಯದಲ್ಲಿ ಎಲ್ಲೂ ಕೂಡ ಹೋಳಿಹಬ್ಬದಂದು ಅಹಿತಕರ ಘಟನೆ ನಡೆದಿಲ್ಲ ಮುಂದೆಯೂ ನಡೆಯುವದಿಲ್ಲ ಆದ್ದರಿಂದ ಮೊದಲಿನಿಂದಲೂ ಎಲ್ಲರೂ ಒಗ್ಗಟ್ಟಿನಿಂದ ಹಬ್ಬ ಆಚರಿಸುವದು ನಮ್ಮ ಕರ್ತವ್ಯ ಮುಂದೆಯೂ ಅದೇ ರೀತಿ ಹಬ್ಬಗಳನ್ನು ಆಚರಸುತ್ತೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯ್ತಿ ಸದಸ್ಯ ಖಾಜ ಪಟೇಲ್ ಕಾಚೂರು, ದಲಿತ ಮುಖಂಡ ದೇವಿಂದ್ರಪ್ಪ ವಠಾರ, ಮೌಲಾನ ಸೈಯದ್ ಹುಸೇನ್,ನಯಿಮಖಾಜಿ, ಮಮ್ಮದ ನಾಸಿ, ಸಿದ್ದು ಜಮಖಂಡಿ, ನಿಂಗಣ್ಣ ಕಟ್ಟಿಮನಿ, ಸೇರಿದಂತೆ ಪೊಲೀಸ್ ಸಿಬ್ಬಂದಿಗಳಾದ ಎ ಎಸ್ ಐ ಬಸನಗೌಡ, ಎಚ್ ಸಿ ಅಂಬರೀಶ್, ಎಚ್ ಸಿ ಪ್ರಭುಗೌಡ, ಎಚ್ ಸಿ ಶಂಕರಗೌಡ ಪಿ ಸಿ ಪೂಜಾ, ಇತರರು ಇದ್ದರು.



