ಕಲಬುರಗಿಜಿಲ್ಲಾಸುದ್ದಿ
ಕಲ್ಲಹಂಗರಗಾ ಮಠಕ್ಕೆ ಜಿ.ಕೆ.ಎಸ್. ಲಕ್ಕಪ್ಪ ಪೂಜಾರಿ ಭೇಟಿ; ಪೂಜ್ಯರಿಂದ ಆಶೀರ್ವಾದ

ಕಲಬುರಗಿ:ಬೆಂಗಳೂರುದಿಂದ ಶನಿವಾರ ಬೆಳಿಗ್ಗೆ ಕಲಬುರಗಿಗೆ ಆಗಮಿಸಿದ ಆಲ್ ಇಂಡಿಯಾ ಜನರಕ್ಷಾ ಪಾರ್ಟಿ (ರಾಷ್ಟ್ರೀಯ) ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಿ.ಕೆ.ಎಸ್. ಲಕ್ಕಪ್ಪ ಪೂಜಾರಿ ಅವರು ತಾಲ್ಲೂಕಿನ ಕಲ್ಲಹಂಗರಗಾ ಗ್ರಾಮದ ಶ್ರೀ ಯಲ್ಲಾಲಿಂಗ ಮಹಾರಾಜರ ಕಲ್ಯಾಣ ಕಡಿಮಠಕ್ಕೆ ಭೇಟಿ ನೀಡಿದರು.
ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಪೂಜ್ಯ ಶ್ರೀಗಳ ದರ್ಶನ ಪಡೆದು ಆಶೀರ್ವಾದ ಪಡೆದರು. ಮಠದ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಕುರಿತು ಪೂಜ್ಯರೊಂದಿಗೆ ಸಂವಾದ ನಡೆಸಿದರು.
ಈ ವೇಳೆ ಶ್ರೀ ಅಮರೇಶ ಮುತ್ಯಾ ಅವರು ಲಕ್ಕಪ್ಪ ಪೂಜಾರಿ ಹಾಗೂ ಪಕ್ಷದ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಸಿದ್ದು (ಗೌತಮ) ಎಚ್. ಜಮಾದಾರ ಅವರನ್ನು ಪುಷ್ಪಮಾಲೆ ಹಾಕಿ, ಶಾಲು ಹೊದಿಸಿ ಸನ್ಮಾನಿಸಿದರು. ಕಾರ್ಯಕ್ರಮವು ಸರಳವಾಗಿ ನೆರವೇರಿತು.
ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಾದ ದಸ್ತಗಿರ ಸಾಬ್ ನದಾಫ್, ಶೇಖರ ಪೂಜಾರಿ, ಶರಣು ಪೂಜಾರಿ, ಹುಲೆಪ್ಪ ನಾಯಿಕೋಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




