“ಪ್ರಿಯಾಂಕ ಖರ್ಗೆ 47ನೇ ಜನ್ಮದಿನ: ಚಂದ್ರಶೇಖರ ಹಡಪದ ನೇತೃತ್ವದಲ್ಲಿ ಕಲಬುರಗಿಯಲ್ಲಿ ರಕ್ತದಾನ ಶಿಬಿರ”

ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಐಟಿ–ಬಿಟಿ ಸಚಿವರಾದ ಪ್ರಿಯಾಂಕ ಖರ್ಗೆ ಅವರ 47ನೇ ಜನ್ಮದಿನದ ಪ್ರಯುಕ್ತ, ಶ್ರೀ ಪ್ರಿಯಾಂಕ ಖರ್ಗೆ ಅಭಿಮಾನಿ ಬಳಗದ ವತಿಯಿಂದ ನಗರದ ಸುರಕ್ಷಾ ಬ್ಲಡ್ ಬ್ಯಾಂಕ್‌ನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಯುವ ಮುಖಂಡ ಚಂದ್ರಶೇಖರ ಹಡಪದ ತೋನಸನಹಳ್ಳಿ (ಟಿ) ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯುವಕರ ಉತ್ಸಾಹಭರಿತ ಭಾಗವಹಿಸುವಿಕೆ ಗಮನಸೆಳೆದಿತು.
ಜನ್ಮದಿನದ ಸಂಭ್ರಮವನ್ನು ಸಮಾಜಮುಖಿ ಚಟುವಟಿಕೆಗೆ ರೂಪಾಂತರಗೊಳಿಸಿದ ಈ ರಕ್ತದಾನ ಶಿಬಿರದಲ್ಲಿ ಹಲವಾರು ಯುವ ಕಾರ್ಯಕರ್ತರು ಮಾನವೀಯ ಸೇವೆಗೆ ಕೈಜೋಡಿಸಿದರು.
ಕಾರ್ಯಕ್ರಮದಲ್ಲಿ ಪ್ರಕಾಶ್ ಅವರಾದಕರ್, ಹರ್ಷ ಮಾಲಾಕ್, ಅಮೋಲ್, ವಿನೋದ, ಆಕಾಶ, ಅವಿನಾಶ್ ಗಾಯಕವಾಡ, ರಾಜರತ್ನ ಜೋಷಿ, ಪ್ರಸನ್ನ ಮೇಲಮನಿ, ಕೇದಾರ್ ಡಿಪ್ಟಿ, ರಾಕೇಶ್ ಧನ್ನಿ, ಅಜಯ ಗಾಯಕವಾಡ, ನಾಗರಾಜ ಕೋಟೆ, ದೀಪಕ್ ಒಂಟಿ, ಪವನ್ ಇನಾಮದರ್, ಗಣೇಶ್ ಬಿದ್ದಾಪುರ, ದಿಲೀಪ್ ಕಿರಸಾವಳಗಿ, ಗೌತಮ್ ಕೋವಿ, ಧರ್ಮರತ್ನ ಮುದ್ದಡಗಿ, ವಿನೋದ ಅಂಬಲಗಾ, ರಮೇಶ್ ಕರಹರಿ, ರಮೇಶ್ ಕವಲಗಾ, ಸುನಿಲ್ ನಂದುರಕರ್ ಸೇರಿದಂತೆ ಅನೇಕರು ಭಾಗವಹಿಸಿದರು.
ಸಮಾಜ ಸೇವೆಗೆ ಯುವಕರಿಂದ ಸಿಕ್ಕ ಪ್ರತಿಕ್ರಿಯೆ ಕಾರ್ಯಕ್ರಮಕ್ಕೆ ವಿಶೇಷ ಸೊಬಗು ಹೆಚ್ಚಿಸಿತು.



