ಚಿತ್ರ ಸುದ್ದಿಜಿಲ್ಲೆ ಸುದ್ದಿ

ಶಿಕ್ಷಕರ ಉತ್ಸವ-2026: ಆದರ್ಶ ಶಿಕ್ಷಕ, ವೈದ್ಯ ದಂಪತಿಗೆ ಗೌರವ

ಕಲಬುರಗಿ: ಡಾ. ರಾಜಕುಮಾರ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ಸಂಘ (ರಿ.), ರಾಜಾಪುರ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ‘ಶಿಕ್ಷಕರ ಉತ್ಸವ–2026’ ಕಾರ್ಯಕ್ರಮವನ್ನು ಸೆ.20ರಂದು ನಗರದಲ್ಲಿ ಆಯೋಜಿಸಲಾಗಿದೆ.

ಉತ್ಸವದ ಅಂಗವಾಗಿ ಐದನೇ ವರ್ಷದ ‘ರಾಜ್ಯಮಟ್ಟದ ಆದರ್ಶ ಶಿಕ್ಷಕ ದಂಪತಿಗಳು’, ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ‘ರಾಜ್ಯಮಟ್ಟದ ಆದರ್ಶ ವೈದ್ಯ ದಂಪತಿಗಳು’ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಸಾಧಕರಿಗೆ ‘ಸಾಧಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಸೆ.20ರಂದು ಭಾನುವಾರ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿಗೆ ಅರ್ಹರಾಗಿರುವ ಶಿಕ್ಷಕ–ವೈದ್ಯ ದಂಪತಿಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಸ್ವ-ವಿವರ ಮತ್ತು ಸಾಧನೆಗಳ ವಿವರಗಳನ್ನು ಆ.31ರೊಳಗೆ ಸಂಘಕ್ಕೆ ಸಲ್ಲಿಸಬೇಕು. ದೂರವಾಣಿ ಮೂಲಕವೂ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಘದ ಅಧ್ಯಕ್ಷ ಪ್ರೊ. ರಮೇಶ ಬಿ. ಯಾಳಗಿ (9008922576) ಹಾಗೂ ಕಾರ್ಯದರ್ಶಿ ಯಲ್ಲಾಲಿಂಗ ದಂಡಿನ್ (8861107374) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button