ಕೆಂಭಾವಿ ಪಟ್ಟಣದೆಲ್ಲೆಡೆ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ

ಕೆಂಭಾವಿ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಶುಕ್ರವಾರ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ವಿವಿಧೆಡೆ ಧ್ವಜಾರೋಹಣ, ದೇಶಭಕ್ತಿ ಸಂದೇಶ ಹಾಗೂ ಮಹನೀಯರ ಸ್ಮರಣೆ ಕಾರ್ಯಕ್ರಮಗಳು ನಡೆದವು.
ಅಂಬೇಡ್ಕರ್ ಚೌಕದಲ್ಲಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಚೌಕದಲ್ಲಿ ಪುರಸಭೆ ಉಪಾಧ್ಯಕ್ಷೆ ಲಕ್ಷ್ಮಿಬಾಯಿ ಜಿ. ಕಂಬಾರ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಯಪ್ಪ ಎಂ. ಯತ್ನಾಳ, ‘ಬ್ರಿಟಿಷರ ಸುಮಾರು ಎರಡು ಶತಮಾನಗಳ ಆಳ್ವಿಕೆಯಿಂದ ದೇಶವನ್ನು ಮುಕ್ತಗೊಳಿಸಲು ಅನೇಕ ಗಣ್ಯರು ಹಾಗೂ ಹೋರಾಟಗಾರರು ತ್ಯಾಗ, ಬಲಿದಾನ ಮಾಡಿದ್ದಾರೆ. ಸ್ವಾತಂತ್ರ್ಯ ದೊರೆತು 80 ವರ್ಷಗಳಾದರೂ ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಸ್ವಾತಂತ್ರ್ಯ ಮತ್ತು ಅವಕಾಶಗಳು ದೊರೆತಿಲ್ಲ ಎಂಬುದು ನೋವಿನ ಸಂಗತಿ. ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಸಾಧ್ಯ’ ಎಂದರು.
ಕೃಷಿ ಅಧಿಕಾರಿ ವಾದಿರಾಜ ಕುಲಕರ್ಣಿ, ದಲಿತ ಮುಖಂಡರಾದ ತಿಪ್ಪಣ್ಣ ಅಂಬರಖೇಡ, ಸೈದಪ್ಪ ಅರಳಗುಂಡಗಿ, ಶಿವಶರಣಪ್ಪ ವಾಡಿ, ತಿಪ್ಪಣ್ಣ ಅಗ್ನಿ, ಶರಣಪ್ಪ ಅನ್ನೂರ್, ಮಾನಪ್ಪ ಮಾಳಳ್ಳಿಕರ್, ಭೀಮಪ್ಪ ಯಮನೂರ್, ಜುಮ್ಮಣ್ಣ ಕಟ್ಟಿಮನಿ, ಮಾದೇವಪ್ಪ ಬಸರಿಗಿಡ, ಮಹೇಶ್ ಕಟ್ಟಿಮನಿ, ದೀಪಕ್, ಪರಶುರಾಮ ಯಮನೂರ್, ಪರಶುರಾಮ ಕಡಕೋಳ, ಶಿವಪ್ಪ ಕಂಬಾರ, ಬಸವರಾಜ ಯಮನೂರ್ ಸೇರಿದಂತೆ ಹಲವರು ಇದ್ದರು.
ಟಿಪ್ಪು ಸುಲ್ತಾನ್ ವೃತ್ತದಲ್ಲಿ: ಟಿಪ್ಪು ಸುಲ್ತಾನ್ ವೃತ್ತದಲ್ಲಿ ಸಂಘದ ಅಧ್ಯಕ್ಷ ಶಫೀಕ್ ದಫೆದಾರ್ ಧ್ವಜಾರೋಹಣ ನೆರವೇರಿಸಿದರು. ಮಹಿಪಾಲ್ ರೆಡ್ಡಿ ದಿಗ್ಗಾವ, ಪುರಸಭೆ ಸದಸ್ಯರಾದ ಆರೀಫ್ ಹುಸೇನ್ ಖಾಜಿ, ರವಿಶಂಕರ್ ಸೊನ್ನದ, ಆದಿತ್ಯ ಗೌಡ ಪೊಲೀಸ್ ಪಾಟೀಲ್, ಬಿ.ಝಡ್. ನಾಲತವಾಡ, ರಾಘವೇಂದ್ರ ದೇಶಪಾಂಡೆ, ಸೋಫಿ ನಾಸಿ, ಬಂದೆನವಾಜ್ ನಾಲತವಾಡ, ಪವನ್ ಕುಲ್ಕರ್ಣಿ, ನಯೂಮ್ ಖಾಜಿ, ಅಲ್ಲಾಭಕ್ಷ್ ಹುಳಬುತ್ತಿ, ಬಷೀರ್ ನಾಸಿ, ಬಾಬಾ ತಾಳಿಕೋಟಿ, ಜಿಲಾನಿ ನಾಸಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಯಾಳಗಿಯಲ್ಲಿ: ಯಾಳಗಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಚೌಕದಲ್ಲಿ ಬಸನಗೌಡ ಹೊಸಮನಿ (ರಾಜೂಕಾಕ) ಧ್ವಜಾರೋಹಣ ನೆರವೇರಿಸಿದರು. ಕರ್ನಾಟಕ ರಾಜ್ಯ ದಲಿತ ಸಮಿತಿ ಯಾದಗಿರಿ ಜಿಲ್ಲಾ ಸಂಘಟನಾ ಸಂಚಾಲಕ ಶಿವಶರಣ ಯಾಳಗಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಹಿರಿಯರಾದ ಬಸವರಾಜ ಹೆಳವರು, ಮಲನಗೌಡ ಮಾಲಿ ಪಾಟೀಲ್, ರಾಮನಗೌಡ ಹೊಸಮನಿ, ಮಹಾದೇವಪ್ಪ ಜಲಪುರ, ಶಿವನಗೌಡ ಬಿರಾದಾರ, ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಶ್ರೀಶೈಲ ಶಿಕ್ಷಕರು, ಭಾಸ್ಕರಗೌಡ ದೇವರಡ್ಡಿ, ಚಂದ್ರಪ್ಪ ಜಲಪುರ, ರಾಜು ನಾಗರಡ್ಡಿ, ಅಶೋಕ್ ಯಾಳಗಿ, ರವಿ ನಾಗರಡ್ಡಿ, ಶ್ರೀಶೈಲ ಮಹಾಮನಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಹಾನಾಯಕ ವೃತ್ತದಲ್ಲಿ: ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಇತ್ತೀಚೆಗೆ ಸಂಚಾರ ನಿಯಂತ್ರಕ ಹುದ್ದೆಯಿಂದ ನಿವೃತ್ತರಾದ ಮಾನಪ್ಪ ಎಂ. ಮಾಳಳ್ಳಿಕರ್ ಧ್ವಜಾರೋಹಣ ನೆರವೇರಿಸಿದರು. ಉಪತಹಸೀಲ್ದಾರ್ ಪ್ರವೀಣಕುಮಾರ ಸಜ್ಜನ್, ಶಿವಾನಂದ ಮುತ್ಯಾ, ಶಿವಶರಣಪ್ಪ ವಾಡಿ, ಭೀಮಣ್ಣ ಮಾಳಳ್ಳಿಕರ್, ಮರೆಪ್ಪ ಮಾಳಳ್ಳಿಕರ್, ಅಯ್ಯಣ್ಣ ಮಾಳಳ್ಳಿಕರ್, ಬಸವಣ್ಣಪ್ಪ ಮಾಳಳ್ಳಿಕರ್, ಮಾಂತೇಶ ಮಾಳಳ್ಳಿಕರ್, ಜುಮ್ಮಣ್ಣ ಕಟ್ಟಿಮನಿ, ಸಂಗಣ್ಣ ಗುಡಿಮನಿ, ಲಕ್ಷ್ಮಣ್ಣ ಬಸರಿಗಿಡ, ರವಿ ಯಮನೂರ್ ಸೇರಿದಂತೆ ಹಲವರು ಇದ್ದರು.
ಪುರಸಭೆ ಆವರಣದಲ್ಲಿ: ಕೆಂಭಾವಿ ಪುರಸಭೆ ಆವರಣದಲ್ಲಿ ನೂತನ ಅಧ್ಯಕ್ಷೆ ಗಿರಿಜಾ ರಮೇಶ್ ಕೊಡಗಾನೂರ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷೆ ಲಕ್ಷ್ಮಿಬಾಯಿ ಜಿ. ಕಂಬಾರ, ಮುಖ್ಯಾಧಿಕಾರಿ ಪ್ರಕಾಶ್ ಬಾಗಲಿ, ಪುರಸಭೆಯ ಸದಸ್ಯರು, ಊರಿನ ಪ್ರಮುಖರು, ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಜೈಭೀಮ್ ನಗರ ಶಾಲೆಯಲ್ಲಿ: ಪಟ್ಟಣದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಜೈಭೀಮ್ ನಗರದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಪುರಸಭೆ ಅಧ್ಯಕ್ಷೆ ಗಿರಿಜಾ ರಮೇಶ್ ಕೊಡಗಾನೂರ ಧ್ವಜಾರೋಹಣ ನೆರವೇರಿಸಿದರು. ಸಹಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.




