ಕಲಬುರಗಿಜಿಲ್ಲಾಸುದ್ದಿ

ಡಾ. ಫಾರುಕ್ ಮಣ್ಣೂರ ಸೇವಾ ಕಾರ್ಯ ಶ್ಲಾಘನೆ | ಕಾಂಗ್ರೆಸ್ ಸೇರ್ಪಡೆಗೆ ಜಗದೇವ ಗುತ್ತೇದಾರ ಆಹ್ವಾನ

ಡಾ. ಫಾರುಕ್ ಮಣ್ಣೂರ ಅವರ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿ ಬಳಗದ ವತಿಯಿಂಧ ಕಲಬುರಗಿ ನಗರದಲ್ಲಿರುವ ವೃದ್ದಾಶ್ರಮದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಹಾಗೂ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ 200 ಹೆಣ್ಣು ಮಕ್ಕಳ 18 ವರ್ಷಗಳವರೆಗೆ ಅವರ ಕಂತನ್ನು ಪಾವತಿಸಲು ನಿರ್ದರಿಸಿದ್ದು ಅವರ ಖಾತೆಯ ಪಾಸ್ಬುಕ್ ವಿತರಣೆ, 2026 ನೆ ಸಾಲಿನಲ್ಲಿ ಉತ್ತಮವಾಗಿ ತೇರ್ಗಡೆಯಾದ 10 ಹೆಣ್ಣು ಮಕ್ಕಳಿಗೆ ತಲಾ ರೂ.10000- ವಿದ್ಯಾರ್ಥಿವೇತನ ವಿತರಣೆ, IAS/ KAS ವಿದ್ಯಾರ್ಥಿಗಳಿಗೆ ಪುಸ್ತಕಗಳ ವಿತರಣೆ, ಕಲಬುರಗಿ ಜಿಲ್ಲೆಯ 10 ಜನ ವಿಧವೆಯರಿಗಾಗಿ ಬಟ್ಟೆ ಹೊಲಿಯುವ ಉಪಕರಣ ವಿತರಣೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 11 ಜನ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸೇರಿದಂತೆ ಅನೇಕ ಸಮಾಜಿಕ ಕಾರ್ಯಕ್ರಮ ಆಯೋಜನೆ ಮಾಡಿದ್ದರು.

ಕಲಬುರಗಿ: ಮಣ್ಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಫಾರುಕ್ ಮಣ್ಣೂರ ಅವರು ವೈದ್ಯಕೀಯ ಸೇವೆ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನರ ವಿಶ್ವಾಸ ಗಳಿಸಿದ್ದು, ಶೀಘ್ರದಲ್ಲೇ ಸಚಿವ ಪ್ರಿಯಾಂಕ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಎಂಎಲ್‌ಸಿ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ತಿಳಿಸಿದರು.

ನಗರದಲ್ಲಿ ಡಾ. ಫಾರುಕ್ ಮಣ್ಣೂರ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಡಾ. ಫಾರುಕ್ ಮಣ್ಣೂರ ಅವರ 39ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ “ಸೇವಾ ಸಂಕಲ್ಪ ದಿವಸ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜನಪರ, ಬಡವರ ಪರ ಹಾಗೂ ಹಿಂದುಳಿದವರ ಪರ ಕಾಳಜಿಯುಳ್ಳ ವ್ಯಕ್ತಿಗಳು ರಾಜಕೀಯಕ್ಕೆ ಬಂದರೆ ಸಮಾಜಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತವೂ ಬಡವರ ಪರವಾಗಿದ್ದು, ಡಾ. ಫಾರುಕ್ ಮಣ್ಣೂರ ಅವರಂತಹ ಸಮಾಜಸೇವಕರ ಅವಶ್ಯಕತೆ ಪಕ್ಷಕ್ಕೆ ಇದೆ ಎಂದು ಹೇಳಿದರು.

ಜನ್ಮದಿನದ ಅಂಗವಾಗಿ ಸುಕನ್ಯಾ ಸಮೃದ್ಧಿ ಯೋಜನೆಯಡಿ 200 ಹೆಣ್ಣು ಮಕ್ಕಳಿಗೆ 18 ವರ್ಷಗಳವರೆಗೆ ಕಂತು ಪಾವತಿಸುವುದು, 2025ನೇ ಸಾಲಿನಲ್ಲಿ ಉತ್ತಮ ಅಂಕ ಪಡೆದ 10 ವಿದ್ಯಾರ್ಥಿಗಳಿಗೆ ತಲಾ ₹10 ಸಾವಿರ ವಿದ್ಯಾರ್ಥಿವೇತನ ನೀಡುವುದು, ಐಎನ್‌ಎಸ್ ಹಾಗೂ ಎಂಎಸ್ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, 15 ವಿಧವೆಯರಿಗೆ ಹೊಲಿಗೆ ಯಂತ್ರ ವಿತರಣೆ ಹಾಗೂ ವಿವಿಧ ಕ್ಷೇತ್ರದ 11 ಸಾಧಕರಿಗೆ ಪ್ರಶಸ್ತಿ ಪ್ರದಾನ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಮಣ್ಣೂರ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಮಣ್ಣೂರ ಮಾತನಾಡಿ, ಪ್ರತಿಯೊಬ್ಬ ಪೋಷಕರು ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಶಿಕ್ಷಣ ಪಡೆದ ಹೆಣ್ಣು ಮಗು ಇಡೀ ಕುಟುಂಬವನ್ನು ವಿದ್ಯಾವಂತರನ್ನಾಗಿ ಮಾಡುತ್ತದೆ. ಆದ್ದರಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.

ಮಣ್ಣೂರ ಆಸ್ಪತ್ರೆ ಆರಂಭವಾದ ದಿನದಿಂದಲೂ ಕಲಬುರಗಿ ಜಿಲ್ಲೆಯ 750 ಕ್ಷಯರೋಗಿಗಳನ್ನು ದತ್ತು ಪಡೆದು ಪೌಷ್ಠಿಕ ಆಹಾರ ವಿತರಿಸಲಾಗುತ್ತಿದೆ. ಜಿಲ್ಲಾದ್ಯಂತ ಉಚಿತ ಕುಡಿಯುವ ನೀರಿನ ಪೂರೈಕೆ, “ಮಧುಮೇಹ ಮುಕ್ತ ಕಲಬುರಗಿ” ಉದ್ದೇಶದಿಂದ ಉಚಿತ ಮಧುಮೇಹ ತಪಾಸಣಾ ಅಭಿಯಾನ ಹಾಗೂ ಸುಮಾರು 650 ಬಡ ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯಡಿ 18 ವರ್ಷಗಳವರೆಗೆ ಹಣದ ಕಂತು ಪಾವತಿಸುವಂತಹ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀನಿವಾಸ ಸರಡಗಿಯ ಮಹಾಲಕ್ಷ್ಮಿ ಶಕ್ತಿ ಪೀಠದ ಡಾ. ಅಪ್ಪಾರಾವ ದೇವಿ ಮುತ್ಯಾ, ಜನಾಬ್ ಮೌಲಾನಾ ಅಲ್ತಾಫ್ ಪಟೇಲ್ ಸಾಹೇಬ್, ಗಂಜಲಖೇಡದ ಮೌನೇಶ್ವರ ಮಠದ ಪೂಜ್ಯ ಶ್ರೀ ನಾಗೇಶ ಮಾಣಿಕ ಅಪ್ಪಾಜಿ, ನಿಲಕಂಠರಾವ ಮೂಲಗೆ, ಡಾ. ಎಸ್.ಬಿ. ಕಾಮರಡ್ಡಿ, ಫರಾಜುಲ್ ಇಸ್ಲಾಂ, ಮರೆಪ್ಪ ಹಳ್ಳಿ, ಡಾ. ರವಿ ಚವ್ಹಾಣ, ಶರಣಬಸಪ್ಪ ಖೇಣಿ, ಬಾಬುಮಿಯ್ಯ ಮಣ್ಣೂರ, ಡಾ. ಮತೀನ್, ಎಂ.ಡಿ. ಇಸ್ಮಾಯಿಲ್, ಜಹೀರ್ ಶಹಾಬಾದ್, ರಾಜೇಶ ಯಾನಾಗುಂಟಿ, ಆಮೀರ್ ನಿಂಬಾಳಕರ್, ಹರ್ಷಾ ಪಿಂಟು, ಹರೀಶ್, ನಜೀರ್ ಸೇರಿದಂತೆ ಅನೇಕ ಗಣ್ಯರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button