ಮಾನವೀಯ ಮೌಲ್ಯಗಳ ಬೆಳೆಸುವಲ್ಲಿ ಪೋಷಕರ ಪಾತ್ರ ಮಹತ್ವದ್ದು: ಡಿ.ಸಿ. ಪಾಟೀಲ
ದಿ.ಬಸವಂತರಾಯ (ಮಾಸ್ತರ )ಪಾಟೀಲ್ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಸಮಾರಂಭ

“ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸಿ, ಉತ್ತಮ ನಾಗರೀಕರನ್ನು ರೂಪಿಸುವುದು ಕಲೆ, ಕ್ರೀಡೆ, ಸೇವಾ ಕ್ಷೇತ್ರಗಳನ್ನು ಒಳಗೊಂಡಂತೆ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವ ಸ್ಪಂದನ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ.ಇತರರಿಗೂ ಇದು ಪ್ರೇರಣೆಯಾಗಲಿ. – ಚನ್ನಬಸವ ಶಿವಾಚಾರ್ಯರು ಹಿರೇಮಠ ಸಂಸ್ಥಾನಕ್ಕೆ ಕೆಂಭಾವಿ.
ಕೆಂಭಾವಿ: ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ ಅವರ ಸರ್ವಾಂಗೀಣ ಅಭಿವೃದ್ಧಿಗೆ ತಂದೆ–ತಾಯಿಯ ಆಶ್ರಯ ಅತ್ಯಂತ ಅಗತ್ಯ ಎಂದು ಸ್ಪಂದನ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಡಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಸ್ಪಂದನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿ. ಬಸವಂತ್ರಾಯ (ಮಾಸ್ತರ) ಪಾಟೀಲ ಅವರ ಸ್ಮರಣಾರ್ಥವಾಗಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳು ಶಾಲೆಯಲ್ಲಿ ಜ್ಞಾನ ಪಡೆಯುವ ಜೊತೆಗೆ ಗೌರವ, ಸತ್ಯ, ಅಹಿಂಸೆ, ಕರುಣೆ ಮೊದಲಾದ ಮಾನವೀಯ ಮೌಲ್ಯಗಳನ್ನು ಮೊದಲಿಗೆ ಮನೆಯಲ್ಲಿ ಪೋಷಕರಿಂದಲೇ ಕಲಿಯಬೇಕು. ಇದು ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಆಧಾರವಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿ ವಾಮನರಾವ್ ದೇಶಪಾಂಡೆ ಮಾತನಾಡಿ, ಬಾಲ್ಯದಲ್ಲೇ ಕುಟುಂಬ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಮಕ್ಕಳಿಗೆ ಬೋಧಿಸಿದರೆ ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು. ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಮತ್ತಷ್ಟು ಪ್ರೋತ್ಸಾಹ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.
ಕೆಂಭಾವಿ ಪಟ್ಟಣದ ಅತಿ ಹೆಚ್ಚು ಅಂಕ ಪಡೆದ ಹಾಗೂ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾದ ವಿದ್ಯಾರ್ಥಿಗಳು: ಶ್ವೇತಾ ಪ್ರಭುಗೌಡ 609 ಅಂಕ ಪಡೆದು ಪಟ್ಟಣಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ
ಬದೀಹಾ ಅಫಾಫ ಇಲೀಯಾಸ್ ವಡಕೇರಿ 606 ಅಂಕ ಪಡೆದು ಎರಡನೇ ಸ್ಥಾನ ಪಡೆದ ವಿದ್ಯಾರ್ಥಿನಿ
ನಿಷಾದ ನಜೀರ್ ಹಮ್ಮದ್ ವಡಕೇರಿ 600 ಅಂಕ ಪಡೆದು ಪಟ್ಟಣಕ್ಕೆ ಮೂರನೇ ಸ್ಥಾನ ಪಡೆದ ವಿದ್ಯಾರ್ಥಿನಿ
ಮೊಹ್ಮದ್ ಐಜಾದ್ ಹುಸೇನ್ ೫೯೯ ಅಂಕ ಪಡೆದು ಪಟ್ಟಣಕ್ಕೆ ನಾಲ್ಕನೇ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರವನ್ನು ನೀಡಿ ಪ್ರತಿ ವಿದ್ಯಾರ್ಥಿಗೆ 5000/- ನಗದು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಪಾಲ ರೆಡ್ಡಿ ಡಿಗ್ಗಾವಿ ಮಾತನಾಡಿದರು. ಕುಮಾರಿ ಅನಘಾ ಕುಲಕರ್ಣಿ ಪ್ರಾರ್ಥನಾ ಗೀತೆ ಹಾಡಿದರು. ದಿವ್ಯ ಸಾನಿಧ್ಯ ವಹಿಸಿದ್ದ ಷ.ಬ್ರಂ ಚನ್ನಬಸವ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಕಾರ್ಯಕ್ರಮವನ್ನು ಶಿಕ್ಷಕ ಬಂದೇನವಾಜ್ ನಾಲತವಾಡ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಮಡಿವಾಳಪ್ಪ ಗೌಡ ಪೊಲೀಸ್ ಪಾಟೀಲ್, ಬಾಬುಗೌಡ ಮಾಲಿ ಪಾಟೀಲ್, ಪ್ರಕಾಶ ಪಾಟೀಲ್, ಸಂಗಣ್ಣ ಎಸ್. ತುಂಬಗಿ, ಸಂಗಣ್ಣ ಎಂ. ತುಂಬಗಿ, ಸಾಹೇಬಲಾಲ ಸಾಬ್ ಆಂದೇಲಿ, ಮಧು ಚೆನ್ನು, ವಿಕಾಸ ಸೊನ್ನದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪತ್ರಕರ್ತರಿಂದ ವಿಶೇಷ ಸನ್ಮಾನ:ಕೆಂಭಾವಿ ಪಟ್ಟಣದ ಪ್ರಕಾಶ್. ಸಿ. ಪಾಟೀಲ ಅವರ ಸುಪುತ್ರಿ ಹುಣಸಗಿ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 617ಅಂಕ ಪಡೆಯುವ ಮೂಲಕ ಸಾಧನೆಗೈದ ಪ್ರತಾ ಪಾಟೀಲ್ ಮತ್ತು ಪತ್ರಕರ್ತ ರವಿರಾಜ ಕಂದಳ್ಳಿ ಅವರ ಸುಪುತ್ರ ಮುತ್ತುರಾಜ ಎಸ್. ಎಸ್.ಎಲ್.ಸಿ.ಯಲ್ಲಿ ಶೇಕಡ 90% ಪ್ರತಿಶತ ಪಡೆದ ಹಿನ್ನಲೆಯಲ್ಲಿ ಕೆಂಭಾವಿ ವತ್ರಕರ್ತರ ಸಂಘದ ವತಿಯಿಂದ ಸನ್ಮಾನಿ ಸಲಾಯಿತು.




