ಕಲಬುರಗಿಜಿಲ್ಲಾಸುದ್ದಿ

ಕಲಬುರಗಿ |ನ್ಯಾಯಕ್ಕಾಗಿ ಜೇವರ್ಗಿಯಲ್ಲಿ ಪೌರಕಾರ್ಮಿಕರ ಧರಣಿ: ವೇತನ–ಉದ್ಯೋಗಕ್ಕಾಗಿ ಹೋರಾಟ

ಜೇವರ್ಗಿ :ಬಾಕಿ ವೇತನ ಪಾವತಿ, ಮರುನೇಮಕ ಹಾಗೂ ನ್ಯಾಯಾಲಯದ ಆದೇಶ ಜಾರಿಗೆ ಆಗ್ರಹಿಸಿ ಜೇವರ್ಗಿಯಲ್ಲಿ ಪೌರಕಾರ್ಮಿಕರು ತಹಶೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟ ಧರಣಿ ಮುಂದುವರಿಸಿದ್ದಾರೆ.

ವರ್ಷಗಳ ಕಾಲ ಪುರಸಭೆಯಲ್ಲಿ ಸೇವೆ ಸಲ್ಲಿಸಿದ ಕಾರ್ಮಿಕರು ನಾಲ್ಕು ವರ್ಷಗಳಿಂದ ಉದ್ಯೋಗವಿಲ್ಲದೆ ಸಂಕಷ್ಟದಲ್ಲಿದ್ದು, ಯಾವುದೇ ದಾಖಲೆಗಳಿಲ್ಲದೆ ಕೆಲಸ ಮಾಡಿಸಿಕೊಂಡು ನಂತರ ವಜಾಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಇದರ ಪರಿಣಾಮವಾಗಿ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.ನ್ಯಾಯಾಲಯದ ಆದೇಶಗಳ ಜಾರಿಗೆ ವಿಳಂಬ ವಾಗುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೂ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲವರ ವಿರುದ್ಧ ಪ್ರಕರಣ ದಾಖಲಿಸುವ ಕ್ರಮವೂ ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿದೆ. ಇದೇ ವೇಳೆ, ಹೋರಾಟಕ್ಕೆ ವಿವಿಧ ಸಂಘಟನೆಗಳು ಹಾಗೂ ನಾಯಕರು ಬೆಂಬಲ ಸೂಚಿಸಿದ್ದಾರೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಾಂತಪ್ಪ ಕೂಡಲಗಿ, ಮರಿಯಪ್ಪ ಬಡಿಗೇರ್, ಚಂದ್ರಶೇಖರ್ ಹರನಾಳ, ಶಿವರಾಜ್ ಪಾಟೀಲ್ ರದ್ದೇವಾಡಗಿ, ಮಲ್ಲಣ್ಣ ಕೊಡಚಿ, ಶ್ರೀಹರಿ ಕರ್ಕಿಹಳ್ಳಿ, ರಾಯಪ್ಪ ಭಾರಿಗಿಡ, ರವಿ ಕೊಳಗೇರಿ ಸೇರಿದಂತೆ ಹಲವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾ ರೆ.

ನ್ಯಾಯ ಸಿಗುವ ತನಕ ಹೋರಾಟ ಮುಂದುವರಿಯಲಿದೆ” ಎಂದು ಕಾರ್ಮಿಕರು ತಿಳಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button