ಜಾತಿ ಗಣತಿ ಅವಧಿ ವಿಸ್ತರಣೆ ಅಗತ್ಯ: ದತ್ತಾತ್ರೇಯರೆಡ್ಡಿ ಅಭಿಪ್ರಾಯ
ಸಮೀಕ್ಷೆಯ ಲೋಪ ಪರಿಶೀಲನೆಗೆ ಅಖಿಲ ಭಾರತೀಯ ಕೋಲಿ ಸಂಘದ ರಾಜ್ಯಾಧ್ಯಕ್ಷ ದತ್ತಾತ್ರೇಯರೆಡ್ಡಿ ಭೇಟಿ

ಯಾದಗಿರಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ 2025ರ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಸಮೀಕ್ಷೆಯಲ್ಲಿ ಕಂಡುಬಂದ ಲೋಪ–ದೋಷಗಳನ್ನು ಗಮನಿಸಿದ ಅಖಿಲ ಭಾರತೀಯ ಕೋಲಿ ಸಮಾಜ ನವದೆಹಲಿ ರಾಜ್ಯ ಘಟಕದ ರಾಜ್ಯಾಧ್ಯಕ್ಷ ದತ್ತಾತ್ರೇಯರೆಡ್ಡಿ ಅವರು ಗಣಪುರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗಣಪುರದ ಆಂಜನೇಯ ದೇವಾಲಯ ಆವರಣದಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಅವರು, ಸಮೀಕ್ಷೆಯಲ್ಲಿ ಜಾಗೃತಿಯಿಂದ ಮಾಹಿತಿ ನೀಡುವಂತೆ ಗ್ರಾಮಸ್ಥರಿಗೆ ಸೂಚಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ನೆಟ್ವರ್ಕ್ ಸಮಸ್ಯೆ ಹಾಗೂ ರೈತರು ಬೆಳಿಗ್ಗೆಯಿಂದ ಸಂಜೆವರೆಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದರಿಂದ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ತೊಂದರೆ ಉಂಟಾಗಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಸಮೀಕ್ಷೆ ಅವಧಿಯನ್ನು ಕನಿಷ್ಠ 15 ದಿನಗಳವರೆಗೆ ವಿಸ್ತರಿಸಲು ಸರ್ಕಾರಕ್ಕೆ ಒತ್ತಾಯಿಸಿದರು. ಇದರಿಂದಾಗಿ ರೈತರು, ಕಾರ್ಮಿಕರು ಮತ್ತು ಗ್ರಾಮಸ್ಥರು ಸಮೀಕ್ಷೆಯಲ್ಲಿ ಸಂಪೂರ್ಣವಾಗಿ ಭಾಗಿಯಾಗಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ, ಆಂಜನೇಯ ಸಂತಪ್ಪನೋರ್, ಪವನ, ವಿಷ್ಣುಕಾಂತ್ ಪಾಟೀಲ್, ಶಂಕರ್ ಡೀಲರ್, ನರಸಪ್ಪ ಸಕ್ರಪ್ಪನೋರ್, ಬಸವರಾಜ್ ಟೆಂಟ್, ಭೀಮಶಂಕರ್ ಬಂಕ್ಲಿ, ಚನ್ನಬಸಣ್ಣ ಬಾಲಪ್ಪನೋರ್, ಭೀಮರಾಯ ಬಾಲಪ್ಪನೋರ್, ಭೀಮರಾಯ ಮಣಿಗೇರಿ, ಮಾದೇವ್ ರಾಯಪ್ನೋರ್, ನಾಗೇಶ್ ರಾಯ್ಪನವರ್, ಮಲ್ಲಪ್ಪ ಸಂತಪ್ಪನವರ್, ತಾಯಪ್ಪ ನವಂಬರ್, ಶಂಕರ್ ಬಾಲಪ್ಪನೋರ್, ಸಾಬಣ್ಣ ಭಜಂತ್ರಿ, ದಾನಪ್ಪ ಭಜಂತ್ರಿ, ಬನ್ನಪ್ಪ ಪೂಜಾರಿ, ಮಾದೇವ್ ಗುಡ್ಡಪಳ್ಳಿ, ಭೀಮಶೆಪ್ಪ ಹೊಸೂಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.