ಕಲಬುರಗಿಜಿಲ್ಲಾಸುದ್ದಿ

ಡಾ. ಸಂತೋಷ್ (ಡಿಟಿ) ಮತ್ತು ರಾಮ್ ಅವತಾರ್ ಕೋಲಿ ಅವರಿಗೆ ಸನ್ಮಾನ

ಕಲಬುರಗಿ: ಸಮಾಜ ಸೇವೆ, ಸಂಘಟನೆ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿರುವ ಡಾ. ಸಂತೋಷ್ (ಡಿಟಿ), ಐಐಟಿ ಖರಗ್ಪುರ (ಡೀನ್, ಸಿ.ಯು.ಟಿ.ಎಂ, ಒಡಿಶಾ) ಹಾಗೂ ಉತ್ತರ ಪ್ರದೇಶದ ಹಿರಿಯ ಸಮಾಜ ಮುಖಂಡ ರಾಮ್ ಅವತಾರ್ ಕೋಲಿ ಅವರಿಗೆ ಅಖಿಲ ಭಾರತೀಯ ಕೋಲಿ ಸಮಾಜ ಮತ್ತು ರಾಷ್ಟ್ರೀಯ ಸಮಾಜ ಪಕ್ಷದ ವತಿಯಿಂದ ಭವ್ಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅಖಿಲ ಭಾರತೀಯ ಕೋಲಿ ಸಮಾಜ ಹಾಗೂ ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದ ಶಿವಲಿಂಗಪ್ಪ ಕಿನ್ನೂರು ಅವರು, ದೇಶದ ವಿವಿಧ ರಾಜ್ಯಗಳಲ್ಲಿ ಕೋಲಿ ಸಮಾಜದ ಏಕತೆ, ಸಾಮಾಜಿಕ ನ್ಯಾಯ, ಹಕ್ಕುಗಳ ರಕ್ಷಣೆ ಹಾಗೂ ಶೈಕ್ಷಣಿಕ–ಆರ್ಥಿಕ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಡಾ. ಸಂತೋಷ್ (ಡಿಟಿ) ಮತ್ತು ರಾಮ್ ಅವತಾರ್ ಕೋಲಿ ಅವರ ಸೇವೆ ಅತ್ಯಂತ ಶ್ಲಾಘನೀಯವಾಗಿದೆ. ಇವರಂತಹ ನಾಯಕರು ಸಮಾಜಕ್ಕೆ ಸರಿಯಾದ ದಿಕ್ಕು ತೋರಿಸುವ ಶಕ್ತಿ ಹೊಂದಿದ್ದಾರೆ ಎಂದು ಪ್ರಶಂಸಿಸಿದರು.

ರಾಷ್ಟ್ರೀಯ ಸಮಾಜ ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀಮಂತ ಮಾವನೂರ ಮಾತನಾಡಿ, ಕೋಲಿ ಸಮಾಜದ ಬೇಡಿಕೆಗಳು, ಹೋರಾಟಗಳು ಹಾಗೂ ಸಂಘಟಿತ ಶಕ್ತಿಯಾಗಿ ಸಮಾಜವನ್ನು ಮುನ್ನಡೆಸುವಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಸಮಾಜದ ಯುವ ಪೀಳಿಗೆಗೆ ಪ್ರೇರಣೆಯಾಗುವಂತಹ ಕಾರ್ಯಗಳನ್ನು ಮುಂದುವರೆಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಡಾ. ಸಂತೋಷ್ (ಡಿಟಿ) ಮತ್ತು ರಾಮ್ ಅವತಾರ್ ಕೋಲಿ ಅವರಿಗೆ ಹಾರ, ಶಾಲು ಹಾಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಅವರು, ಈ ಸನ್ಮಾನವನ್ನು ಸಂಪೂರ್ಣ ಕೋಲಿ ಸಮಾಜಕ್ಕೆ ಅರ್ಪಿಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಸಮಾಜದ ಹಕ್ಕು, ಗೌರವ ಹಾಗೂ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಹೋರಾಟ ಮುಂದುವರೆಸುವುದಾಗಿ ಭರವಸೆ ನೀಡಿದರು.

ಈ ಸಮಾರಂಭದಲ್ಲಿ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು, ರಾಷ್ಟ್ರೀಯ ಸಮಾಜ ಪಕ್ಷದ ಮುಖಂಡರು, ಸಮಾಜದ ಗಣ್ಯರು, ಯುವಕರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದ ಶಿವಲಿಂಗಪ್ಪ ಕಿನ್ನೂರು, ಜಿಲ್ಲಾಧ್ಯಕ್ಷರಾದ ಶ್ರೀಮಂತ ಮಾವನೂರ, ಬಸವರಾಜ್ ರಾವುರ, ರಮೇಶ ಶಹಾಬಾದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button