ಕಲಬುರಗಿ

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಹಾಪುರಾಣ ಕಾರ್ಯಕ್ರಮಕ್ಕೆ ತೆರೆ

ಕಲಬುರಗಿ: ನಗರದ ಹಳೆ ಜೇವರ್ಗಿ ರಸ್ತೆಯ ಸಂಪಿಗೆನಗರದಲ್ಲಿರುವ ಶ್ರೀ ಈಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶ್ರೀ ಈಶ್ವರ ದೇವಸ್ಥಾನ ಸಮಿತಿ ವತಿಯಿಂದ ಆಯೋಜಿಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಹಾಪುರಾಣ ಕಾರ್ಯಕ್ರಮ ಒಂದು ತಿಂಗಳ ಕಾಲ ಭಕ್ತಿಭಾವದಿಂದ ನಡೆಯಿತು.

ಕಾರ್ಯಕ್ರಮದ ಸಮಾರೋಪದ ಅಂಗವಾಗಿ ಶ್ರೀ ಈಶ್ವರ ದೇವಸ್ಥಾನ ಸಮಿತಿ ವತಿಯಿಂದ ಗಣ್ಯರನ್ನು ಸನ್ಮಾನಿಸಲಾಯಿತು.

ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಜಗನ್ನಾಥ ಶೇಜಿ, ಸಿದ್ರಾಮಪ್ಪ ಪಾಟೀಲ ಧಂಗಾಪುರ, ಕೃಷ್ಣಾ ರೆಡ್ಡಿ, ಡಾ. ಪ್ರತಿಭಾ ಕಾಮರೆಡ್ಡಿ, ಶ್ರೀಕಾಂತ ಚೌಕಾ, ಉದ್ಯಮಿದಾರ ಬಸವರಾಜ ಮಚ್ಚಟ್ಟಿ, ಮಲ್ಲಣ್ಣ ರಟಗಲ್, ಬಸವರಾಜ ದಂಡೋತಿ, ಆಕಾಶ ಹೌದೆ, ವಿರಪಾಕ್ಷಿಸ್ವಾಮಿ ಆಳಂದ, ಸಿದ್ದು ಪಾಟೀಲ ಬಲಬಟ್ಟಿ, ಡಾ. ವಿಶ್ವನಾಥ, ಶರಣಗೌಡ ಪಾಟೀಲ ನಿಂಬರ್ಗಾ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶ್ರೀ ಈಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ರಾಜಶೇಖರ ಪಾಟೀಲ ಅಪ್ಪಾಜಿ, ಉಪಾಧ್ಯಕ್ಷ ಎಂ.ಎಸ್. ಪಾಟೀಲ ಮುನ್ನಳ್ಳಿ, ಕಾರ್ಯದರ್ಶಿ ಚಂದ್ರಕಾಂತ ಎಸ್. ಗುತೇದಾರ, ಸಮಿತಿ ಸದಸ್ಯರಾದ ಅರುಣಕುಮಾರ ಪಾಟೀಲ, ವೀರೇಶ ಛತ್ರಿ ಹಾಗೂ ಚಂದ್ರಶೇಖರ ಮಡಿವಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರತಿದಿನ ಮಹಾಪುರಾಣ ಪ್ರವಚನ

ಆ.12ರಿಂದ ಸೆ.11ರವರೆಗೆ ಪ್ರತಿದಿನ ರಾತ್ರಿ 7.30ರಿಂದ 9.30ರವರೆಗೆ ಗದುಗಿನ ಗಾನಯೋಗಿ ಶಿವಯೋಗಿ ಪಂಡಿತ ಪುಟ್ಟರಾಜ ಕವಿಗವಾಯಿಗಳ ಪರಮಶಿಷ್ಯರಾದ ವೇ.ಮೂ. ಶ್ರೀ ವೀರೇಶ ಶಾಸ್ತ್ರಿಗಳು, ಮಲಕೂಡ ಅವರು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಹಾಪುರಾಣದ ಪ್ರವಚನ ನಡೆಸಿಕೊಟ್ಟರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಆಕಾಶವಾಣಿ ಕಲಾವಿದ ಶ್ರೀ ಬಾಬುರಾವ್ ಕೋಬಾಳ ಅವರು ಸಂಗೀತ ಸೇವೆ ಸಲ್ಲಿಸಿದರು. ತಬಲಾ ಸಾಥ್ ಅನ್ನು ಶ್ರೀ ಅಭಿಷೇಕ ವಿಶ್ವಕರ್ಮ ಕೊಡ್ಲಾ ಅವರು ನೀಡಿದರು.

ಒಂದು ತಿಂಗಳ ಕಾಲ ನಡೆದ ಮಹಾಪುರಾಣ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಧಾರ್ಮಿಕ ಕಾರ್ಯಕ್ರಮಗಳ ಸದುಪಯೋಗ ಪಡೆದರು. ಕಾರ್ಯಕ್ರಮ ಯಶಸ್ವಿಯಾಗಲು ಶ್ರೀ ಈಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಎಲ್ಲ ಸದಸ್ಯರು ಹಾಗೂ ಭಕ್ತ ಮಂಡಳಿ ಸಹಕರಿಸಿದರು.

Related Articles

Leave a Reply

Your email address will not be published. Required fields are marked *

Back to top button