ಜ.11ರಂದು ಸರ್ಕಾರಿ ನಿವೃತ್ತ ಅಲ್ಪಸಂಖ್ಯಾತರ ನೌಕರರ ಸಂಘದಿಂದ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಾಧಕರ ಸನ್ಮಾನ

ಕಲಬುರಗಿ:ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ಅಲ್ಪಸಂಖ್ಯಾತರ ನೌಕರರ ಸಂಘದ ವತಿಯಿಂದ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಜನವರಿ 11ರಂದು ಸಾಯಂಕಾಲ 5.30ಕ್ಕೆ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಸೈಯದ್ ನಜೀರುದ್ದೀನ ಮುತ್ತವಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಶಾಸಕ ಅಲ್ಲಮಪ್ರಭು ಪಾಟೀಲ ಅವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಬಸವರಾಜ ದೇಶಮುಖ, ಕರ್ನಾಟಕ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪಿ, ಪಿಡಬ್ಲ್ಯುಡಿ ಇಲಾಖೆಯ ಸುಪರಿಂಟೆಂಡೆಂಟ್ ಎಂಜಿನಿಯರ್ ಅಮೀನ ಮುಕ್ತಾರ ಅಹ್ಮದ್ ಅವರು ಆಗಮಿಸಲಿದ್ದಾರೆ.
ಗೌರವ ಅತಿಥಿಗಳಾಗಿ ಹಿರಿಯ ಕಾಂಗ್ರೆಸ್ ಮುಖಂಡ ವಾಹಜ್ ಬಾಬಾ, ಸಾಮಾಜಿಕ ಕಾರ್ಯಕರ್ತ ಹಜರತ್ ಸೈಯದ್ ಷಾ ಮುಸ್ತಫಾ ಖಾದರಿ, ಸಜ್ಜಾದೆ ನಷೀನ್ ಮುತ್ತವಲ್ಲಿ, ರೋಜಾ-ಎ-ರಹೆಮಾನಿಯಾ ಮಳಖೇಡ್, ಭಾಯಿ ದೀಪಸಿಂಗ್ (ಗ್ರಂಥಿ ಗುರುದ್ವಾರ ಕಲಬುರಗಿ) ಹಾಗೂ ಮಹೇಶ ಸಿ. ಹುಬ್ಬಳ್ಳಿ ಭಾಗವಹಿಸಲಿದ್ದಾರೆ.
ಅತಿಥಿಗಳಾಗಿ ಅಸದ್ ಅನ್ಸಾರಿ, ಡಾ. ಎಂ.ಎಂ. ಬೇಗ್, ಡಾ. ಅಸ್ಲಂ ಸಯಿದ್, ಮೊಹ್ಮದ್ ಅಜಿಮುದ್ದೀನ ಹಾಗೂ ಶಿರಣಿ ಫರೋಷ ಅವರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸೈಯದ್ ನಜೀರುದ್ದೀನ ಮುತ್ತವಲ್ಲಿ ವಹಿಸಲಿದ್ದಾರೆ.
ಸಂಘಕ್ಕೆ ಸಂಬಂಧಿಸಿದ ಪ್ರಮುಖ ಟಿಪ್ಪಣಿಗಳನ್ನು ಉಪಾಧ್ಯಕ್ಷ ಮೊಹ್ಮದ್ ಮೀನಾಜುದ್ದೀನ ಮಂಡಿಸಲಿದ್ದು, ವಂದನಾರ್ಪಣೆಯನ್ನು ಮಹ್ಮದ್ ಮುಜಿಬ್ ಅಲಿಖಾನ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಸಂಘದ ಕಾರ್ಯದರ್ಶಿ ನವಾಬ್ಖಾನ್ ಅವರು ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಸೈಯದ್ ಶಾಹ ಹಸನ್ ಖಾದರಿ ಹಾಗೂ ನಜೀದ್ ಬಾಬಾ, ಪೂಜ್ಯಶ್ರೀ ಷ.ಬ್ರ. ಡಾ. ರೇವಣಸಿದ್ದ ಶಿವಾಚಾರ್ಯರು, ಐ.ಆರ್. ಸ್ಟ್ಯಾನಿ ಲೊಬೊ, ಶಂಕರ ಕೋಡ್ಲಾ, ಡಾ. ಖಾಜಿ ಹಮೀದ್ ಫೈಸಲ್ ಸಿದ್ದಿಕಿ, ಡಾ. ದೇವೇಂದ್ರಪ್ಪ ಚಿಂಚೋಳಿ, ಗುರಮಿಟ್ ಸಿಂಗ್ ಸಲುಜಾ, ಸಂಜಯಕುಮಾರ ಮಾಕಲ, ವೈಜಾನಾಥ ಝಳಕಿ (ವಕೀಲರು), ಅದ್ನಾನ್ ವಜೀರ್, ಮೊದೀನ್ ಪಟೇಲ್ ಅಣಬಿ ಹಾಗೂ ಚಂದ್ರಶೇಖರ ಬಿರಾದಾರ ಅವರನ್ನು ಸನ್ಮಾನಿಸಲಾಗುವುದು.
ಅಲ್ಲದೆ, ಜೇವರ್ಗಿ ಪಟ್ಟಣದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಾಲೆಯ ಆರು ವಿದ್ಯಾರ್ಥಿಗಳು ರಾಜ್ಯಮಟ್ಟದ ವಿಜ್ಞಾನ ಪ್ರದರ್ಶನದಲ್ಲಿ ಭಾಗವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಪ್ರಯುಕ್ತ ವಿದ್ಯಾರ್ಥಿಗಳಾದ ಮುಸ್ಕಾನ್, ಸೈಯದಾ ಜೋಯಾ, ಸಾದೀಖಾ, ಪ್ರಿಯಾಂಕಾ, ಅಬ್ದುಲ್ ಅಜೀಜ್ ಹಾಗೂ ಹಸನೈನ್ ಮತ್ತು ಅವರ ಮಾರ್ಗದರ್ಶಕರಾದ ಮೊಹ್ಮದ್ ಐತೆಶಾಮ್ ಉಲ್ ಹಸನ್ ಅವರನ್ನು ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



