ಸರ್ಕಾರಿ ಪಿಯು ಕಾಲೇಜಿಗೆ 83.51% ಫಲಿತಾಂಶ: ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

ಕೆಂಭಾವಿ:ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಿಯುಸಿ ದ್ವಿತೀಯ ಪರೀಕ್ಷೆ–೧ ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರಿದ್ದು, ಕಾಲೇಜಿಗೆ ಶೇ.83.51 ಫಲಿತಾಂಶ ಬಂದಿದೆ. ಇದಕ್ಕೆ ಪ್ರಾಚಾರ್ಯರು ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಒಟ್ಟು 194 ವಿದ್ಯಾರ್ಥಿಗಳಲ್ಲಿ 162 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ 17 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 91 ವಿದ್ಯಾರ್ಥಿಗಳು ಪ್ರಥಮ ದರ್ಜೆ, 32 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಹಾಗೂ 22 ವಿದ್ಯಾರ್ಥಿಗಳು ಪಾಸ್ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಭಾಗವಾರು ಫಲಿತಾಂಶ:ಕಲಾ ವಿಭಾಗದಲ್ಲಿ 109 ವಿದ್ಯಾರ್ಥಿಗಳ ಪೈಕಿ 95 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.83.16 ಫಲಿತಾಂಶ ದಾಖಲಾಗಿದೆ. ಕು. ಕಾವೇರಿ ಬೈಲಪ್ಪ ಪೂಜಾರಿ 562/600 (ಶೇ.93.66) ಅಂಕಗಳನ್ನು ಪಡೆದು ಕಾಲೇಜು ಹಾಗೂ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ವಾಣಿಜ್ಯ ವಿಭಾಗದಲ್ಲಿ 25 ವಿದ್ಯಾರ್ಥಿಗಳ ಪೈಕಿ 24 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.96 ಫಲಿತಾಂಶ ಬಂದಿದೆ. ಕು. ಶಿಲ್ಪ ಸಂಗಣ್ಣ 542/600 (ಶೇ.90.33) ಅಂಕಗಳನ್ನು ಪಡೆದು ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ವಿಜ್ಞಾನ ವಿಭಾಗದಲ್ಲಿ 52 ವಿದ್ಯಾರ್ಥಿಗಳ ಪೈಕಿ 43 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.82.69 ಫಲಿತಾಂಶ ಬಂದಿದೆ. ಕು. ಸೋನಿಯಾ ಮೊಹಮ್ಮದ್ ಸಾಬ್ 557/600 (ಶೇ.92.83) ಅಂಕಗಳನ್ನು ಪಡೆದು ಕಾಲೇಜಿನಲ್ಲಿ ದ್ವಿತೀಯ ಸ್ಥಾನ ಹಾಗೂ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಸಿಡಿಸಿ ಅಧ್ಯಕ್ಷ ಗುಂಡಭಟ ಜೋಶಿ, ಪ್ರಾಚಾರ್ಯ ಅಶೋಕ್ ಕುಮಾರ್ ತಳಕೇರಿ, ಉಪನ್ಯಾಸಕರಾದ ಬಸಣ್ಣ ಪೂಜಾರಿ, ವೀರೇಂದ್ರ ಧರಿ, ಉತ್ತಮ ಕುಮಾರ್, ರಾಮಣ್ಣ, ಬಸವರಾಜ್ (ಎಸ್ಡಿಎ) ಸೇರಿದಂತೆ ಸಿಬ್ಬಂದಿ ಅಭಿನಂದಿಸಿದ್ದಾರೆ.


