ಜಿಲ್ಲಾಸುದ್ದಿಯಾದಗಿರಿ

ಕೆಂಭಾವಿ ಪಟ್ಟಣದಲ್ಲಿ ಸತತ 28ನೇಯ ವರ್ಷ ಶ್ರೀಶೈಲ ಪಾದಯಾತ್ರಿಗಳಿಗೆ ದಾಸೋಹ

ಕೆಂಭಾವಿ: ಭಕ್ತಿ ಮತ್ತು ಸೇವೆಯ ಸಂಗಮವಾಗಿರುವ ಇಲ್ಲಿನ ಸಂಜೀವನಗರ ಬಡಾವಣೆಯಲ್ಲಿ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ತೆರಳುವ ಪಾದಯಾತ್ರಿಗಳಿಗಾಗಿ ಹಮ್ಮಿಕೊಳ್ಳಲಾದ ದಾಸೋಹ ಸೇವೆ ಯಶಸ್ವಿಯಾಗಿ ಜರುಗಿತು.

ಈ ದಾಸೋಹ ಕೈಂಕರ್ಯವು ಸತತ 28 ವರ್ಷಗಳಿಂದ ಅವಿರತವಾಗಿ ನಡೆದುಕೊಂಡು ಬರುತ್ತಿರುವುದು ವಿಶೇಷ.ಪ್ರತಿವರ್ಷದಂತೆ ಈ ಬಾರಿಯೂ ಮನ್ರುಪ್, ತೇಲಗಾಂವ್, ಕಗ್ಗೋಡ್, ಹೊನ್ನಟಗಿ, ಹಡಗಲಿ, ಶಿವಣಗಿ ಕಲಕೇರಿ, ದೇವರಹಿಪ್ಪರಗಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ಮಹಾರಾಷ್ಟ್ರದಿಂದ ಆಗಮಿಸುವ ಸಾವಿರಾರು ಪಾದಯಾತ್ರಿಗಳಿಗೆ ಇಲ್ಲಿನ ಸಂಜೀವಾಂಜನೆಯ ದೇವಸ್ಥಾನದಲ್ಲಿ ಆಶ್ರಯ ಹಾಗೂ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಶಿವಣ್ಣ ಬಳಬಟ್ಟಿ, ಶರಣಪ್ಪ ಸಾಹು ತಳವಾರಗೇರಿ, ಆನಂದರಾವ್ ಕುಲ್ಕರ್ಣಿ ಸೇರಿದಂತೆ ಬಡಾವಣೆಯ ಪ್ರಮುಖರ ನೇತೃತ್ವದಲ್ಲಿ ಈ ಸೇವಾ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಶಿವಣ್ಣ ಬಳಬಟ್ಟಿ ಅವರು, ಕಳೆದ 28 ವರ್ಷಗಳಿಂದ ಬಡಾವಣೆಯ ಸರ್ವರ ಸಹಕಾರದೊಂದಿಗೆ ಈ ದಾಸೋಹ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಪಾದಯಾತ್ರಿಗಳ ಸೇವೆ ಮಾಡುವುದು ನಮಗೆ ಅತೀವ ತೃಪ್ತಿ ನೀಡುತ್ತದೆ. ಮಲ್ಲಿಕಾರ್ಜುನನ ಭಕ್ತರಿಗೆ ಸೇವೆ ಮಾಡುವ ಭಾಗ್ಯ ಲಭಿಸಿರುವುದು ನಮ್ಮ ಪುಣ್ಯ ಎಂದು ಭಾವುಕರಾಗಿ ನುಡಿದರು.

ನಿವೃತ್ತ ಶಿಕ್ಷಕ ಶಿವಾನಂದಯ್ಯ ಸ್ವಾಮಿ ಹಿರೇಮಠ, ಸಿದ್ದನಗೌಡ ಕಾಚಾಪುರ, ಮಲ್ಲಣ್ಣ ಅಸಂತಾಪುರ, ಗೊಲ್ಲಾಳಪ್ಪ ಸಾಹು ಗುಗ್ಗರಿ, ಉದಯ ಕುಲ್ಕರ್ಣಿ, ಸಿದ್ದಣ್ಣ ಕರಡಕಲ್, ವಿರುಪಾಕ್ಷಪ್ಪಗೌಡ ರೋಡಲಬಂಡಾ, ಮಲ್ಕಣ್ಣ ದುಮ್ಮದ್ರಿ, ಶ್ರೀಶೈಲ ಚಟ್ಟನಹಳ್ಳಿ, ಪ್ರಭುಗೌಡ ನಂದೆಳ್ಳಿ ಸೇರಿದಂತೆ ಹಲವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button