ವಕೀಲರ ಸಮಸ್ಯೆಗಳ ಪರಿಹಾರಕ್ಕೆ ಬದ್ಧ: ಕೆಎಸ್‌ಬಿಸಿ ಅಭ್ಯರ್ಥಿ ಬಾಲಕೃಷ್ಣನ್
ಜೇವರ್ಗಿ ನ್ಯಾಯಾಲಯಕ್ಕೆ ಅಭ್ಯರ್ಥಿ ಭೇಟಿ

ಜೇವರ್ಗಿ: ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆಯ ಅಂಗವಾಗಿ ರಾಜ್ಯ ಮಟ್ಟದ ಅಭ್ಯರ್ಥಿ ಬಾಲಕೃಷ್ಣನ್ ಅವರು ಜೇವರ್ಗಿ ನ್ಯಾಯಾಲಯಕ್ಕೆ ಭೇಟಿ ನೀಡಿ ವಕೀಲರೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಜೇವರ್ಗಿ ವಕೀಲರ ಸಂಘದ ಕಾರ್ಯದರ್ಶಿ ರಾಜಶೇಖರ್ ಶಿಲ್ಪಿ, ವಕೀಲರ ಸಂಘದ ಖಜಾಂಚಿ ಅಶೋಕ್ ಜೀರ, ಬೆಣ್ಣೆಪ್ಪ ಸಿ. ಕಂಬಿಟ್ಕರ್, ಪಂಚ ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಶಂಕರ್ ಅಲಿ ಆಲೂರು, ಭೀಮಶಂಕರ ಮಡಿಹಾಳ ಸೇರಿದಂತೆ ತಾಲೂಕಿನ ಹಿರಿಯ ಹಾಗೂ ಕಿರಿಯ ಅನೇಕ ವಕೀಲರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅಭ್ಯರ್ಥಿ ಬಾಲಕೃಷ್ಣನ್ ಅವರು, “ವಕೀಲರ ಸಮಸ್ಯೆಗಳ ಪರಿಹಾರಕ್ಕೆ ನಾನು ಬದ್ಧನಾಗಿದ್ದೇನೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರ ಗೌರವ, ಭದ್ರತೆ ಹಾಗೂ ಹಿತಾಸಕ್ತಿಗಳನ್ನು ಕಾಪಾಡಲು ಸದಾ ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇನೆ,” ಎಂದು ಹೇಳಿದರು.
ರಾಜ್ಯ ವಕೀಲರ ಪರಿಷತ್ ಚುನಾವಣೆಯಲ್ಲಿ ಕ್ರಮ ಸಂಖ್ಯೆ 12 ಪ್ರಥಮ ಸ್ಥಾನಕ್ಕೆ ಮತ ನೀಡುವಂತೆ ಅವರು ವಕೀಲರಿಗೆ ಮನವಿ ಮಾಡಿದರು. “ವಕೀಲರ ಏಕತೆ ಮತ್ತು ಬೆಂಬಲವೇ ನನ್ನ ಶಕ್ತಿ. ನಿಮ್ಮ ವಿಶ್ವಾಸವನ್ನು ನಿಶ್ಚಯವಾಗಿ ಉಳಿಸಿಕೊಳ್ಳುತ್ತೇನೆ,” ಎಂದು ಮತಯಾಚನೆ ನಡೆಸಿದರು.
ಸಭೆಯ ಕೊನೆಯಲ್ಲಿ ಹಲವಾರು ವಕೀಲರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ಪರಿಷತ್‌ನಲ್ಲಿ ಬದಲಾವಣೆಯ ಅಗತ್ಯತೆಯನ್ನು ಒತ್ತಿಹೇಳಿದರು.
ಚುನಾವಣಾ ಪ್ರಚಾರದ ಭಾಗವಾಗಿ ವಿವಿಧ ತಾಲ್ಲೂಕುಗಳಲ್ಲಿ ಭೇಟಿ ನೀಡುತ್ತಿರುವ ಬಾಲಕೃಷ್ಣನ್ ಅವರಿಗೆ ಜೇವರ್ಗಿ ವಕೀಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.



