ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ: ದೊಡ್ಡಪ್ಪಗೌಡ ಪಾಟೀಲ್

ಜೇವರ್ಗಿ : ಮಹಾಲಕ್ಷ್ಮೀ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ವತಿಯಿಂದ ದತ್ತು ಗ್ರಾಮವಾದ ಗಂವಾರದಲ್ಲಿ ಐದು ದಿನಗಳ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ತ್ರಿವಿಕ್ರಮಾನಂದ ಸರಸ್ವತಿ ಮಹಾಸ್ವಾಮಿಗಳ ಮಠದ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಶಿಬಿರವನ್ನು ಆರಂಭಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕರು ಹಾಗೂ ಜೆಡಿಎಸ್ ರಾಜ್ಯ ಕಾರ್ಯದರ್ಶಿ ದೊಡ್ಡಪ್ಪಗೌಡ ಎಸ್. ಪಾಟೀಲ್ ನರಿಬೋಳ, “ರಾಷ್ಟ್ರೀಯ ಸೇವಾ ಯೋಜನೆ ಶಿಬಿರವು ರಾಷ್ಟ್ರ ನಿರ್ಮಾಣದ ಭಾವೈಕ್ಯತೆಯ ಸಂಕೇತವಾಗಿದೆ. ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿಗೆ ಮೂಲ. ದತ್ತು ಗ್ರಾಮವಾದ ಗಂವಾರದಲ್ಲಿ ನೈರ್ಮಲೀಕರಣ, ಪರಿಸರ ಸಂರಕ್ಷಣೆ, ಸಸಿ ನೆಡುವುದು, ಕಾನೂನು ಜಾಗೃತಿ, ಬಾಲ್ಯ ವಿವಾಹ ಹಾಗೂ ವರದಕ್ಷಿಣೆ ವಿರೋಧಿ ಅರಿವು ಮೂಡಿಸುವ ಕಾರ್ಯ ಕ್ರಮಗಳನ್ನು ಮನೆಮನೆಗೆ ತಲುಪಿಸಬೇಕು” ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಿಜಯ ಭಾರತೀ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಶ್ರೀಪಾದ್ ಜೋಶಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿಶ್ವರಾಧ್ಯ ಬಡಿಗೇರ್, ದೇವು ಜನಿವಾರ, ಜೆಡಿಎಸ್ ಮುಖಂಡ ರಾಕೇಶ್ ಹರಸೂರ್, ಐಟಿಐ ಉಪನ್ಯಾಸಕ ಶಿವಶರಣಪ್ಪ ಹಳಿಮನಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸಂಸ್ಥೆಯ ಸದಸ್ಯ ಈಶ್ವರ ಹಿಪ್ಪರಗಿ, ಪ್ರಾಚಾರ್ಯ ಡಾ. ಧರ್ಮಣ್ಣ ಕೆ. ಬಡಿಗೇರ್, ಸಿದ್ದಲಿಂಗ ಎಸ್. ವಸ್ತಾರಿ, ಅ ಧ್ಯಕ್ಷೆ ಮಂಜುಳಾ ಡಿ. ಬಡಿಗೇರ್, ಉಪನ್ಯಾಸಕಿಯರಾದ ರೂಪಾ ಆರ್. ಕಲ್ಲೂರ್, ಸಾವಿತ್ರಿ ಮನಗೂಳಿ, ಶಾರದಾ ಬಿ. ತಳವಾರ್, ಚಂದ್ರಕಲಾ ಹಿಪ್ಪರಗಿ ಹಾಗೂ ಉಪನ್ಯಾಸಕ ಶರಣು ಕುಮ್ಮನಸಿರಸಗಿ ಉಪಸ್ಥಿತರಿದ್ದರು.
ಎನ್ಎಸ್ಎಸ್ ಶಿಬಿರಾರ್ಥಿಗಳು ಸಹ ಭಾಗಿಯಾಗಿದ್ದ ರು.ಕಾರ್ಯಕ್ರಮದಲ್ಲಿ ಪ್ರಾರ್ಥನಾ ಗೀತೆಯನ್ನು ಕು. ಶೃತಿ ಎಂ. ಹಾಗೂ ಸ್ವಾಗತ ಗೀತೆಯನ್ನು ಅಕ್ಷತಾ ಪ್ರಸ್ತುತಪಡಿಸಿ ದರು. ದಿನಪೂರ್ತಿ ನಡೆದ ಕಾರ್ಯಕ್ರಮಗಳನ್ನು ಕುವೆಂಪು ತಂಡದವರು ಅಚ್ಚುಕಟ್ಟಾಗಿ ನಿರ್ವಹಿಸಿದರು.


