ಕೆಂಭಾವಿಯಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹೋಬಳಿ ಪದಾಧಿಕಾರಿಗಳ ಆಯ್ಕೆ

ಕೆಂಭಾವಿ: ಪಟ್ಟಣದ ಆನಂದ ಬುದ್ಧ ವಿಹಾರದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಸಮಿತಿ, ಸುರಪುರ ಅವರ ನೇತೃತ್ವದಲ್ಲಿ ಕೆಂಭಾವಿ ಹೋಬಳಿ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಸರ್ವಸದಸ್ಯರ ಸಭೆ ನಡೆಯಿತು.
ಸಭೆಗೆ ಅಧ್ಯಕ್ಷತೆ ವಹಿಸಿದ ಮಾಳಪ್ಪ ಕಿರದಳ್ಳಿ ಅವರು ಮಾತನಾಡಿ, ಸಂಘಟನೆಯ ಬಲವರ್ಧನೆಗೆ ಎಲ್ಲರೂ ಸಮನ್ವಯದಿಂದ ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಸಂಚಾಲಕ ರಾಮಣ್ಣ ಕಲದೇವನಹಳ್ಳಿ, ಹಿರಿಯ ಮುಖಂಡ ಪರಶುರಾಮ ಬಳಬಟ್ಟಿ, ತಾಲೂಕು ಸಂಚಾಲಕ ಶರಣಪ್ಪ ತಳವಾರಗೇರ, ಜಿಲ್ಲಾ ಸಂಚಾಲಕ ಭೀಮರಾಯ ಅಗ್ನಿ, ಭೀಮಶಂಕರ ಸೋಮನಾಳಕರ್, ಬಸವರಾಜ ಪೂಜಾರಿ, ಶರಣಬಸು ವಜ್ಜಲ್ ಸೇರಿದಂತೆ ಸಮಾಜದ ಮುಖಂಡರಾದ ಶಿವಪ್ಪ ಕಂಬಾರ, ಪಾಂಡುರಂಗ ವಕೀಲರು, ಪ್ರಕಾಶ್ ಮುಷ್ಠಳಿ, ಪರಶುರಾಮ ಸಾಸನೂರ ಮತ್ತಿತರರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ತಿಪ್ಪಣ ಬಿ. ಅಗ್ನಿ ಅವರನ್ನು ಕೆಂಭಾವಿ ಹೋಬಳಿ ಸಂಚಾಲಕರಾಗಿ, ರಾಯಪ್ಪ ಎಂ. ಯತ್ನಾಳ್ ಅವರನ್ನು ಸಂಘಟನಾ ಸಂಚಾಲಕರಾಗಿ ನೇಮಕ ಮಾಡಲಾಯಿತು.
ಮಹೇಶ್ ಸಿ. ಕಟ್ಟಿಮನಿ, ಸೈದಪ್ಪ ಕೆ. ಅರಳಗುಂಡಗಿ, ಮಾಳಪ್ಪ ಜಿ. ಯತ್ನಾಳ್, ನಿಂಗಪ್ಪ ಬಿ. ನಡಕೂರ್, ಪರಶು ರಾಮ ಎಸ್. ಕಡಕೋಳ ಅವರನ್ನು ಸಂಚಾ ಲಕರಾಗಿ ಆಯ್ಕೆ ಮಾಡಲಾಗಿದ್ದು, ಹಣಮಂತ ಅಂಬ್ರಖೇಡ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು.



