ಕಲಬುರಗಿಜಿಲ್ಲಾಸುದ್ದಿ

ಮಾದಿಗ ಸಮಾಜದ ನೂತನ ಅಧ್ಯಕ್ಷರಾಗಿ ಲಕ್ಷ್ಮೀಪುತ್ರ ಬಬಲಾದ ಆಯ್ಕೆ

ಅಫಜಲಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಾದಿಗ ಸಮಾಜದ ಪದಾಧಿಕಾರಿಗಳ ಆಯ್ಕೆ ಸಭೆ ಶನಿವಾರ ಯಶಸ್ವಿಯಾಗಿ ನಡೆಯಿತು.

ಸಭೆಯಲ್ಲಿ ತಾಲೂಕು ಮಾದಿಗ ಸಮಾಜದ ನೂತನ ಅಧ್ಯಕ್ಷರಾಗಿ ಲಕ್ಷ್ಮೀಪುತ್ರ ಬಬಲಾದ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ನಿಂಗಣ್ಣ ಪಾಟೋಳಿ, ಚಂದ್ರಕಾಂತ ತೇಲ್ಕರ್ ಹಾಗೂ ಮೌಲಾಲಿ ಹೂವನಳ್ಳಿ ಅವರನ್ನು ಆಯ್ಕೆ ಮಾಡಲಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಬಾಬುರಾಯ ಭೋಗನಳ್ಳಿ, ಸಹ ಕಾರ್ಯದರ್ಶಿಯಾಗಿ ಚಂದ್ರಶೇಖರ ಕಾಂಬಳೆ ನೇಮಕಗೊಂಡರು. ಸಂಘಟನೆ ಕಾರ್ಯದರ್ಶಿಗಳಾಗಿ ಮಹೇಶ ಹೊಸೂರ, ಶರಣು ಕೇಸಾಪೂರ ಮತ್ತು ಚಂದ್ರಕಾಂತ ಕಟ್ಟಿಮನಿ ಅವರನ್ನು ನೇಮಿಸಲಾಯಿತು.

ಖಜಾಂಚಿಗಳಾಗಿ ಅಶೋಕ ದೊಡ್ಮನಿ ಮತ್ತು ರಾಜು ಮದರ (ಬಿ) ಅವರನ್ನು ಆಯ್ಕೆ ಮಾಡಲಾಗಿದೆ.

ಇದೇ ಸಂದರ್ಭದಲ್ಲಿ ಡಾ. ಬಾಬು ಜಗಜೀವರಾಂ ಅವರ ತಾಲೂಕು ಜಯಂತೋತ್ಸವ ಸಮಿತಿ ಅಧ್ಯಕ್ಷರಾಗಿ ಹಿರಿಯ ಮುಖಂಡ ಭಾಗಣ್ಣ ಘತ್ತರಗಿ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಭಾಗಣ್ಣ ಘತ್ತರಗಿ, ರಾಜು ಕಟ್ಟಿಮನಿ, ಶ್ರೀಕಾಂತ ಮಾಶಾಳಕರ್, ಗುಂಡಪ್ಪ ಗಂದೆನವರ್, ಪರುಶುರಾಮ ಬಿಲ್ವಾಡ, ಸುನೀಲ ಕಟ್ಟಿಮನಿ, ಲಕ್ಷ್ಮಣ ಆನೂರ, ಕಾಳಪ್ಪ ಪೂಜಾರಿ, ಶಿವಶಂಕರ ದೊಡ್ಮನಿ, ಶ್ರೀಪಾದ ದೊಡ್ಮನಿ, ಪರುಶರಾಮ ನಂದರ್ಗಿ ಹಾಗೂ ಗೋಪಾಲ ಮಾಂಗ ಹಳ್ಯಾಳ ಸೇರಿದಂತೆ ಜಿಲ್ಲಾ ಮಾದಿಗ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು.

ಸಭೆಯ ಅಂತ್ಯದಲ್ಲಿ ನೂತನ ಪದಾಧಿಕಾರಿಗಳಿಗೆ ಶುಭಾಶಯಗಳನ್ನು ತಿಳಿಸಿ, ಸಮಾಜದ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಲಾಯಿತು.

Related Articles

Leave a Reply

Your email address will not be published. Required fields are marked *

Back to top button