ಕಲಬುರಗಿಜಿಲ್ಲಾಸುದ್ದಿ

ಕಲಬುರಗಿಯಲ್ಲಿ ಉಚಿತ ಬಂಜೆತನ ಚಿಕಿತ್ಸೆ ಹಾಗೂ ಹೆಚ್‌ಪಿವಿ ಲಸಿಕೆ ಜಾಗೃತಿ ಶಿಬಿರ

ಕಲಬುರಗಿ :ನಗರದ ಯಾದಗಿರಿ ಚಕ್ಕರಕಟ್ಟಾ ಗಾಂಧಿ ಚೌಕ್‌ನಲ್ಲಿರುವ ಆನಂದ ನರ್ಸಿಂಗ್ ಹೋಮ್ ಆಸ್ಪತ್ರೆಯಲ್ಲಿ ಜನವರಿ 25 ರಂದು ಮುಂಜಾನೆ 10 ರಿಂದ ಮಧ್ಯಾಹ್ನ 2.30 ರವರೆಗೆ ಉಚಿತ ಪುರುಷ ಮತ್ತು ಮಹಿಳಾ ಬಂಜೆತನ ಚಿಕಿತ್ಸೆ ಶಿಬಿರ ಹಾಗೂ ಹೆಚ್‌ಪಿವಿ (HPV) ಲಸಿಕೆ ಜಾಗೃತಿ ಮತ್ತು ಉಚಿತ ಪರಿಶೀಲನಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಂಶ ಟೆಸ್ಟ್‌ಟ್ಯೂಬ್ ಬೇಬಿ ಆಂಡ್ ಲ್ಯಾಪರೊಸ್ಕೋಪಿ ಸೆಂಟರ್‌ನ ವೈದ್ಯರಾದ ಡಾ. ಭಾಗ್ಯಾಶ್ರೀ ಎಸ್. ಪಾಟೀಲ, ಡಾ. ಮೀತಾ ಅಂಗಡಿ ಹಾಗೂ ಡಾ. ಮಧುರಾ ಬನಾಳೆ ಅವರು ತಿಳಿಸಿದ್ದಾರೆ.

ಈ ಶಿಬಿರದಲ್ಲಿ ಮಹಿಳಾ ಬಂಜೆತನ, ಪುರುಷ ಬಂಜೆತನ ಹಾಗೂ ದಂಪತಿಗಳಲ್ಲಿ ಕಾಣಿಸಿಕೊಳ್ಳುವ ಬಂಜೆತನದ ಕಾರಣಗಳ ಕುರಿತು ವಿವರವಾದ ಸಮಾಲೋಚನೆ ನೀಡಲಾಗುವುದು. ಉಚಿತ ವೀರ್ಯ ವಿಶ್ಲೇಷಣೆ, ಪಿಸಿಒಡಿ, ಮುಟ್ಟಿನ ತೊಂದರೆಗಳು, ಅನಿಯಮಿತ ಹಾಗೂ ಅತಿಯಾದ ರಕ್ತಸ್ರಾವ, ಗರ್ಭಪಾತ ಸಮಸ್ಯೆ, ಹಾರ್ಮೋನ್ ಪರೀಕ್ಷೆಗಳು, ಅಲ್ಟ್ರಾಸೌಂಡ್/ಕಲರ್ ಡಾಪ್ಲರ್ ಪರೀಕ್ಷೆಗಳು ಸೇರಿದಂತೆ ಗರ್ಭಾಶಯ ಸಂಬಂಧಿತ ಸಮಸ್ಯೆಗಳ ಪರಿಶೀಲನೆ ನಡೆಯಲಿದೆ.

ಇದಲ್ಲದೆ ಐವಿಎಫ್ (ವಿಟ್ರೋ ಫರ್ಟಿಲೈಸೇಶನ್), ಐಸಿಎಸ್ಐ (ಇಂಟ್ರಾ ಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್), ಡಯಾಗ್ನೋಸ್ಟಿಕ್ ಹಾಗೂ ಆಪರೇಟಿವ್ ಲ್ಯಾಪರೊಸ್ಕೋಪಿ, ಹಿಸ್ಟರೊಸ್ಕೋಪಿ, ಅಂಡ್ರಾಲಜಿ ಮೌಲ್ಯಮಾಪನ ಮತ್ತು ವೀರ್ಯ ಹಾಗೂ ಅಂಡಾಣು ಸಂರಕ್ಷಣೆಗಾಗಿ ಕ್ರಯೋಪ್ರೆಸರ್ವೇಶನ್ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಲಾಗುತ್ತದೆ.

ಹೆಚ್‌ಪಿವಿ ಲಸಿಕೆಯ ಮಹತ್ವ, ಗರ್ಭಾಶಯ ಕ್ಯಾನ್ಸರ್ ತಡೆಗಟ್ಟುವಿಕೆ, ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆಗಳು, ಪಿಸಿಒಡಿ ಸೇರಿದಂತೆ ವಿವಿಧ ಬಂಜೆತನ ಸಮಸ್ಯೆಗಳ ಬಗ್ಗೆ ಉಚಿತ ಜಾಗೃತಿ ಮತ್ತು ಸಮಾಲೋಚನೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button