ಕಲಬುರಗಿಜಿಲ್ಲಾಸುದ್ದಿ

ಫೆ.23ಕ್ಕೆ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ: ಸಂತೋಷ ತಳವಾರ

ತಳವಾರರ ಎಸ್.ಟಿ ಹಕ್ಕು ಕಸಿದುಕೊಳ್ಳುವ ಆಡಳಿತಕ್ಕೆ ಎಚ್ಚರಿಕೆ

ಕೇಂದ್ರ ಸರ್ಕಾರದ ಗೆಜೆಟ್ ಪ್ರಕಾರ ಪರಿಶಿಷ್ಟ ಪಂಗಡ ಪಟ್ಟಿಯ ಕ್ರ.ಸಂ. 38ರಲ್ಲಿ ಸೇರಬೇಕಾದ ತಳವಾರ ಜಾತಿಯನ್ನು ಬೇರೆ ಬೇರೆ ಪರಿವಾರಗಳಾಗಿ ತಪ್ಪಾಗಿ ದಾಖಲಿಸಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಅವರ ಮೇಲೆ ಪ್ರಕರಣ ದಾಖಾಲೆ ಮಾಡಬೇಕು.- ಸಂತೋಷ ತಳವಾರ, ಅಧ್ಯಕ್ಷರು ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜದ ಅಫಜಲಪುರ.

ಅಫಜಲಪೂರ : ತಳವಾರ ಸಮಾಜದ ನೈಜ ಸದಸ್ಯರಿಗೆ ಪರಿಶಿಷ್ಟ ಪಂಗಡ (ಎಸ್.ಟಿ) ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಉಂಟಾಗುತ್ತಿರುವ ಆಡಳಿತಾತ್ಮಕ ವಿಳಂಬ ಮತ್ತು ಗೊಂದಲವನ್ನು ಖಂಡಿಸಿ ಫೆಬ್ರವರಿ 23ರಂದು ಅಫಜಲಪೂರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜದ ತಾಲೂಕು ಅಧ್ಯಕ್ಷ ಸಂತೋಷ ತಳವಾರ ತಿಳಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯ ಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ 88(ಎಚ್) ಅಡಿಯಲ್ಲಿ ಗುರುತಿಸಲ್ಪಟ್ಟಿರುವ ತಳವಾರ ಜಾತಿಗೆ ಕುಲಶಾಸ್ತ್ರೀಯ ಅಧ್ಯಯನದ ಆಧಾರದ ಮೇಲೆ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಮಾನ್ಯತೆ ದೊರೆತಿದ್ದರೂ, ತಾಲೂಕು ಮಟ್ಟದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿ ನೈಜ ತಳವಾರರಿಗೆ ಎಸ್.ಟಿ ಪ್ರಮಾಣ ಪತ್ರ ನೀಡುವುದನ್ನು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ತಾಲೂಕು ಬಿಜೆಪಿ ಎಸ್.ಟಿ ಮೋರ್ಚಾ ಅಧ್ಯಕ್ಷ ಶರಣು ದಿವಾಣಜಿ, ಮಾತನಾಡಿ ಸರಕಾರಿ ನೌಕರರಿಗೆ ನೀಡಿರುವ ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ಸೇವಾ ಪುಸ್ತಕದಲ್ಲಿ ತಿದ್ದುಪಡಿ ಮಾಡಿ ಮುಂಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.

ವಾಲ್ಮೀಕಿ ನಿಗಮ ಮಂಡಳಿಯಲ್ಲಿನ ರೂ.187 ಕೋಟಿ ಅವ್ಯವಹಾರದ ಕುರಿತು ಸಂಪೂರ್ಣ ತನಿಖೆ ನಡೆಸಿ ಸಂಬಂಧಿತ ಅಧಿಕಾರಿಗಳನ್ನು ವಜಾಗೊಳಿಸಬೇಕು. ಮಹಾಂತೇಶ ಗೌರ ಮಾತನಾಡಿ, ಸರ್ಕಾರದ ಗೊಂದಲಕಾರಿ ಆದೇಶಗಳಿಂದ ಸಮಾಜದಲ್ಲಿ ಕಲಹ ಉಂಟಾಗಿದ್ದು, 2020ರ ಆದೇಶಗಳಿದ್ದರೂ ಸ್ಪಷ್ಟನೆ ನೀಡದಿರುವುದು ವಿಷಾದನೀಯವಾಗಿದೆ ಎಂದರು.

ಫೆಬ್ರವರಿ 23ರಂದು ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಳವಾರ ಸಮಾಜದ ಬಂಧುಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂತೋಷ ತಳವಾರ, ಶರಣು ದಿವಾಣಜಿ, ಮಹಾಂತೇಶ ಗೌರ, ಪುಂಡಲೀಕ್ ಆನೂರ, ಶರಣು ನಯ್ಕೋಡಿ, ಸಂತೋಷ ಗೂಳನೂರ, ಮರೆಪ್ಪ ಜಮಾದಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button