ಕಲಬುರಗಿಜಿಲ್ಲಾಸುದ್ದಿ

ತಾಜ್ ಸುಲ್ತಾನಪೂರದಲ್ಲಿ ರವಿದಾಸ ಮಹಾರಾಜ ಹಾಗೂ ಹರಳಯ್ಯ ಜಯಂತಿ ಸಡಗರ

ಕಲಬುರಗಿ: ತಾಲೂಕಿನ ತಾಜ್ ಸುಲ್ತಾನಪೂರ ಗ್ರಾಮದಲ್ಲಿ ಶ್ರೀ ಗುರು ರವಿದಾಸ ಮಹಾರಾಜ ಹಾಗೂ ಶಿವಶರಣ ಹರಳಯ್ಯ ಅವರ ಜಯಂತಿಯನ್ನು ಭಕ್ತಿ ಭಾವದಿಂದ ಹಾಗೂ ಸಡಗರದಿಂದ ಆಚರಿಸಲಾಯಿತು.

ಈ ಅಂಗವಾಗಿ ಶಿವಶರಣ ಹರಳಯ್ಯ ಹಾಗೂ ಸಂತ ರವಿದಾಸ ಮಹಾರಾಜರ ಸೇವಾ ಸಂಘಟನೆಯ ಉದ್ಘಾಟನಾ ಸಮಾರಂಭವೂ ನೆರವೇರಿತು. ಸಮುದಾಯದ ಸ್ವಾಮೀಜಿಗಳು ಹಾಗೂ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು (ಎಸ್‌ಸಿ-ಎಸ್‌ಟಿ) ನೌಕರರ ಜಿಲ್ಲಾ ಸಂಘಟನಾ ಸಹ ಕಾರ್ಯದರ್ಶಿ ಭೀಮಶ್ಯಾ ಘಾಳೆ ವಹಿಸಿದ್ದರು. ಈ ವೇಳೆ ಆಗಮಿಸಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು, ಸಂತ ಶಿರೋಮಣಿ ಗುರು ರವಿದಾಸ ಮಹಾರಾಜರ ಉಪದೇಶಗಳು ಸಮಾನತೆ, ಭ್ರಾತೃತ್ವ ಹಾಗೂ ಸಾಮಾಜಿಕ ಕ್ರಾಂತಿಯ ಸಂದೇಶವನ್ನು ಸಾರುತ್ತವೆ ಎಂದು ಹೇಳಿದರು. ಅವರ ಆದರ್ಶಗಳನ್ನು ಅನುಸರಿಸುವ ಮೂಲಕ ಸಮಾಜದಲ್ಲಿ ಏಕತೆ ಮತ್ತು ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಭೀಮಶ್ಯಾ ಘಾಳೆ, ಹಣಮಂತ ಘಾಳೆ, ರಾಮ ಟೆಳ್ಳೆ, ರಾಜಶೇಖರ ಕಾಂಬಳೆ, ಸುಭಾಷ ಕಾಂಬಳೆ, ಶ್ರಾವಣ ಭೂಸಾವಳೆ, ಸಂಜು ಕುಮಾರ್ ಕಾಂಬಳೆ, ವಸಂತ ಭೂಸಾವಳೆ, ದತ್ತಾತ್ರೇಯ ಕಾಂಬಳೆ, ಪ್ರಕಾಶ್ ಕಾಂಬಳೆ, ಚಂದ್ರು ಸಾತಪೊತೆ, ಸುನಿಲ್ ಹೆಚ್ ಕಾಂಬಳೆ, ದತ್ತು ಟೆಳ್ಳೆಕರ್, ಲೋಕೇಶ್ ಕಾಂಬಳೆ, ಮಹಾದೇವ ಕಾಂಬಳೆ, ವಿಠ್ಠಲ ಕಾಂಬಳೆ, ರಾಹುಲ್ ಗಾಯಕವಾಡ, ರವಿದಾಸ ವಾಕಳೆ, ನಾಗರಾಜ ಕಾಂಬಳೆ, ಸುರೇಶ್ ಕಾಂಬಳೆ, ಕೃಷ್ಣಾ ಪಾಪಡವಾಲೆ, ವಿನೋದ ಗೌಳಿ, ಶಿವರಾಜ್ ಹೆಚ್ ಕಾಂಬಳೆ ಸೇರಿದಂತೆ ಸಮಾಜದ ಹಿರಿಯರು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button