ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ಶರಣು ಬಿ. ಹೊನ್ನಗೆಜಿ (ಪೂಜಾರಿ) ಅವರ ಸಂತಾಪ

ಕಲಬುರಗಿ: ವೃಕ್ಷಮಾತೆ ಎಂದು ಭಾರತದಾದ್ಯಂತ ಖ್ಯಾತರಾದ ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ಅನನ್ಯ ಪದವಿ ಮತ್ತು ಎಂ.ಎಸ್.ಡಬ್ಲ್ಯೂ ಸ್ನಾತಕೋತ್ತರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶರಣು ಬಿ. ಹೊನ್ನಗೆಜಿ (ಪೂಜಾರಿ) ಅವರು ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ.
114 ವರ್ಷಗಳ ಕಾಲ ಜನರಿಗೆ ಪ್ರೇರಣೆಯಾಗಿ ಬದುಕಿದ ತಿಮ್ಮಕ್ಕ ಅವರು ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿ ಜನಿಸಿ, ಮಕ್ಕಳಿಲ್ಲವೆಂಬ ನೋವನ್ನು ಮರಗಳ ಮೂಲಕ ಮರೆತವರು. ರಸ್ತೆಬದಿಯಲ್ಲಿ ಮರಗಳನ್ನು ನೆಟ್ಟು ಅವುಗಳನ್ನು ತಮ್ಮ ಮಕ್ಕಳಂತೆ ಸಾಕಿದ ಅವರು, ಪರಿಸರ ಸಂರಕ್ಷಣೆಯ ಜೀವಂತ ಸಂಕೇತವಾಗಿದ್ದರು.
ಇಂದು ಅವರು ನೆಟ್ಟ ಮರಗಳು ಅರಣ್ಯದಷ್ಟು ಹೆಮ್ಮರಗಳಾಗಿ, ಸಾವಿರಾರು ಜನರಿಗೆ ನೆರಳು ನೀಡುತ್ತಿವೆ.
ಪರಿಸರ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಅವರುಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಾರ್ಪಣೆ ಮಾಡಿತ್ತು.
“ತಿಮ್ಮಕ್ಕ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ, ಅಭಿಮಾನಿಗಳು, ಮತ್ತು ಸಾವಿರಾರು ವಿದ್ಯಾರ್ಥಿಗಳು ಈ ದುಃಖವನ್ನು ಭರಿಸುವ ಶಕ್ತಿ ಪಡೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.”-ಶರಣು ಬಿ. ಹೊನ್ನಗೆಜಿ (ಪೂಜಾರಿ)



