ಸಿಬಿಎಸ್‌ಇ ಶಾಲೆಗೆ 99% ಫಲಿತಾಂಶ : ವಿದ್ಯಾರ್ಥಿಗಳ ಅದ್ಭುತ ಸಾಧನೆ

ಚಿತ್ತಾಪುರ: ಪಟ್ಟಣದ ವಿಶ್ವಗುರು ಶಿಕ್ಷಣ ಹಾಗೂ ಕಲ್ಯಾಣ ಸಂಸ್ಥೆಯ ಶ್ರೀಮತಿ ಮಹಾದೇವಮ್ಮ ಬಿ. ಪಾಟೀಲ್ ಸ್ಮಾರಕ ಸಿಬಿಎಸ್‌ಇ ಶಾಲೆ 2025-26ನೇ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಶೇ.99ರಷ್ಟು ಅತ್ಯುತ್ತಮ ಫಲಿತಾಂಶ ದಾಖಲಿಸಿ ಗಮನ ಸೆಳೆದಿದೆ ಎಂದು ಸಂಸ್ಥೆಯ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ತಿಳಿಸಿದ್ದಾರೆ.
ಈ ಪರೀಕ್ಷೆಯಲ್ಲಿ ಪ್ರೇಮ್ ಕಪಿಲ್ ಜಿತುರೆ 472 ಅಂಕ (94.40%) ಪಡೆದು ಪ್ರಥಮ ಸ್ಥಾನ ಪಡೆದಿದ್ದಾನೆ. ಚೇತನ್ ಬಸವರಾಜ್ 465 ಅಂಕ (93%) ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾನೆ.
ಇನ್ನೂ ಎಮ್.ಡಿ. ಅಯಾನ್ ಅಲೀಮ್ ಸಾಬ್ (456 – 91.20%), ರಕ್ಷಿತಾ ಬಸವರಾಜ್ (445 – 89%), ಸೃಷ್ಠಿ ಗುಂಡಪ್ಪಾ (438 – 87.60%), ಮುನೀಂದ್ರ ಶಿವಕುಮಾರ (420 – 84%), ಅಖೀಲಾ ಆರ್.ಎಸ್. ರಾಮಾಚಾರ್ಯ (414 – 82.80%), ಆಚಲ್ ಸಚೀನ ಜಿತುರೆ (408 – 81.60%), ಬಸರೆಡ್ಡಿ ಶರಣರೆಡ್ಡಿ ಇಜಾರ (403 – 80.60%) ಮತ್ತು ಮಹ್ಮದ ಅಲ್ತಾಫ್ ಶರಫೋದ್ದೀನ್ (400 – 80%) ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಒಟ್ಟು 56 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ತೇರ್ಗಡೆಯಾಗಿದ್ದಾರೆ. ಇವರಲ್ಲಿ 18 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 16 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 2 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.



