ಕಲಬುರಗಿಜಿಲ್ಲಾಸುದ್ದಿ

ಅಸ್ಪೃಶ್ಯತಾ ನಿರ್ಮೂಲನಾ ವಿಚಾರಗೋಷ್ಠಿ: ಸಂವಿಧಾನದ ಮೌಲ್ಯಗಳ ಪಾಲನೆಗೆ ಕರೆ

ಅಫಜಲಪೂರ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಲಬುರಗಿ ಹಾಗೂ ಸಾಮ್ರಾಟ್ ಅಶೋಕ ಚಾರಿಟೇಬಲ್ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ಅಸ್ಪೃಶ್ಯತಾ ನಿರ್ಮೂಲನಾ ವಿಚಾರಗೋಷ್ಠಿ, ಕಾರ್ಯಗಾರ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ ಅತನೂರ್ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರವೀಣ್ ಗುತ್ತೇದಾರ್ ಅವರು, “ಸಂವಿಧಾನವನ್ನು ಪ್ರತಿಯೊಬ್ಬರೂ ಅನುಸರಿಸಬೇಕು. ದೇಶದ ಭವಿಷ್ಯ ಸಂವಿಧಾನದಲ್ಲಿದೆ. ಎಲ್ಲರೂ ಕಾನೂನು ಚೌಕಟ್ಟಿನೊಳಗೆ ಬದುಕು ರೂಪಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಸಿದ್ದರಾಮಪ್ಪಗೌಡ ಪಾಟೀಲ್ ಕರಪತ್ರಗಳನ್ನು ಬಿಡುಗಡೆ ಮಾಡಿದರು. ಶರಣಬಸು ಕಲಬುರಗಿ ಅವರು ಸಂವಿಧಾನದ ಪೀಠಿಕೆ ಪ್ರತಿಗಳನ್ನು ಬಿಡುಗಡೆ ಮಾಡಿ ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮಹತ್ವವನ್ನು ತಿಳಿಸಿದರು.

ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ದೊಡ್ಡಮನಿ ಹಾಗೂ ಶಿಕ್ಷಕರಾದ ರಾಜೇ ಸಾಬ್ ಕಸಾಯಿ ಅವರು ಅಸ್ಪೃಶ್ಯತೆ ನಿವಾರಣೆ ಮತ್ತು ಸಮಾನತೆ ಕುರಿತು ಮಾರ್ಮಿಕ ಉಪನ್ಯಾಸ ನೀಡಿ ಎಲ್ಲರ ಮನಗೆದ್ದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಮಲ್ಲೇಶಪ್ಪ ಈರಣ್ಣ ಜಮಾದಾರ್, ಶಿಕ್ಷಕರಾದ ಈಶ್ವರ್ ಪೂಜಾರಿ, ರೂಬಿನಾ ನದಾಫ್, ಮಲ್ಲು ಚೌಹಾಣ್, ವಂದನಾ ಮೇಡಮ್, ಗುರು ಶಾಂತಪ್ಪ ಪವಾಡೆ, ಚಂದ್ರಕಾಂತ್ ಹೂಗಾರ್, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ ಪಾಲಕರಾದ ವಿಜಯಕುಮಾರ್, ರಾಜಲಕ್ಷ್ಮೀ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷೆ ಸರಸ್ವತಿ (ಮೇಘಾ) ದೊಡ್ಡಮನಿ, ನಾಗೇಶ್ ಕಾಂಬಳೆ, ಪಾಂಡುರಂಗ ಬಿಲ್ಕರ್ ನೀಲೂರ್ ಸೇರಿದಂತೆ ಗುರು ಹಿರಿಯರು, ಯುವಕರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲೆಯ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಭಾಗಣ್ಣ ಕಟ್ಟಿ ಕೋಳಕೂರ ಕಾರ್ಯಕ್ರಮವನ್ನು ನಿರೂಪಿಸಿದರು. ಅರುಣ್ ಕುಮಾರ್ ಇನಾಮ್ದಾರ್ ಸ್ವಾಗತಿಸಿದರು. ಶಶಿಕುಮಾರ್ ಶಹಬಾದ್ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button