ಕಲಬುರಗಿಜಿಲ್ಲಾಸುದ್ದಿ

ಉಚಿತ ಮೆಗಾ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಕಲಬುರಗಿ: ಅಣ್ಣಾರಾವ ಹರಿದಾಸ ಅವರ ಪುಣ್ಯತಿಥಿಯ ಅಂಗವಾಗಿ ಹರಿದಾಸ ಹೃದಯ ಆಸ್ಪತ್ರೆ ಹಾಗೂ ಶರಣ ನೇತ್ರಾಲಯಗಳ ಸಹಯೋಗದಲ್ಲಿ ಅಫಜಲಪೂರ ತಾಲೂಕಿನ ದೇವಲ ಗಣಗಾಪುರದ ಸಂಗಮ್ ರಸ್ತೆಯ ಗುಳವಾಣಿ ಮಹಾರಾಜ ಮಠದಲ್ಲಿ ಉಚಿತ ಮೆಗಾ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.

ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ್ ಎಮ್.ವೈ. ಪಾಟೀಲ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಇಂತಹ ಆರೋಗ್ಯ ಶಿಬಿರಗಳು ಗ್ರಾಮೀಣ ಭಾಗದ ಜನರಿಗೆ ಅತ್ಯಂತ ಉಪಯುಕ್ತವಾಗಿವೆ ಎಂದು ಹೇಳಿದರು.

ಹಿರಿಯ ಹೃದಯ ತಜ್ಞ ಡಾ. ಅರುಣಕುಮಾರ ಹರಿದಾಸ್ ಮಾತನಾಡಿ, ಆರೋಗ್ಯದ ಕಡೆ ಜನರು ಹೆಚ್ಚಿನ ಗಮನ ಹರಿಸಬೇಕು ಹಾಗೂ ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು.

ಶಿಬಿರದಲ್ಲಿ ವಿವಿಧ ಕ್ಷೇತ್ರಗಳ ತಜ್ಞ ವೈದ್ಯರು ಭಾಗವಹಿಸಿ ಸಾರ್ವಜನಿಕರಿಗೆ ಸಮಾಲೋಚನೆ ಹಾಗೂ ಚಿಕಿತ್ಸೆ ನೀಡಿದರು. ಹಿರಿಯ ಹೃದಯ ತಜ್ಞ ಡಾ. ಅರುಣಕುಮಾರ ಹರಿದಾಸ್, ಮಕ್ಕಳ ತಜ್ಞ ಡಾ. ಕಿರಣ ಹರಿದಾಸ್, ಕಣ್ಣಿನ ತಜ್ಞ ಡಾ. ರೋಹಿತ ಪಾಟೀಲ್, ಶ್ವಾಸಕೋಶ ತಜ್ಞ ಡಾ. ಹರ್ಷ ಮೂರ್ತಿ ಹಾಗೂ ಡಾ. ಮಹೇಶ್ ಗಾಯಕವಾಡ ತಪಾಸಣೆ ನಡೆಸಿದರು. ಬಳಿಕ ಎಲ್ಲಾ ವೈದ್ಯರನ್ನು ಸನ್ಮಾನಿಸಲಾಯಿತು.ಶಿಬಿರದಲ್ಲಿ ಹೃದಯ, ಶ್ವಾಸಕೋಶ ಹಾಗೂ ಕಣ್ಣಿನ ಕಾಯಿಲೆಗಳ ತಪಾಸಣೆ ನಡೆಸಲಾಯಿತು. ಮಕ್ಕಳಿಗೆ ವಿಶೇಷ ತಪಾಸಣೆ ಹಾಗೂ ಸಲಹೆ ನೀಡಲಾ ಯಿತು.

ಜೊತೆಗೆ ರಕ್ತದೊತ್ತಡ (ಬಿಪಿ), ರಕ್ತದಲ್ಲಿನ ಸಕ್ಕರೆ ಮಟ್ಟ ಹಾಗೂ ಇಸಿಜಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಯಿತು.ದೇವಲ್ ಗಣಗಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ 250ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉಚಿತ ಔಷಧಿಗಳನ್ನು ಪಡೆದರು.

ಈ ಶಿಬಿರವನ್ನು ಡಾ. ಅರುಣಕುಮಾರ್ ಹರಿದಾಸ್, ಶ್ರೀಮ ತಿ ಕೋಮಲೇಶ್ವರಿ ಹರಿದಾಸ್ ಹಾಗೂ ವಿಜಯಕು ಮಾರ ಹರಿದಾಸ್ ಅವರ ಪ್ರಾಯೋಜಕತ್ವದಲ್ಲಿ ಆಯೋಜಿಸಲಾ ಗಿತ್ತು. ಸ್ಥಳೀಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.

Related Articles

Leave a Reply

Your email address will not be published. Required fields are marked *

Back to top button