ಕಲಬುರಗಿಜಿಲ್ಲಾಸುದ್ದಿ

ಬಸ್‌ನಿಂದ ಬೆಂಕಿಗಾಹುತಿಯಾದ ಮಹಿಳೆಯನ್ನು ರಕ್ಷಿಸಿದ ಪೇದೆಗಳಿಗೆ ಸನ್ಮಾನ

ಚಿತ್ತಾಪುರ: ಠಾಣೆಯ ಪ್ರಕರಣವೊಂದರಲ್ಲಿ ಮಹಿಳೆಯನ್ನು ಪತ್ತೆ ಮಾಡಿಕೊಂಡು ಬೆಂಗಳೂರಿನಿಂದ ಕಲಬುರಗಿ ಕಡೆಗೆ ಖಾಸಗಿ ಬಸ್‌ನಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ ಕರ್ತವ್ಯದಲ್ಲಿದ್ದ ಪೇದೆಗಳಾದ ಅನೀಲಕುಮಾರ ಮತ್ತು ಪುಷ್ಪಾವತಿ ಅವರು ಸಾಹಸ ಪ್ರದರ್ಶಿಸಿ ತಮ್ಮ ಹಾಗೂ ಮಹಿಳೆಯ ಪ್ರಾಣವನ್ನು ರಕ್ಷಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಚಾಲಕನ ನಿರ್ಲಕ್ಷ್ಯದಿಂದಾಗಿ ಬೆಂಗಳೂರಿನಿಂದ ತುಮಕೂರಿನ ಸಮೀಪಕ್ಕೆ ಬಂದಾಗ ರಾತ್ರಿ ಸುಮಾರು 12.30ರ ವೇಳೆಗೆ ಬಸ್ ಅಪಘಾತಕ್ಕೊಳಗಾಗಿ ಬೆಂಕಿಗಾಹುತಿಯಾಗಿದೆ. ಈ ವೇಳೆ ಪ್ರಾಣಾಪಾಯದ ಪರಿಸ್ಥಿತಿಯಲ್ಲಿಯೂ ತಮ್ಮ ಕರ್ತವ್ಯವನ್ನು ಲೆಕ್ಕಿಸದೇ, ಕಾಣೆಯಾದ ಮಹಿಳೆಯೊಂದಿಗೆ ಕಿಟಕಿಯ ಮೂಲಕ ಹೊರಗೆ ಜಿಗಿದು ಸುರಕ್ಷಿತವಾಗಿ ಪಾರಾಗಿ ಪ್ರಾಣ ಉಳಿಸಿಕೊಂಡಿದ್ದಾರೆ.

ಕರ್ತವ್ಯನಿಷ್ಠೆ ಹಾಗೂ ಸಾಹಸ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಅನೀಲಕುಮಾರ ಮತ್ತು ಪುಷ್ಪಾವತಿ ಅವರನ್ನು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಡಿವೈಎಸ್‌ಪಿ ಶಂಕರಗೌಡ ಪಾಟೀಲ್ ಅವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಿಪಿಐ ವನಂಜಕರ್, ಪಿಎಸ್‌ಐ ಮಂಜುನಾಥ ರೆಡ್ಡಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button