ಸುರಪುರ ತಾಲೂಕಿನ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೊಡಿಕೆ : ಕಸಾಪ ಸ್ಪಷ್ಟನೆ

ಕೆಂಭಾವಿ : ಪಟ್ಟಣದಲ್ಲಿ ಏಪ್ರಿಲ್ 4ರಂದು ನಡೆಯಬೇಕಾಗಿರೋ ಸುರಪುರ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಅನಿವಾರ್ಯ ಕಾರಣಗಳಿಂದ ಹಾಗೂ ತಾಂತ್ರಿಕ ಸಮಿತಿ ಸಲಹೆ ಮೇರೆಗೆ ಮುಂಡೂಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ಕೆಂಭಾವಿ ವಲಯ ಕನ್ನಡ ಸಾಹಿತ್ಯ ಪರಿಷತ್ತು ಘಟಕ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ಹಮ್ಮಿಕೊಂಡು ಮಾತನಾಡಿದ ಸುರಪೂರು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷರಾದ ಮುಕುಂದ ನಾಯಕ ಅವರು ಮಾತನಾಡಿ ಮಾನ್ಯ ಶಾಸಕರು ಸುರಪುರ ಹಾಗೂ ಮಾನ್ಯ ಮಂತ್ರಿಗಳ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆಯ ಮೇರೆಗೆ ಹಾಗೂ ತಾಂತ್ರಿಕ ಸಮಿತಿಯ ಸಲಹೆ ಮೇರೆಗೆ ಏಪ್ರಿಲ್ 4 ರಂದು ನಡೆಯಬೇಕಾಗಿರುವ ಸುರಪೂರು ತಾಲೂಕಿನ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಅನಿವಾರ್ಯ ಕಾರಣದಿಂದ ಮುಂದೂಡ ಲಾಗಿದೆ ಎಂದರು. ಬರುವ ಜೂನ್ ತಿಂಗಳ ಕೊನೆಯ ಅಥವಾ ಜುಲೈ ತಿಂಗಳ ಮೊದಲ ವಾರದಲ್ಲಿ ಹಮ್ಮಿ ಕೊಳ್ಳಲಾಗುವುದು ಎಂದು ಹೇಳಿದರು.
ಕೆಂಭಾವಿ ವಲಯ ಕಸಾಪ ಅಧ್ಯಕ್ಷ ಮಡಿವಾಳಪ್ಪ ಗೌಡ ಪಾಟೀಲ್ ಮಾತನಾಡಿ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ಮಾಡಬೇಕು ಅಂತ ತೀರ್ಮಾನ ಮಾಡಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಶಾಲೆಗಳಿಗೆ ರಜೆ ಇರುವುದರಿಂದ ಎಲ್ಲಾ ಮಕ್ಕಳು ಕೂಡ ಮನೆಗೆ ಹೋಗಿದ್ದಾರೆ. ಮತ್ತು ಅದರ ಜೊತೆಗೆ ಶಿಕ್ಷಕರಿಗೆ ಎಸ್.ಎಸ್.ಎಲ್.ಸಿ ಪರೀಕ್ಷಾ ಮೌಲ್ಯಮಾಪನಕ್ಕೆ ಹೋಗಲಿಕ್ಕೆ ಸರ್ಕಾರದ ಆದೇಶ ಪತ್ರಗಳು ಬಂದಿರುವುದರಿಂದ, ಶಿಕ್ಷಕರೂ ಇಲ್ಲ, ಮಕ್ಕಳೂ ಇಲ್ಲ ಅಂದ್ರೆ ಈ ಸಮ್ಮೇಳನಕ್ಕೆ ಮೆರುಗು ಬರಲಿಕ್ಕೆ ಸಾಧ್ಯ ಆಗುವುದಿಲ್ಲ ಆದ್ದರಿಂದ ನಾವು ಈ ಸಮ್ಮೇಳನವನ್ನು ಮುಂದಕ್ಕೆ ಹಾಕಿದರೆ ಸೂಕ್ತ ಎಂಬ ವಿಚಾರವನ್ನು ಇಟ್ಟುಕೊಂಡು ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿದೆ.
ಮುಂದಿನ ದಿನಗಳಲ್ಲಿ ಸಚಿವರಿಂದ ದಿನಾಂಕವನ್ನು ನಿಗದಿಪಡಿಸಿ ಅದ್ದೂರಿಯಾಗಿ ಸಮ್ಮೇಳನವನ್ನು ಆಯೋಜನೆ ಮಾಡಲಾಗುವುದು ಎಂದರು. ಪಟ್ಟಣದ ಹಿರಿಯರಾದ ವಾಮನ್ ರಾವ್ ದೇಶಪಾಂಡೆ ಹಾಗೂ ತಾಲೂಕು ಕಸಾಪ ಅಧ್ಯಕ್ಷರಾದ ಶರಣಬಸವ ಯಾಳವರ ಅವರು ಮಾತನಾಡಿದರು.
ಶಿಕ್ಷಕ ಬಂದೇನವಾಜ್ ನಾಲ್ತೋಡ್ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಿರಿಯರು, ಪಟ್ಟಣದ ಯುವಕರು ಮಾಧ್ಯಮದ ಮಿತ್ರರು ಇದ್ದರು.



