ಜಿಲ್ಲಾಸುದ್ದಿಯಾದಗಿರಿ

ಕೆಂಭಾವಿಯಲ್ಲಿ ಸಂಭ್ರಮದ ಅಂಬೇಡ್ಕರ್ ಜಯಂತಿ ಆಚರಣೆ

ಕೆಂಭಾವಿ: ಪಟ್ಟಣದ ಮಹಾನಾಯಕ ವೃತ್ತದಲ್ಲಿ ಭಾರತ ಭಾಗ್ಯವಿಧಾತ, ಮಹಾಮಾನವತಾವಾದಿ, ಸಮಾನತೆಯ ಹರಿಕಾರ, ದೀನದಲಿತರ ಬಂಧು ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖರು, ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ, ಶಿಕ್ಷಕರು, ಯುವಕರು, ದಲಿತ ಸಮುದಾಯದ ಮುಖಂಡರು, ಹಿರಿಯರು ಮತ್ತು ಮಕ್ಕಳು ಭಾಗವಹಿಸಿದ್ದರು.

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯ ಅಶೋಕ್ ಕುಮಾರ್ ತಳ್ಕೇರಿ ಅವರ ನೇತೃತ್ವದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು. ಉಪನ್ಯಾಸಕರು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪಿಎಸಿಎಸ್ ಕೆಂಭಾವಿ–2 ಸಂಘದ ಕಾರ್ಯಾಲಯ ದಲ್ಲಿಯೂ ಜಯಂತಿ ಅಂಗವಾಗಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ನಾಮನಿರ್ದೇಶಿತ ಸದಸ್ಯ ಪರಶುರಾಮ ಬಳಬಟ್ಟಿ ಮಾತನಾಡಿ, ಅಂಬೇಡ್ಕರ್ ಅವರು ಸಮಾಜದಲ್ಲಿ ಸಮಾನತೆ ಮತ್ತು ಸೌಹಾರ್ದತೆ ಸ್ಥಾಪನೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಮಹಾನ್ ವ್ಯಕ್ತಿ ಎಂದು ಹೇಳಿದರು.

ಶಿಕ್ಷಣವೇ ಸಮಾನತೆಯ ಮಾರ್ಗ ಎಂದು ಅವರು ಪ್ರತಿಪಾದಿಸಿದ್ದನ್ನು ಸ್ಮರಿಸಿದರು.ಕಾರ್ಯದರ್ಶಿ ರಂಗಪ್ಪ ವಡ್ಡರ, ಶರಣು ಅರಕೇರಾ, ಮಾರುತಿ ಆರ್. ಭೋವಿ, ಡಿಎಸ್ಎಸ್ ಮುಖಂಡರಾದ ರಾಯಪ್ಪ ಯತ್ನಾಳ, ಮಹೇಶ ಕಟ್ಟಿಮನಿ, ಶರಣು ಬಸರಿಗಿಡ, ತಿಪ್ಪಣ್ಣ ಅಗ್ನಿ, ಸೈದಪ್ಪ ಅರಳಗುಂಡಿಗಿ, ಹಣಮಂತರಾಯ ಅಂಬರಖೇಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ಡ್ ನಂ. 1ರ ಅಂಗನವಾಡಿ ಕೇಂದ್ರದಲ್ಲಿಯೂ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಬಸಮ್ಮ ಬಿ.ಎಂ., ಸಹಾಯಕಿ ಮರೆಮ್ಮ ಹಾಗೂ ಸ್ಥಳೀಯ ಮುಖಂಡರಾದ ಸಾಯಿಬಣ್ಣ ಎಂಟಮನ, ಭೀಮು ಮಳಿಕೇರಿ, ಈರಣ್ಣ, ಮನು ಎಂಟಮನ ಸೇರಿದಂತೆ ಮಕ್ಕಳು ಭಾಗವಹಿಸಿದರು.

Related Articles

Leave a Reply

Your email address will not be published. Required fields are marked *

Back to top button