
ಚಿತ್ತಾಪುರ: ಪಟ್ಟಣದಲ್ಲಿ ಶನಿವಾರ ನಡೆಯಬೇಕಿದ್ದ ಆರ್ ಎಸ್ ಎಸ್ ಕೇಸರಿ ಪಥ ಸಂಚಲನ ಹಾಗೂ ಇದಕ್ಕೆ ಪ್ರತಿರೋಧ ನಡೆಸಲು ಉದೇಶಿಸಿದ್ದ ಭೀಮ ಆರ್ಮಿ ನೀಲಿ ಶಾಲು ಪಥಸಂಚಲನಕ್ಕೆ ಹೈಕೋರ್ಟ್ ತಾತ್ಕಾಲಿಕವಾಗಿ ನಿಲುಗಡೆ ಪ್ರಕಟಿಸಿದೆ.
ಸಚಿವ ಪ್ರಿಯಾಂಕ್ ಖರ್ಗೆ ಅವರ ಸ್ವಕ್ಷೇತ್ರ ಚಿತ್ತಾಪುರದಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಧರ್ಮದಂಗಲ ಕೋಟ್ ನ ಆದೇಶಕ್ಕೆ ತಲೆಬಾಗಿ ತಣ್ಣಗಾಗಿದೆ. ಆರ್ ಎಸ್ ಎಸ್ ಪಥ ಸಂಚಲನಕ್ಕೆ ಎದುರಾದ ಆಡಳಿತಾತ್ಮಕ ಪ್ರತಿರೋಧಕ ಖಂಡಿಸಿ ಕೋರ್ಟ್ ಮೆಟ್ಟಿಲೇರಿದ್ದ ಆರ್ ಎಸ್ ಎಸ್ ಮುಖಂಡ ಪ್ರಭಾಕರ್ ಜೋಶಿ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಅಂತಿಮ ತೀರ್ಪು ಅಕ್ಟೋಬರ್ 24ಕ್ಕೆ ಮುಂದೂಡಿಕೆ ಮಾಡಿದೆ. ಇದರಿಂದಾಗಿ ಆರ್ ಎಸ್ಎಸ್ ಪಥಸಂಚಲನ ಹಾಗೂ ಭೀಮ್ ಆರ್ಮಿಯ ಪ್ರತಿರೋಧ ಪ್ರಕರಣ ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ಪೂರ್ವ ನಿಯೋಜಿತ ಬಂದೋಬಸ್ತ್ ನಡೆಸಲು ಮುಂದಾಗಿರುವ ಪೋಲಿಸ್ ಇಲಾಖೆ ನಿಟ್ಟುಸಿರು ಬಿಟ್ಟಿದೆ. ಆರ್ ಎಸ್ ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ ಧರ್ಮ ಯುದ್ಧ ನಾಲ್ಕು ದಿನಗಳ ಕಾಲ ಮುಂದುಡಿದ್ದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಪತಸಂಚಲನ ನಡೆಸಿ ತೀರುತ್ತೇವೆ ಎಂದು ಪಣತೊಟ್ಟಿರುವ ಎರಡು ಸಂಘಟನೆಗಳ ತೀರ್ಮಾನ ಅಚಲವಾಗಿದ್ದು ರಾಜ್ಯದ ಗಮನ ಸೆಳೆದಿದೆ. ಆರ್ ಎಸ್ ಎಸ್ ಪಥ ಸಂಚಲನಕ್ಕೆ ತಾತ್ಕಾಲಿಕ ಬ್ರೇಕ್ ಬೀಳುತ್ತಿದ್ದಂತೆ, ಪೊಲೀಸ್ ಬಂದೋಬಸ್ತ್ ಮತ್ತಷ್ಟು ಬಿಗಿಕೊಂಡಿದೆ. ಮತ ಸಂಚಲನವನ್ನು ಸಂಭ್ರಮಿಸಲು ಪಟ್ಟಣದಾದ್ಯಂತ ಅಳವಡಿಸಲಾಗಿದ್ದ ಕೇಸರಿ ಬಾವುಟ ಮತ್ತು ಬಂಟಿಂಗ್ಸ್ ಗಳು ತಾಲೂಕು ಆಡಳಿತ ತೆರವು ಮಾಡಿರುವುದರಿಂದ ಬೀದಿಗಳು ಭಣಗುಡುತ್ತಿವೆ. ಇದನ್ನೇ ಸವಾಲಾಗಿ ಸ್ವೀಕರಿಸಿರುವ ಆರ್ ಎಸ್ ಎಸ್ ಬಿಜೆಪಿ ಕಾರ್ಯಕರ್ತರು ನವೆಂಬರ್ 2ರಂದು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಕಾರ್ಯಕರ್ತರನ್ನು ಸೇರಿಸಿ ಪಥಸಂಚಲನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರ ನಿದ್ದೆಗೆಡಿಸಿದ ಪಥ ಸಂಚಲನ ಸಂಘರ್ಷ ಸದ್ಯ ಹತೋಟಿಗೆ ಬಂದಿದ್ದು ಪೂರ್ವ ನಿಯೋಜಿತ ಕಾರ್ಯಕ್ರಮಗಳು ಏನಾಗುತ್ತವೆ ಎನ್ನುವುದು ಕಾದು ನೋಡಬೇಕಾಗಿದೆ. ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐಗಳಾದ ಚಂದ್ರಶೇಖರ ತಿಗಡಿ, ನಟರಾಜ್ ಲಾಡೆ, ಜಗದೇವಪ್ಪ ಪಾಳಾ, ಪ್ರಕಾಶ ಯಾತನೂರ, ಪಿಎಸ್ಐ ಕೆ.ತೀರಮಲೇಶ, ಮಂಜುನಾಥ ರೆಡ್ಡಿ ಬೀಗಿ ಬಂದೋಬಸ್ತ್ ಒದಗಿಸಿದ್ದರು.