ಕಲಬುರಗಿಚಿತ್ರ ಸುದ್ದಿ
ವಾಯುವಿಹಾರ ಮಿತ್ರ ಮಂಡಳಿಯಿಂದ ಮಲ್ಲಿನಾಥ ಪಾಟೀಲ ಕಾಳಗಿ ಅವರಿಗೆ ಸನ್ಮಾನ

ಕಲಬುರಗಿ: ನಗರದ ನ್ಯಾಯಾಲಯ ಆವರಣದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಖಜಾಂಚಿಯಾಗಿ ಆಯ್ಕೆಯಾಗಿರುವ ಮಲ್ಲಿನಾಥ ಪಾಟೀಲ ಕಾಳಗಿ ಅವರನ್ನು ವಾಯುವಿಹಾರ ಮಿತ್ರ ಮಂಡಳಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಮಲ್ಲಿನಾಥ ಪಾಟೀಲ ಕಾಳಗಿ ಅವರು ಸಾಮಾಜಿಕ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿದರು. ರೈತರು ಹಾಗೂ ಸಮಾಜದ ವಿವಿಧ ವರ್ಗಗಳ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಲಿ ಎಂದು ಶುಭ ಹಾರೈಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಕಾಶ್ಯಪ್ಪ ವಾಂಜರಖೇಡ, ಚಂದ್ರಶೇಖರ ಗುರುಗುಂಟೆ, ಅಶೋಕ ತಳವಾರ, ಶರಣು ವಕೀಲ, ಅಂಬರೀಶ್ ಸಜ್ಜನ, ರಾಜು, ಸುರೇಶ ಸೇರಿದಂತೆ ವಾಯುವಿಹಾರ ಮಿತ್ರ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.



