ಜಿಲ್ಲೆ ಸುದ್ದಿಯಾದಗಿರಿ
ಕೆಂಭಾವಿಯಲ್ಲಿ ಸೆ.1ರಂದು ಸರ್ವಧರ್ಮ ಸಮ್ಮೇಳನ, ಖಾಸಗಿ ಶಾಲಾ ಶಿಕ್ಷಕರ ಸನ್ಮಾನ

ಕೆಂಭಾವಿ: ಪಟ್ಟಣದ ದೇವತೆಯಾದ ಮಹಾಸತಿ ಮಹಾಸತ್ಯಮ್ಮಳಾದ ಹಜರತ್ ಜಚ್ಚಾ ಮಾಸಾಬಿ ದರ್ಗಾದ ಜಾತ್ರಾ ಮಹೋತ್ಸವದ ಅಂಗವಾಗಿ ಸೆ.1ರಂದು ‘ಸರ್ವಧರ್ಮ ಸಮ್ಮೇಳನ’ ಹಾಗೂ ‘ಖಾಸಗಿ ಶಾಲಾ ಶಿಕ್ಷಕರ ಸನ್ಮಾನ’ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಂಗಳವಾರ ಮಧ್ಯಾಹ್ನ 2 ಗಂಟೆಗೆ ದರ್ಗಾ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶರಣು ಗದ್ದುಗೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕೆಂಭಾವಿ ವ್ಯಾಪ್ತಿಯ ವಿವಿಧ ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಸೇವೆಯನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಗುವುದು.
ಕಾರ್ಯಕ್ರಮಕ್ಕೆ ಕೆಂಭಾವಿ ವ್ಯಾಪ್ತಿಯ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಊರಿನ ಹಿರಿಯರು ಹಾಗೂ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ದರ್ಗಾದ ಸಜ್ಜಾದ ನಶೀನರಾದ ಷಾ ಮಹಿಬೂಬ ಪಾಶಾ ಖಾಜಿ ಫಾರೂಖಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.



