ರಾಜ್ಯ ಕಾರ್ಯದರ್ಶಿಯಾಗಿ ಎಚ್.ಆರ್.ಬಡಿಗೇರ ಆಯ್ಕೆ

ಕೆಂಭಾವಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾದರ್ಶಿ ಹುದ್ದೆಗೆ ಕೆಂಭಾವಿ ಪಟ್ಟಣದ ಎಚ್ ಆರ್ ಬಡಿಗೇರ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು ಈ ಸಂಘವು ಕೆಲವು ಸೈದ್ದಾಂತಿಕ ವಿಚಾರಗಳನ್ನು ಮೈಗೂಡಿಸಿಕೊಂಡಿದ್ದು, ಈ ವಿಚಾರಗಳಿಗೆ ಮತ್ತು ಸಂವಿಧಾನ ಬದ್ಧ ನೀತಿ ನಿಯಮಗಳನ್ನು ಗಾಳಿಗೆ ತೂರದೇ ಶಿಸ್ತಿನಿಂದ ಕೆಲಸ ಮಾಡುವ ಅವಶ್ಯಕತೆ ಇದೆ.
ಯಾವುದೇ ಮತ, ಜಾತಿಗಳಿಗೆ ಮತ್ತು ಯಾವುದೇ ರಾಜಕೀಯ ಪಕ್ಷಗಳ ಸೋಂಕಿಲ್ಲದೇ ಪ್ರಾಮಾಣಿಕವಾಗಿ ಸಂಘ ನೀಡಿರುವ ಜವಾಬ್ದಾರಿ ಹುದ್ದೆಯನ್ನು ನಿಷ್ಠೆಯಿಂದ ಮಾಡಬೇಕೆಂದು ಹಾಗೂ ರಾಜ್ಯದಲ್ಲಿ ಈ ಸಂಘಟನೆಯನ್ನು ಬಲಿಷ್ಠಗೊಳಿಸಲು ನಿಮ್ಮ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ನೂತನವಾಗಿ ಆಯ್ಕೆಯಾಗಿರುವ ಎಚ್. ಆರ್ .ಬಡಿಗೇರ್ ಅವರಿಗೆ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿಗೌರಾವಧ್ಯಕ್ಷರಾದ ಮಂಜುನಾಥಗೌಡ್ರು, ಉಪಾಧ್ಯಕ್ಷೆ ಮಹಾದೇವಿ ಬೇವಿನಾಳ ಮಠ, ಪ್ರಧಾನ ಕಾರ್ಯದರ್ಶಿ ವೀರಭದ್ರಸ್ವಾಮಿ, ಚಂದ್ರಶೇಖರ, ಭೀಮನಗೌಡ, ಜಮಖಂಡಿ, ಹನುಮಂತಪ್ಪ ಸೇರಿದಂತೆ ಅನೇಕರು ಇದ್ದರು.




