ಚಿತ್ರ ಸುದ್ದಿ
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾಗಿ ಅಭಿನಂದಿಸಿದ ದಲಿತ ಮುಖಂಡರು

ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಪ್ರಿಯಾಂಕ್ ಖರ್ಗೆ ಅವರನ್ನು ಅಫಜಲಪುರ ತಾಲೂಕಿನ ದಲಿತ ಮುಖಂಡರು ಬೆಂಗಳೂರಿನ ಕಚೇರಿಯಲ್ಲಿ ಭೇಟಿ ಮಾಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮುಖಂಡರು ಸಚಿವರಿಗೆ ಶುಭಾಶಯಗಳನ್ನು ಸಲ್ಲಿಸಿ, ಸಮಾಜದ ವಿವಿಧ ಸಮಸ್ಯೆಗಳು ಹಾಗೂ ಜನಪರ ವಿಚಾರಗಳ ಕುರಿತು ಚರ್ಚಿಸಿದರು. ನೂತನ ಜವಾಬ್ದಾರಿಯನ್ನು ವಹಿಸಿಕೊಂಡಿ ರುವ ಸಚಿವರು ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಲಿ ಎಂದು ಮುಖಂಡರು ಹಾರೈಸಿದರು.
ಭೇಟಿ ವೇಳೆ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ರವಿ ಗೌರ್, ಸಮಾಜದ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ, ಎಸ್ಸಿ-ಎಸ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಲಿಂಗ ಅಂಗಡಿ, ಡಿಎಸ್ಎಸ್ ಉಪಾಧ್ಯಕ್ಷ ಶಾಮ ಹೊಸ್ಮನಿ, ಭಾಗಣ್ಣ ಕೊಳ್ಳಿ ಹಾಗೂ ರಾಹುಲ್ ಅಣ್ಣೇನವರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.


