ದುರ್ಜನರ ವಿರುದ್ಧ ಸತ್ಯದ ಪ್ರತೀಕ ಹೋಳಿ : ರವೀಂದ್ರ ಮಿರ್ಜಿ

ಕೆಂಭಾವಿ: ಭಾರತದ ಸಮೃದ್ಧ ಪರಂಪರೆಯ ಅತ್ಯಂತ ಪ್ರಾಚೀನ ಹಾಗೂ ಪವಿತ್ರ ಹಬ್ಬವಾದ ಹೋಳಿ ಹುಣ್ಣಿಮೆ ಯನ್ನು ಕೆಂಭಾವಿ ಪಟ್ಟಣದಲ್ಲಿ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ವಿವಿಧ ಭಾಗಗಳಲ್ಲಿ ಹೋಳಿ ದಹನ ಕಾರ್ಯಕ್ರಮಗಳು ನಡೆದಿದ್ದು, ಯುವಕರು ಹಾಗೂ ಸಾರ್ವಜನಿಕರು ಹರ್ಷೋಲ್ಲಾಸದಿಂದ ಭಾಗವಹಿಸಿದರು.
ಹೋಳಿ ಹಬ್ಬದ ಕುರಿತು ಮಾತನಾಡಿದ ರವೀಂದ್ರ ಮಿರ್ಜಿ ಅವರು ಹಬ್ಬದ ಪೌರಾಣಿಕ ಹಾಗೂ ತಾತ್ವಿಕ ಮಹತ್ವವನ್ನು ವಿವರಿಸಿದರು. “ಹೋಳಿ ಹಬ್ಬವು ಅಧರ್ಮದ ವಿರುದ್ಧ ಧರ್ಮದ ಜಯ ಹಾಗೂ ದುರ್ಜನರ ವಿರುದ್ಧ ಸಜ್ಜನಿಕೆಯ ಜಯದ ಸಂಕೇತವಾಗಿದೆ. ಇದು ಸತ್ಯದ ಶಾಶ್ವತತೆಯನ್ನೂ, ದುಷ್ಟ ಶಕ್ತಿಗಳ ನಾಶವನ್ನೂ ಸಾರುವ ಹಬ್ಬ. ಜಗದೋದ್ಧಾ ರಕನ ಜನನವಾಗಲು ಪ್ರಕೃತಿ ಮತ್ತು ಪುರುಷರ ಅವಶ್ಯಕತೆ ಇದೆ. ಶಿವನು ಕಠಿಣ ತಪಸ್ಸಿನಲ್ಲಿ ನಿರತನಾಗಿದ್ದಾಗ, ಲೋಕ ಕಲ್ಯಾಣಾರ್ಥವಾಗಿ ಪಾರ್ವತಿ ಯೊಂದಿಗೆ ವಿವಾಹವಾಗಲು ಕಾಮದೇವನು ಶಿವನ ಮೇಲೆ ಪುಷ್ಪಬಾಣ ಪ್ರಯೋಗಿಸಿ ದನು. ಈ ಘಟನೆಯೂ ಹೋಳಿ ಹಬ್ಬದ ತಾತ್ವಿಕ ಅರ್ಥವ ನ್ನು ಬಿಂಬಿಸುತ್ತದೆ,” ಎಂದು ಹೇಳಿದರು.
ಹೋಳಿ ದಹನದ ನಂತರ ಯುವಕರು ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ಸೌಹಾರ್ದತೆ, ಏಕತೆ ಹಾಗೂ ಸತ್ಯದ ಸಂದೇಶವನ್ನು ಸಾರುವ ಹಬ್ಬವಾಗಿ ಹೋಳಿ ಆಚರಣೆ ಪಟ್ಟಣದಲ್ಲಿ ವಿಶೇಷ ಮೆರುಗು ತಂದುಕೊಟ್ಟಿತು.
ಈ ಸಂಭ್ರಮಾಚರಣೆಯಲ್ಲಿ ಪ್ರಮುಖರಾದ ಶರಣು ಅಂಗಡಿ, ಗೌಡಪ್ಪಗೌಡ ಅಸಂತಪುರ್, ಪ್ರಕಾಶ್ ಸೊನ್ನದ್, ರಾಜು ಅಸ್ಕಿ, ಮಲಕಣ್ಣ ಮಲಕಾಪುರ್, ಅಮೃತ್ ಅಂಗಡಿ, ಮುತ್ತು ಅಸ್ಕಿ, ರಾಚಪ್ಪ ಕುಂಬಾರ್ ಸೇರಿದಂತೆ ಅಪಾರ ಸಂಖ್ಯೆಯ ಯುವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



