ಕಲಬುರಗಿಜಿಲ್ಲಾಸುದ್ದಿ

ಮತ್ತೆ ಪೌರಕಾರ್ಮಿಕರ ಅನಿರ್ದಿಷ್ಠಾವದಿ ಸತ್ಯಾಗ್ರಹ

ಜೇವರ್ಗಿ : ಕಳೆದ ಹಲವು ವರ್ಷಗಳಿಂದ ಜೇವರ್ಗಿಯ ಪೌರ ಕಾರ್ಮಿಕರು ಪದೆ ಪದೆ ಪ್ರತಿಭಟನೆಗಳನ್ನ ಮಾಡುತ್ತಲ್ಲೆ ಬರುತ್ತಿದ್ದಾರೆ. ಆದರೆ ಈಲ್ಲಿಯವರೆಗೂ ಕೂಡ ಯಾವುದೆ ಬೇಡಿಕೆಗಳು ಇನ್ನು ಇಡೆರಿಲ್ಲ ಎಂಬುವುದೆ ವಿಪರ್ಯಾಸ. ಈಗಲಾದರು ಎಚ್ಚೆತ್ತುಕೊಳ್ಳುತ್ತಾರ ಅಧಿಕಾರಿಗಳು ಎಂಬುವುದೆ ಹೋರಾಟಗಾರರ ಕಳವಳವಾಗಿದೆ.

ಪಟ್ಟಣದ ತಾಲೂಕ ಆಡಳಿತ ಕಚೇರಿಯ ಮುಂದೆ ಹೋರಾಟಗಾರರು ತಮ್ಮ ಅನಿರ್ದಿಷ್ಠಾವದಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಾರೆ.

ಪೌರಕಾರ್ಮಿಕರ ಬಾಕಿ ವೇತನ ಹಾಗೂ ನೇಮಕಾತಿ ಸಮಸ್ಯೆ ಹಿನ್ನೆಲೆಯಲ್ಲಿ ಜೇವರ್ಗಿಯಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ತೀವ್ರಗೊಂಡಿದ್ದು, ಕಾರ್ಮಿಕ ಸಂಘಟನೆ ಮುಖಂಡರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೆ ಹೋರಾಟಗಾರರು ಜೇವರ್ಗಿ ಪುರಸಭೆ ಮುಂದೆ ಹಲವು ಬಾರಿ, ಶಾಸಕರ ಮನೆಯ ಮುಂದೆ ಹಾಗೂ ತಹಸೀಲ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಹೋರಾಟಗಾರರು ಮಳೆ, ಬಿಸಿಲು ಹಾಗೂ ಬಿರುಗಾಳಿಯಲ್ಲು ಕೂಡ ತಮ್ಮ ಚಿಕ್ಕ ಮಕ್ಕಳೊಂದಿಗೆ ಪ್ರತಿಭಟನೆಯನ್ನ ಮಾಡಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಶಾಸಕರು, ಅಧಿಕಾರಿಗಳು ಬೇಟಿ ನೀಡಿ ಅನೇಕ ಬಾರಿ ಪ್ರತಿಭಟನೆಯನ್ನ ಕೈಬಿಡಲು ಸೂಚಿಸಿದರು. ಅವರ ಮಾತಿಗೆ ಗೌರವ ಕೊಟ್ಟು ಹೋರಾಟವನ್ನು ಕೈಬಿಟ್ಟರು ಕೂಡ ಇಲ್ಲಿಯವರೆಗೂ ಯಾವುದೆ ಬೇಡಿಕೆಯನ್ನ ಯಾರುಕೂಡ ಇಡೆರಿಸಿಲ್ಲ. ಹಲವು ವರ್ಷಗಳ ಕಾಲ ಕೆಲಸ ಮಾಡಿದಕ್ಕೆ ಕೂಲಿಯೂ ಇಲ್ಲ, ಇತ್ತಕಡೆ ಕೆಲಸವೂ ಇಲ್ಲದಂತಾಗಿದೆ. ಪೌರಕಾರ್ಮಿಕರ ಬದುಕು ಬಿದಿಗೆ ಬಿದ್ದಂತಾಗಿದೆ. ನಮ್ಮ ಕೂಟುಂಬ ನಿರ್ವಹಣೆಗೆ ಇದ್ದ ಈ ಕೆಲಸವು ಹೊಗಿದೆ ನಮ್ಮ ಬದುಕು ನಡೆಸುವುದು ಕಷ್ಟವಾಗಿದೆ ಎಂದು ಹೋರಾಟಗಾರರು, ಪೌರಕಾರ್ಮಿಕರು ಹಾಗೂ ಅವರ ಕುಟುಂಬಸ್ಥರು ತಮ್ಮ ಕಷ್ಟವನ್ನು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕಾರ್ಮಿಕರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಿ ಸಮಸ್ಯೆ ಪರಿಹರಿಸಬೇಕು ಎಂಬ ಒತ್ತಾಯ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಹೋರಾಟ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಪ್ರತಿಭಟನಾ ಸ್ಥಳಕ್ಕೆ ತಾಲೂಕ ದಂಡಾಧಿಕಾರಿ ಮಲ್ಲಣ್ಣ ಯಲಗೋಡ, ಪುರಸಭೆ ಮುಖ್ಯಧೀಕಾರಿ ಶಂಭುಲಿAಗ ದೇಸಾಯಿ, ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸತಿಷಕುಮಾಋ ಸಂಗನ್ ಭೆಟಿ ನೀಡಿದರು.

ಈ ಸಂದರ್ಭದಲ್ಲಿ ಹೋರಾಟಗಾರ ಮಹೇಶಕುಮಾರ ರಾಠೋಡ, ಪೌರಕಾರ್ಮಿಕರ ಸಂಘಟನೆ ಅಧ್ಯಕ್ಷೆ ಶಂಕರಮ್ಮ, ಕಾರ್ಯದರ್ಶಿ ರಾಘವೇಂದ್ರ, ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಚೌದ್ರಿ ಕೊಡಚಿ, ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಕೆಲ್ಲೂರ್, ಮುಖಂಡರಾದ ರಾಜ ಪಟೇಲ್ ಯಾಳವಾರ, ಗಂಗಮ್ಮ, ಶರಣಮ್ಮ, ದೊಡ್ಡಮ್ಮ, ದೇವಕಿ, ಶಾರದಬಾಯಿ ಸೇರಿದಂತೆ ಅನೇಕರಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button