ವೇದಿಕೆ ಶುದ್ಧೀಕರಣ ಆರೋಪ ಖಂಡಿಸಿ ಕಾಂಗ್ರೆಸ್ ರಸ್ತೆತಡೆ ಪ್ರತಿಭಟನೆ

ಚಿತ್ತಾಪುರ: ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲದ್ವಾನಿಯ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಿದ ನಂತರ ಬಿಜೆಪಿ ಮತ್ತು ಆರ್.ಎಸ್.ಎಸ್ ಮನುವಾದಿಗಳು ಮೈದಾನದ ವೇದಿಕೆ ಸ್ಥಳವನ್ನು ಗಂಗಾಜಲದಿಂದ ಶುದ್ದೀಕರಣ ಮಾಡಿದ್ದು ಅತ್ಯಂತ ಅಮಾನವೀಯ, ಅವಮಾನಕಾರಿ ಹಾಗೂ ಸಾಮಾಜಿಕ ನ್ಯಾಯದ ಮೌಲ್ಯಗಳಿಗೆ ವಿರುದ್ಧವಾದ ಘಟನೆಯಾಗಿದೆ ಎಂದು ಆರೋಪಿಸಿ ಚಿತ್ತಾಪುರ-ವಾಡಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಪಟ್ಟಣದ ಲಾಡ್ಡಿಂಗ್ ಕ್ರಾಸ್ ಹತ್ತಿರ ಮಂಗಳವಾರ ಮುಖಂಡರು ರಸ್ತೆತಡೆ ಮಾಡಿ ಪ್ರತಿಭಟನೆ ನಡೆಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿದ ಅವರು, ದೇಶದ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇದಿಕೆಯನ್ನು ಶುದ್ದೀಕರಿಸಲಾದ ಘಟನೆ ಅತ್ಯಂತ ಖಂಡನೀಯವಾಗಿದೆ.
ಘಟನೆ ಕೇವಲ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಮಾಡಿದ ಅವಮಾನವಲ್ಲ ಇದು ದೇಶದ ದಲಿತ ಹಾಗೂ ಶೋಷಿತ ಸಮುದಾಯಗಳ ಆತ್ಮಗೌರವಕ್ಕೆ ಧಕ್ಕೆ ತರುವಂತಹ ಘಟನೆ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಮಾನತೆ, ವಿರುದ್ಧವಾಗಿವೆ ಎಂದು ಕಿಡಿಕಾರಿದರು.
ಘಟನೆಯ ನಿಜವಾದ ಹಿನ್ನೆಲೆ, ಯಾರು ಆಯೋಜಕರು, ಯಾರು ಹೊಣೆಗಾರರು ಯಾರು ಮತ್ತು ಯಾರ ಸೂಚನೆಯ ಮೇರೆಗೆ ಈ ಕೃತ್ಯ ನಡೆದಿದೆ ಎಂಬುದರ ಕುರಿತು ನಿಷ್ಪಕ್ಷಪಾತ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪು ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ ಮಾತನಾಡಿ, ದಲಿತ ಸಮದಾಯದ ಮಹಾನ್ ನಾಯಕ, ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟು ನಿತ್ಯ ಜೀವನದಲ್ಲಿ ಪಾಲಿಸುತ್ತಾ ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಸಂವಿಧಾನಾತ್ಮಕ ಹಕ್ಕುಗಳಿಗಾಗಿ ಹಗಲಿರುಳು ಹೋರಾಡುತ್ತಿರುವ ಡಾ.ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಿದ್ದು ದೇಶದ ನಾಗರಿಕ ಸಮಾಜವು ತಲೆತಗ್ಗಿಸುವಂತೆ ಮಾಡಿದೆ. ಒಬ್ಬ ರಾಷ್ಟ್ರೀಯ ನಾಯಕನಿಗೆ ಅವಮಾನಿಸುವುದು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಶೋಭೆತರುವುದಿಲ್ಲ. ಕೂಡಲೇ ಕೇಂದ್ರ ಸರ್ಕಾರ ಸದರಿ ಶುದ್ದೀಕರಣ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಅಲ್ಪಸಂಖ್ಯಾತರ ಅಧ್ಯಕ್ಷ ಮುಕ್ತಾರ್ ಪಟೇಲ್ ಮಾತನಾಡಿ, ದಲಿತ, ಹಿಂದುಳಿದ ನಾಯಕರನ್ನು ಅವಮಾನಿಸುವ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಳಬೇಕು. ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ, ಒಬ್ಬ ವ್ಯಕ್ತಿಯ ಸಾಮಾಜಿಕ ಹಿನ್ನೆಲೆಯನ್ನು ಆಧರಿಸಿ ಅವಮಾನಿಸುವುದು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಶೋಭೆತರುವುದಿಲ್ಲ. ಇಂತಹ ಘಟನೆಗಳು ಅಸಮಾನತೆಯ ಮನೋಭಾವ ಇನ್ನೂ ಸಂಪೂರ್ಣವಾಗಿ ನಿರ್ಮೂಲ ನೆಗೊಂಡಿಲ್ಲ ಎಂಬ ಆತಂಕವನ್ನು ಮೂಡಿಸುತ್ತವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕೂಡಲೇ ವೇದಿಕೆ ಶುದ್ದೀಕರಣ ಕುರಿತು ನಿಷ್ಪಕ್ಷಪಾತ ತನಿಖೆ ಕೈಗೊಳ್ಳಬೇಕು, ಘಟನೆಗೆ ಕಾರಣರಾದ ವ್ಯಕ್ತಿಗಳು ಹಾಗೂ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ವಾಡಿ ಬ್ಲಾಕ್ ಅಧ್ಯಕ್ಷ ಮಹೇಮೂದ್ ಸಾಹೇಬ್, ಮುಖಂಡರಾದ ಸುರೇಶ ಮೆಂಗನ್, ನಾಗರೆಡ್ಡಿ ಪಾಟೀಲ ಕರದಾಳ, ಶಿವಾನಂದ ಪಾಟೀಲ, ಚಂದು ಜಾಧವ, ರಮೇಶ್ ಹಡಪದ ಕೊಲ್ಲೂರ,ಮಲ್ಲಿಕಾರ್ಜುನ ಬೊಮ್ಮನಹಳ್ಳಿ, ಶ್ರೀನಿವಾಸ ಸಗರ, ಬಸವರಾಜ ಹೊಸಳ್ಳಿ, ಬಸವರಾಜ ಚಿನ್ನಮಳ್ಳಿ, ನಾಗಯ್ಯ ಗುತ್ತೇದಾರ, ಶೀಲಾ ಕಾಶಿ, ಭೀಮಾಶಂಕರ ಹೋಳಿಕಟ್ಟಿ ಅವರು ಮಾತನಾಡಿದರು.
ವೀರಣ್ಣಗೌಡ ಪರಸರೆಡ್ಡಿ, ಸುನೀಲ್ ದೊಡ್ಡಮನಿ,
ಜಯಪ್ರಕಾಶ್ ಕಮಕನೂರ, ಶಿವರುದ್ರಪ್ಪ ಭೀಣ್ಣಿ, ಅರವಿಂದ ಚವ್ಹಾಣ, ಚಂದ್ರಶೇಖರ ಕಾಶಿ, ಸಿದ್ದಮ್ಮ ಕಾಶನೂರ, ಜಗಣ್ಣಗೌಡ ರಾಮತೀರ್ಥ, ಮಲ್ಲಿಕಾರ್ಜುನ ಕಾಳಗಿ, ಸೂರ್ಯಕಾಂತ ರದ್ದೇವಾಡಿ, ಸಿದ್ದುಗೌಡ ಅಫಜಲಪುರ, ಶಿವಯ್ಯ ಗುತ್ತೇದಾರ, ಶಿವುಕುಮಾರ ಯಾಗಾಪೂರ, ಶಿವಕಾಂತ ಬೆಣ್ಣೂರಕರ್, ಹಣಮಂತ ಸಂಕನೂರ, ವೀರುಪಾಕ್ಷಪ್ಪ ಗಡ್ಡದ್, ಮಲ್ಲಪ್ಪ ಹೊಸಮನಿ, ಶ್ರೀಕಾಂತ್ ಸಿಂಧೆ, ಮಲ್ಲಿಕಾರ್ಜುನ ಬೆಣ್ಣೂರಕರ್, ರಸೂಲ್ ಮುಸ್ತಫಾ, ಮಲ್ಲಿಕಾರ್ಜುನ ಮುಡಬೂಳಕರ್, ರಾಮಲಿಂಗ ಬಾನರ್, ನಾಗರೆಡ್ಡಿ ಗೋಪಸೇನ್, ನಿಂಗಣ್ಣ ಹೆಗಲೇರಿ,ದೇವಿಂದ್ರ ಅರಣಕಲ್, ಭೀಮಸಿಂಗ ಚವ್ಹಾಣ, ಜಗದೀಶ್ ಚವ್ಹಾಣ, ಯಲ್ಲಾಲಿಂಗ ಪೂಜಾರಿ,ಶಿವುಕುಮಾರ ಸುಲ್ತಾನಪೂರ, ಮನ್ಸೂರ್ ಪಟೇಲ್, ದೇವಿಂದ್ರ ಯಾಬಾಳ, ಶೇಖ್ ಬಬ್ಬು, ಸಂಜಯ್ ಬುಳಕರ್, ಬಾಬು ಕಾಶಿ, ವಿನ್ನು ಕುಮಾರ ಜೆಡಿ, ಶಿವಯೋಗಿ ರವೂರ್, ರವಿಸಾಗರ ಹೊಸಮನಿ, ಗಂಗು ಡಿಗ್ಗಿ, ಪ್ರಭು ನಾಟಿಕರ್, ಅರುಣ ಯಾಗಾಪೂರ,ಅನಿಲ ಚವ್ಹಾಣ, ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಡಿವೈಎಸ್ಪಿ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ರಾಷ್ಟ್ರಪತಿ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಸಲ್ಲಿಸಿದರು.



