ಜಿಲ್ಲಾಸುದ್ದಿಯಾದಗಿರಿ

ಸುರಪುರ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸ್ಮರಣ ಸಂಚಿಕೆಗೆ ಲೇಖನ-ಕವನ ಆಹ್ವಾನ

ಕೆಂಭಾವಿ: ಮುಂಬರುವ ಏಪ್ರಿಲ್ 4ರಂದು ಕೆಂಭಾವಿ ಪಟ್ಟಣದಲ್ಲಿ ನಡೆಯಲಿರುವ ಸುರಪುರ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹೊರತರಲಿರುವ ಸ್ಮರಣ ಸಂಚಿಕೆಗೆ ಲೇಖನಗಳು ಮತ್ತು ಕವನಗಳನ್ನು ಆಹ್ವಾನಿಸಲಾಗಿದೆ.

ಈ ಕುರಿತು ಸ್ಮರಣ ಸಂಚಿಕೆ ಸಮಿತಿಯ ಸಂಪಾದಕರು ಮಾಹಿತಿ ನೀಡಿದ್ದು, ತಾಲೂಕಿನ ಬರಹಗಾರರು ಮತ್ತು ಸಾಹಿತ್ಯಾಸಕ್ತರು ತಾಲೂಕಿನ ಪ್ರಾದೇಶಿಕ ವೈಶಿಷ್ಟ್ಯಗಳು, ಕಲೆ, ಸಾಹಿತ್ಯ, ನಾಡು-ನುಡಿ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಬರಹಗಳನ್ನು ಕಳುಹಿಸಿಕೊಡಬೇಕು ಎಂದು ಕೋರಿದ್ದಾರೆ.

ತಾಲೂಕಿನ ಇತಿಹಾಸ, ಕಲೆ-ಸಂಸ್ಕೃತಿ ಪರಂಪರೆ, ಭೌಗೋಳಿಕ ಸೌಂದರ್ಯ, ಧಾರ್ಮಿಕ ಕ್ಷೇತ್ರಗಳು, ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳು ಹಾಗೂ ಮಣ್ಣಿನ ಹೆಮ್ಮೆಯ ಸಾಧಕರ ಪರಿಚಯ ಕುರಿತ ಲೇಖನಗಳನ್ನು ಗರಿಷ್ಠ 250 ರಿಂದ 300 ಪದಗಳ ಮಿತಿಯಲ್ಲಿ ಕಳುಹಿಸಬೇಕು. ಜೊತೆಗೆ ಸ್ವರಚಿತ ಕವನಗಳು 12 ರಿಂದ 16 ಸಾಲುಗಳೊಳಗೆ ಇರಬೇಕು ಎಂದು ತಿಳಿಸಿದ್ದಾರೆ.

ಲೇಖನ ಮತ್ತು ಕವನಗಳನ್ನು ‘ನುಡಿ’ ಅಥವಾ ‘ಬರಹ’ ತಂತ್ರಾಂಶದಲ್ಲಿ ಟೈಪ್ ಮಾಡಿ ಕಳುಹಿಸಬೇಕು. ಆಸಕ್ತ ಬರಹಗಾರರು ತಮ್ಮ ವಿಳಾಸ ಸಮೇತ ಮಾರ್ಚ್ 14, 2026ರೊಳಗೆ ನಿಗದಿಪಡಿಸಿದ ಇಮೇಲ್ ಅಥವಾ ವಾಟ್ಸಪ್ ಮೂಲಕ ಕಳುಹಿಸಲು ಕೋರಲಾಗಿದೆ.

ತಾಲೂಕಿನ ಸಾಹಿತ್ಯಿಕ ಶ್ರೀಮಂತಿಕೆಯನ್ನು ದಾಖಲಿಸುವ ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಸ್ಮರಣ ಸಂಚಿಕೆ ಸಮಿತಿ ವಿನಂತಿಸಿದೆ.

ಲೇಖನ ಕಳುಹಿಸಲು:
ಇಮೇಲ್: kemsammelana3@gmail.com
ವಾಟ್ಸಪ್: 9972456360, 9008370650, 9901216023

ಕವನ ಕಳುಹಿಸಲು ವಾಟ್ಸಪ್:
9900169400, 9901296143

Related Articles

Leave a Reply

Your email address will not be published. Required fields are marked *

Back to top button