ಬಲಗೈ (ಹೊಲೆಯ) ಸಮುದಾಯಕ್ಕೆ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ

ಅಫಜಲಪೂರ ತಾಲ್ಲೂಕಿನ ಬಲಗೈ (ಹೊಲೆಯ) ಸಮುದಾಯದ ನೂತನ ಅಧ್ಯಕ್ಷರಾಗಿ ಶ್ರೀ ಮಲ್ಲಿಕಾರ್ಜುನ ಖರ್ಗೆ ಅತನೂರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ತಾಲೂಕಿನ ಅಂಬೇಡ್ಕರ್ ಸರ್ಕಲ್ನಲ್ಲಿ ಸಮುದಾಯದ ಹಿರಿಯರು ಮತ್ತು ಮುಖಂಡರು ಸಭೆ ಸೇರಿ ಮಹತ್ವದ ಚರ್ಚೆ ನಡೆಸಿದರು. ಸಭೆಯಲ್ಲಿನ ಏಕಮತೀಯ ನಿರ್ಣಯದಂತೆ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧ್ಯಕ್ಷ ಸ್ಥಾನ ಹಸ್ತಾಂತರಿಸಲಾಯಿತು. ಗೌರವ ಅಧ್ಯಕ್ಷರಾಗಿ ಶ್ರೀ ಭೀಮರಾವ್ ಗೌರ ಅವರನ್ನು ಆಯ್ಕೆ ಮಾಡಲಾಗಿದೆ.
ಸಭೆಯಲ್ಲಿ ಸಮುದಾಯದ ಸಂಘಟನೆ ಬಲಪಡಿಸುವುದು, ಯುವಕರನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸುವುದು, ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಹಿಂದುಳಿದವರಿಗೆ ನೆರವು ಒದಗಿಸುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು. ಸಮುದಾಯದ ಏಕತೆ ಮತ್ತು ಹಕ್ಕುಗಳ ರಕ್ಷಣೆಗಾಗಿ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸುವ ನಿರ್ಧಾರ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಾಹಿತಿ ಹಣಮಂತ ದೊಡ್ಮನಿ, ಡಾ. ವಿಜಯಕುಮಾರ್ ಸಾಲಿಮನಿ, ಡಾ. ಶಾಂತಮಲ್ಲ ಹೊನ್ನುಂಗರ್, ನಾಗೇಶ್ ಕೊಳ್ಳಿ, ಮಹಾಲಿಂಗ ಅಂಗಡಿ, ಮಹಾಂತೇಶ ಬಳೂಂಡಗಿ, ಅಪ್ಪಾರಾವ್ ಸಂಗಮಕರ್, ಯಶ್ವಂತ ಪಟ್ಟೇದಾರ್, ಕಾಶಿನಾಥ್ ಟಕ್ಕಳಕಿ, ಶಂಕರ್ ಬಾದನಳ್ಳಿ, ರಾಜು ಆರೇಕರ್, ರಮೇಶ್ ನೂಲಾ, ರವಿ ಗೌರ್, ಸಾಗರ್ ಇಸ್ಪೂರ್, ಶಾಮ ಹೊಸ್ಮನಿ, ಮಹಾದೇವ್ ಬಂಕಲಗಿ, ದತ್ತಾ ಕಾಂಬಳೆ, ರವಿ ಧಾನೆನ್ನವರ, ಶಶಿಕುಮಾರ್ ಆರೇಕರ್, ಪ್ರವೀಣ ಕಲ್ಲೂರ್, ಸಿದ್ದು ಚೌಡಾಪೂರ್, ಬೈಲಪ್ಪ ನಡುವಿನಕೇರಿ, ಸತೀಶ್ ಹವಳಗಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



