ಕಲಬುರಗಿಜಿಲ್ಲಾಸುದ್ದಿ

ಕಟ್ಟಡ ಕಾರ್ಮಿಕರ 9 ಬೇಡಿಕೆಗಳ ಈಡೇರಿಕೆ: ಕಮಕನೂರರಿಗೆ ಮನವಿ

ಕಲಬುರಗಿ: ಕಟ್ಟಡ ಕಾರ್ಮಿಕರ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, KSCWCU-NCL ಜಿಲ್ಲಾ ಸಮಿತಿ ಪದಾಧಿಕಾರಿಗಳು ವಿಧಾನ ಪರಿಷತ್ (ಹಂಗಾಮಿ ಸಭಾಪತಿಗಳು) ಶಾಸಕರಾದ ಶ್ರೀ ತಿಪ್ಪಣ್ಣಪ್ಪ ಕಮಕನೂರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭೇಟಿಯಾದ ಸಂದರ್ಭದಲ್ಲಿ ಕಾರ್ಮಿಕರ 9 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು. ಅಲ್ಲದೆ, ವಿಧಾನ ಪರಿಷತ್ ಸದನದಲ್ಲಿ ಕಟ್ಟಡ ಕಾರ್ಮಿಕರ ಸಮಸ್ಯೆಗಳ ಕುರಿತು ಧ್ವನಿ ಎತ್ತಿ, ಸರ್ಕಾರದ ಗಮನ ಸೆಳೆಯುವಂತೆ ಮನವಿ ಪತ್ರದ ಮೂಲಕ ವಿನಂತಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷರಾದ ಶಂಕರ ಕಟ್ಟಿಸಂಗಾವಿ, ಜಿಲ್ಲಾ ಅಧ್ಯಕ್ಷರಾದ ಮೋಸಿನ ಪಟೇಲ, ಜಿಲ್ಲಾ ಉಪಾಧ್ಯಕ್ಷರಾದ ಮಹಿಬೂಬ ಖಾನ್, ಜೇವರ್ಗಿ ತಾಲೂಕು ಅಧ್ಯಕ್ಷರಾದ ಶೇಖ ಮಕಬೂಲ ಗುತ್ತೇದಾರ, ಅಫಜಲಪುರ ತಾಲೂಕು ಅಧ್ಯಕ್ಷರಾದ ಯಲ್ಲಪ್ಪ ಕುರಡೆಕರ್, ಜೇವರ್ಗಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಕಾಂತಪ್ಪ ಕಲ್ಲೂರ, ತಾಲೂಕು ಕಾರ್ಯದರ್ಶಿಗಳಾದ ಶಂಶೋದ್ದಿನ್ ಹಿಪ್ಪರಗಿ, ಜಿಲ್ಲಾ ಮುಖಂಡರಾದ ಉದಯಕುಮಾರ ಹಿಪ್ಪರಗಿ, ದಶರಥ ಗುತ್ತೇದಾರ, ಡಿ.ಕೆ. ಮಂಜುನಾಥ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button