ಜಿಲ್ಲಾಸುದ್ದಿಯಾದಗಿರಿ

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಅವೈಜ್ಞಾನಿಕವಾಗಿದೆ :ಶಿವಶರಣ ಯಾಳಗಿ

ಕೆಂಭಾವಿ : ರಾಜ್ಯ ಸರ್ಕಾರ ನೇಮಕ ಮಾಡಿದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗವು ನೀಡಿರುವ ವರದಿಯು ಅವೈಜ್ಞಾನಿಕ ದೋಷಪೂರಿತ ಹಾಗೂ ಪಕ್ಷಪಾತದಿಂದ ಕೂಡಿದೆ ಒಳಮಿಸಲಾತಿ ನೀತಿ, ಆಯೋಗದ ವರದಿ ಹಾಗೂ ರೋಸ್ಟರ್ ವ್ಯವಸ್ಥೆಗಳ ವಿರೋಧವಾಗಿ ಈ ವರದಿಯನ್ನು ತಿರಸ್ಕರಿಸಿ ಮರು ಸಮೀಕ್ಷೆ ನಡೆಸಲು ಕೆ ಆರ್ ಡಿ ಎಸ್ ಎಸ್ ಜಿಲ್ಲಾ ಸಂಘಟನಾ ಸಂಚಾಲಕರಾದ ಶಿವಶರಣ ಯಾಳಗಿ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಇದೇ ಬುಧವಾರ 25ರಂದು ಬೆಂಗಳೂರು ನಗರದ ಫ್ರೀಡಂ ಪಾರ್ಕ ನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳಿಗೆ ಅನ್ಯಾಯವಾಗುತ್ತಿದ್ದು, ಪರಿಶಿಷ್ಟ ಜಾತಿಗಳ ಒಳಮಿಸಲಾತಿ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳು ಅವೈಜ್ಞಾನಿಕವಾಗಿದೆ‌. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಏಕಸದಸ್ಯ ಆಯೋಗದ ವರದಿ ಅಪೂರ್ಣವಾಗಿದ್ದು, ಸಮೀಕ್ಷೆ ಸರಿಯಾದ ರೀತಿಯಲ್ಲಿ ನಡೆದಿಲ್ಲ ಎಂಬ ಆಕ್ಷೇಪವನ್ನು ಹಲವಾರು ಸಂಘಟನೆಗಳು ವ್ಯಕ್ತಪಡಿಸಿದ್ದರೂ, ಅದನ್ನು ಪರಿಗಣಿಸದೆ ವರದಿ ಸಲ್ಲಿಸಲಾಗಿದೆ. ಇದೊಂದು ಒಳ ಮೀಸಲಾತಿಯಲ್ಲಿ ಬಲಗೈ ಹಾಗೂ ಮತ್ತಿತರ ಸಮುದಾಯದಗಳಿಗೆ ಮರಣ ಶಾಸನವಾಗುತ್ತದೆ.

ರೋಸ್ಟರ್ ಬಿಂದುಗಳ ವಿಷಯದಲ್ಲಿ ಉಂಟಾಗಿರುವ ಅತಿ ಗೊಂದಲದಿಂದ ನಾಗಮೋಹನ್ ದಾಸ್ ಸಮಿತಿ ನೀಡಿರುವ ವರದಿ ಅವೈಜ್ಞಾನಿಕವಾಗಿದೆ. ಹಂಚಿಕೆ ಹಾಗೂ ರೋಸ್ಟರ್ ವ್ಯವಸ್ಥೆಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಆದ್ದರಿಂದ, ಆ ವರದಿ ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾ.25 ರಂದು ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದೇವೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಕೆ ಆರ್ ಡಿ ಎಸ್ ಎಸ್ (ನಾಗವಾರ ಸ್ಥಾಪಿತ) ಪದಾಧಿಕಾರಿಗಳಾದ ಶಿವಪ್ಪ ಕಂಬಾರ್,ಮಂಜುನಾಥ ಕೊಂಬಿನ, ಹನಮಂತ ಬಮ್ಮನಹಳ್ಳಿ, ಶಿವು ದೇವರಮನಿ, ಖಂಡಪ್ಪಾ ಯಾಳಗಿ, ಸಿದ್ದು ಕರಡಕಲ್, ಸಿದ್ಧಾರ್ಥ ಮಾಳಳ್ಳಿಕರ, ಸೂಗಪ್ಪ ನಗನೂರು, ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button