ಬಿಜೆಪಿ ಯವರು ತಮ್ಮನ ತಾವು ವಿಮರ್ಶೆ ಮಾಡಿಕೊಳ್ಳಲಿ : ಎಸ್ ಎಸ್ ಸಲಗರ
ಹೊಂದಾಣಿಕೆ ರಾಜಕಿಯ ಜೆಡಿಎಸ್ ನವರದಲ್ಲ ಅದು ಬಿಜೆಪಿಗರದ್ದು , ನರಿಬೋಳ ಗೌಡರ ಮೇಲಿನ ಆರೋಪ ಸರಿಯಲ್ಲ.

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜೆಡಿಎಸ್ ಗೆ ಸಪೋರ್ಟ್ ಮಾಡಲು ಬಿಜೆಪಿ ಜಿಲ್ಲಾ ನಾಯಕರಿಗೆ ತಿಳಿಸದರು ಕೂಡ ಅವರು ಮೈತ್ರಿ ಧರ್ಮವನ್ನು ಪಾಲಿಸಿಲ್ಲ. ಇವರು ಸುಮ್ಮನೆ ಜೆಡಿಸ್ ಬಗ್ಗೆ ಆರೋಪ ಮಾಡುತ್ತಿದ್ದಾರೆ ಇದರ ಬಗ್ಗೆ ತಾಲೂಕಿನ ಜನರಿಗೆ ತಿಳಿದಿದೆ ಎಂಬುವುದನ್ನ ಬಿಜೆಪಿಗರು ನೆನಪಿಡಬೇಕು. ತಾಲೂಕಿನ ಜನರು ಸತ್ಯವನ್ನು ನಂಬುತಾರೆ ವಿನಹ ಸುಳ್ಳನಲ್ಲ.-ಗೊಲ್ಲಾಳಪ್ಪ ಕಡಿ ಜೆಡಿಎಸ್ ಯಡ್ರಾಮಿ ತಾಲೂಕ ಅಧ್ಯಕ್ಷ.
ಜೇವರ್ಗಿ : ತಾಲೂಕಿನಲ್ಲಿ ಕಾಂಗ್ರೆಸ್ ಗೆ ವಿರೋಧ ಪಕ್ಷದವರು ಅಂತ ಇದ್ದರೆ ಅದು ಜೆಡಿಎಸ್ ಮಾತ್ರ. ನಮ್ಮ ಚುನಾವಣೆ ಹಾಗೂ ಪೈಪೋಟಿ ಕಾಂಗ್ರೆಸ್ ಜೋತೆಗೆ ಹೋರೆತು ಬಿಜೆಪಿಯ ಜೋತೆಗಲ್ಲ. ಸುಮ್ಮನೆ ಬಿಜೆಪಿಯವರು ನಮ್ಮ ಗೌಡ್ರ ಕುಟುಂಬದ ಮೇಲೆ ಆರೋಪ ಮಾಡುತ್ತಿದ್ದರೆ ಕಾಂಗ್ರೆಸ್ ಜೋತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು. ಬಿಜೆಪಿಯವರು ತಮ್ಮನ ತಾವು ವಿಮರ್ಶೆ ಮಾಡಿಕೊಳ್ಳಲಿ ಎಂದು ಜೆಡಿಎಸ್ ತಾಲೂಕ ಮುಖಂಡ ಎಸ್ ಎಸ್ ಸಲಗರ ವಾಗ್ದಾಳಿ ನಡೆಸಿದರು.
ಪಟ್ಟಣದ ಬಸವೇಸ್ವರ ವೃತ್ತದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು.
ತಾಲೂಕಿನಲ್ಲಿ ಕಾಂಗ್ರೆಸ್ ಗೆ ಪೈಪೋಟಿ ಮಾಡುವ ಪಕ್ಷ ನಮ್ಮ ಜೆಡಿಎಸ್ ಮಾತ್ರ. ಸಂಸತ್ ಚುನಾವಣೆಯಿಂದ ಹಿಡಿದು ಇಲ್ಲಿಯವರೆಗೂ ಕೂಡ ಮೈತ್ರಿ ಧರ್ಮವನ್ನು ಪಾಲನೆ ಮಾಡುವುದು ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡರು ಮಾಡಿಲ್ಲ ಹಾಗೂ ಕಾಂಗ್ರೆಸ್ ಜೋತೆಗೆ ಹೊಂದಾಣಿಕೆ ರಾಜಕಿಯ ಮಾಡುತ್ತಿದೆ ಎಂಬ ಆರೋಪವನ್ನು ಬಿಜೆಪಿ ಮುಖಂಡರು ಮಾಡಿದ್ದಾರೆ. ಸಂಸತ್ ಚುನಾವಣೆಯಲ್ಲಿ ಯಾವ ಯಾವ ಜಿಲ್ಲಾ ಪಂಚಾಯತ್ ನಲ್ಲಿ ಬಿಜೆಪಿ ಲಿಡ್ ಕೋಟ್ಟಿದೆ ಎಂಬುವುದನ್ನ ಸ್ವತ ತಾವೆ ನೋಡಲಿ. ತಾಲೂಕಿನಿಂದ ಸುಮಾರು 5 ಸಾವಿರ ಹೆಚ್ಚಿನ ಮತಗಳನ್ನ ಸಂಸತ್ ಚುನಾವಣೆಯಲ್ಲಿ ನೀಡಲಾಗಿದೆ ಅದಕ್ಕೆ ಜೆಡಿಎಸ್ ಪ್ರಮುಖ ಕಾರಣ ಎಂಬುವುದು ಕೆಲವರು ಮರೆತ್ತಿದ್ದಾರೆ.
ಡಿಸಿಸಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎನ್ ಡಿ ಎ ಅಭ್ಯರ್ಥಿ ಎಂದೆ ನಾಮಪತ್ರ ಸಲ್ಲಿಸಲಾಗಿದೆ. ಆದರೆ ಬಿಜೆಪಿಯವರು ಮಾತ್ರ ನಮಗೆ ಬೆಂಬಲ ನೀಡಲಿಲ್ಲ. ಪಿ ಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ 11 ಕ್ಷೇತ್ರಗಳ ಪೈಕಿ ಬಹುತೆಕ ಕಡೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಬಿಜೆಪಿಯವರು ಮತದಾನ ಮಾಡಿದ್ದಾರೆ. ಕ್ಷೇತ್ರದಲ್ಲಿ ಹೊಂದಾಣಿಕೆಯನ್ನ ಬಿಜೆಪಿಯವರು ಮಾಡುತ್ತಿದ್ದಾರೆ ವಿನಹ ಜೆಡಿಎಸ್ ನವರಲ್ಲ. ವಿನಾಕಾರಣ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ರವರ ಹೆಸರನ್ನು ಕೆಡಿಸಲು ಬಿಜೆಪಿ ಕಾರ್ಯಪ್ರವೃತ್ತವಾಗಿದೆ. ಜೆಡಿಎಸ್ ಬದಲಿಗೆ ಕಾಂಗ್ರೆಸ್ ಪರವಾಗಿ ಬಿಜೆಪಿ ಕೆಲಸ ಮಾಡಿದಂತೆ ಕಾಣಿಸುತ್ತದೆ. ಮೋದಲು ಬಿಜೆಪಿಯವರು ತಮ್ಮನ ತಾವು ವಿಮರ್ಶೆ ಮಾಡಿಕೊಳಲಿ ಎಂದು ಬಿಜೆಪಿಗರಿಗೆ ವಾಗ್ದಾಳಿ ನಡೆಸಿದರು.
ನಂತರ ಯಡ್ರಾಮಿ ತಾಲೂಕ ಅಧ್ಯಕ್ಷ ಗೊಲ್ಲಾಳಪ್ಪ ಕಡಿ ಮಾತನಾಡಿ ಜೆಡಿಎಸ್ ಜೋತೆಗೆ ರಾಜ್ಯದಲ್ಲಿ ಬಿಜೆಪಿ ಮೈತ್ರಿ ಮಾಡಿಕೊಂಡು ಜೋತೆಯಾಗಿ ನಡೆಯುತ್ತಿದೆ ಆದರೆ ಜೇವರ್ಗಿಯಲ್ಲಿ ಕಾಂಗ್ರೆಸ್ ಜೋತೆ ಬಿಜೆಪಿ ಮೈತ್ರಿ ಮಾಡಿಕೊಂಡAತೆ ಕಾಣಿಸುತ್ತಿದೆ. ಪಿ ಎಲ್ ಡಿ ಬ್ಯಾಂಕ್ ಹಾಗೂ ಡಿಸಿಸಿ ಚುನಾವಣೆಯಲ್ಲಿ ಜೆಡಿಸೆ ಬದಲಿಗೆ ಕಾಂಗ್ರೆಸ್ ಗೆ ಸಪೋರ್ಟ್ ಮಾಡಿದೆ. ಕೆಲವರು ಮೈತ್ರಿ ಪಕ್ಷಕ್ಕೆ ಬದ್ದರಿದ್ದರು ಕೂಡ ಕೆಲವು ಮುಖಂಡರು ಒತ್ತಾಯ ಪೂರ್ವಕವಾಗಿ ಕಾಂಗ್ರೆಸ್ ಗೆ ಮತ ಚಲಾಯಿಸಲು ಸುಚಿಸಿದ್ದಾರೆ. ಇಂತಹ ಹೊಂದಾಣಿಕೆ ರಾಜಕಾರಣ ಬಿಜೆಪಿ ಮಾಡುತ್ತಿದೆ ಅದರ ತಪ್ಪನ್ನ ನಮ್ಮ ಪಕ್ಷದ ಮೇಲೆ ಹಾಕುತ್ತಿದೆ. ನಾವು ತಾಲೂಕಿನಲ್ಲಿ ಎನ್ ಡಿ ಎ ಮೈತ್ರಿ ಕೂಟದಂತೆ ಮುನ್ನಡೆಯಿತ್ತೆವೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ರಮೇಶ ಬಾಬು ವಕೀಲ್, ಬಸವರಾಜ ಮುಕ್ಕಾಣಿ, ಶರಣಗೌಡ, ಸಂಗಣ್ಣ ಗೌಡ ರದ್ದೆವಾಡಗಿ, ಭೀಮು ಹಳ್ಳಿ, ಚಂದ್ರು ಸೀರಿ, ವಿಶಾಲ ಭಂಕುರ್, ಬಸವರಾಜ ಮಡಿವಾಳ ಸೇರಿದಂತೆ ಅನೇಕರಿದ್ದರು.



