ರೈತ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ

ಚಿತ್ತಾಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಚಿತ್ತಾಪುರ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಮಂಗಳವಾರ ಪಟ್ಟಣದಲ್ಲಿ ನೇಮಕ ಮಾಡಲಾಯಿತು.
ಸಂಘದ ಗೌರವ ಅಧ್ಯಕ್ಷರಾಗಿ ಸುಭಾಷಚಂದ್ರ ಬಿ. ಸಾಲಿ, ಉಪಾಧ್ಯಕ್ಷರಾಗಿ ಚನ್ನಬವಸಪ್ಪ ಎಸ್. ತಳವಾರ ಹಾಗೂ ಕಾರ್ಯದರ್ಶಿಯಾಗಿ ಹಣಮಂತ ಬಿ. ಪರಮನೋರ ಅವರನ್ನು ನೇಮಕ ಮಾಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಅಧ್ಯಕ್ಷ ರಾಜಕುಮಾರ ಯರಗೋಳ, ‘ಕರ್ನಾಟಕದ ರೈತರ ಉಳಿವು, ಅಭಿವೃದ್ಧಿ ಹಾಗೂ ಸ್ವಾಭಿಮಾನಿ ರೈತರ ರಕ್ಷಣೆಗಾಗಿ ಸಂಘವು ನಿರಂತರವಾಗಿ ಹೋರಾಟ ನಡೆಸುತ್ತಿದೆ. ನೂತನ ಪದಾಧಿಕಾರಿಗಳು ತಮಗೆ ನೀಡಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿ, ಸ್ಥಳೀಯ ರೈತರ ಸಮಸ್ಯೆಗಳನ್ನು ಗುರುತಿಸಿ, ನ್ಯಾಯಬದ್ಧವಾಗಿ ಪರಿಹಾರ ದೊರಕಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು’ ಎಂದು ಹೇಳಿದರು.
ತಾಲ್ಲೂಕು ಕೋಲಿ ಸಮಾಜದ ಯುವ ಘಟಕದ ಅಧ್ಯಕ್ಷ ಮಹೇಶ್ ಸಾತನೂರ, ರಮೇಶ ದಿಮಾಕ ರಾಜೋಳ, ಸಾಬಣ್ಣ ರಾಜೋಳ, ತಿಪ್ಪಣ್ಣ ರಾಜೋಳ, ಖದೀರ ಪಾಶಾ ರಾಜೋಳ, ಸಿದ್ದಪ್ಪ ಬೊಮ್ಮನಹಳ್ಳಿ, ಮಲ್ಲಿಕಾರ್ಜುನ ತಳವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.



