ಕಾಲುವೆಗಳಿಗೆ ಏ.15ರವರೆಗೆ ನೀರು ಹರಿಸಲು ಆಗ್ರಹ

ಕೆಂಭಾವಿ: ಹಿಂಗಾರು ಹಂಗಾಮಿನ ಬೆಳೆಗಳಿಗೆ ಅನುಕೂಲ ವಾಗುವಂತೆ ಏಪ್ರಿಲ್ 15ರವರೆಗೆ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ನಮ್ಮ ಕರ್ನಾಟಕ ಸೇನೆಯ ಹೋಬ ಳಿ ಘಟಕದ ಅಧ್ಯಕ್ಷ ಶರಣು ದೇವರಮನಿ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಐಸಿಸಿ ಸಭೆಯಲ್ಲಿ ವಾರಾಬಂದಿ ಪದ್ಧತಿಯಲ್ಲಿ ಏಪ್ರಿಲ್ 3ರವರೆಗೆ ಮಾತ್ರ ನೀರು ಹರಿಸುವಂತೆ ನಿರ್ಣಯ ಕೈಗೊಂಡಿರುವು ದನ್ನು ಬದಲಾಯಿಸಿ, ಏಪ್ರಿಲ್ 15ರವರೆಗೆ ನಿರಂತರವಾಗಿ ಮುಖ್ಯ ಕಾಲುವೆಗೆ ನೀರು ಹರಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಅನ್ನದಾತರು ಸಾಲ ಮಾಡಿ ತಮ್ಮ ಜಮೀನಿ ನಲ್ಲಿ ಸಜ್ಜೆ, ಮೆಕ್ಕೆಜೋಳ, ಶೇಂಗಾ ಹಾಗೂ ಬತ್ತ ಬೆಳೆ ಬೆಳೆದಿದ್ದಾರೆ. ಬಹಳ ಕಷ್ಟಪಟ್ಟು ಬೆಳೆದಿರುವ ಈ ಬೆಳೆಗಳು ಈಗ ಕಾಳು ಕಟ್ಟುವ ಹಂತದಲ್ಲಿದ್ದು, ಈ ಸಂದ ರ್ಭದಲ್ಲಿ ನೀರಿನ ಅವಶ್ಯಕತೆ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
ಏಪ್ರಿಲ್ 3ರವರೆಗೆ ಮಾತ್ರ ನೀರು ಹರಿಸಿದರೆ ರೈತರಿಗೆ ದೊಡ್ಡ ಅನಾನುಕೂಲ ಉಂಟಾಗುತ್ತದೆ ಹಾಗೂ ಬೆಳೆಗಳಿಗೆ ಭಾರೀ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರ ರೈತರ ಹಿತದೃಷ್ಟಿಯಿಂದ ಏಪ್ರಿಲ್ 15ರವರೆಗೆ ಕಾಲುವೆಗಳಿಗೆ ನೀರು ಹರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಇಲ್ಲದಿದ್ದರೆ ರೈತ ಸಮುದಾಯದೊಂದಿಗೆ ನಮ್ಮ ಕರ್ನಾಟಕ ಸೇನೆ ಸೇರಿಕೊಂಡು ಹೋರಾಟದ ಹಾದಿ ತುಳಿಯಬೇಕಾ ಗುತ್ತದೆ ಎಂದು ಶರಣು ದೇವರಮನಿ ಎಚ್ಚರಿಕೆ ನೀಡಿದರು.



