ರಾಜೀವ್ ಗಾಂಧಿ, ದೇವರಾಜ ಅರಸು ಜಯಂತಿ: ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆಯನ್ನು ಕಲಬುರಗಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಸಮಾಜಮುಖಿ ಕಾರ್ಯಕ್ರಮದ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಯಂತಿ ಅಂಗವಾಗಿ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ, ಅವರ ಆರೋಗ್ಯ ವಿಚಾರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ವೀರನಾಯಕ ಮಾತನಾಡಿ, ರಾಜೀವ್ ಗಾಂಧಿ ಹಾಗೂ ಡಿ. ದೇವರಾಜ ಅರಸು ಅವರು ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ದೂರದೃಷ್ಟಿಯ ನಾಯಕರಾಗಿದ್ದಾರೆ. ಅವರ ಜನ್ಮದಿನವನ್ನು ಸಮಾಜಮುಖಿ ಹಾಗೂ ಜನಪರ ಕಾರ್ಯಗಳ ಮೂಲಕ ಆಚರಿಸುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಕಿರಣ್ ದೇಶಮುಖ್, ನೀಲಕಂಠರಾವ್ ಮೂಲಗೆ, ಶರಣಗೌಡ ಪಾಟೀಲ, ಹುಲಿಗೆಪ್ಪ ಕನಕಗಿರಿ, ಫಾರೂಕ್ ಮನಿಯಾಳ, ದೇವೇಂದ್ರ ಸಿನೂರ್, ದಿನೇಶ್ ದೊಡ್ಡಮನಿ, ಶರಣು ಶಾಸ್ತ್ರೀ, ಹರೀಶ್ ಖಾನಾಪುರ, ನಂದಕುಮಾರ್ ನಾಗಭುಜಂಗ, ಕುಮಾರ ವಠಾರ್, ಸತೀಶ್ ಸ್ವಾಮಿ, ಪ್ರಶಾಂತ್ ನಂದಿಕೂರ್, ಲಕ್ಕಪ್ಪ ಪೂಜಾರಿ, ಮಂಜು ಸಿಕೆ, ಅಜಯ್ ಉದನೂರು, ರಾಹುಲ್ ಡಿಕೆ, ಕೈಲಾಸ ಕೊರಳ್ಳಿ ಹಾಗೂ ಆದಿತ್ಯ ರದ್ದೇವಾಡಗಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ, ಅವರ ಆರೋಗ್ಯ ವಿಚಾರಿಸುವ ಮೂಲಕ ಜಯಂತಿ ಆಚರಣೆಯನ್ನು ಸರಳತೆ ಹಾಗೂ ಸಮಾಜಮುಖಿ ಸಂದೇಶದೊಂದಿಗೆ ನೆರವೇರಿಸಲಾಯಿತು.



