ಕಲಬುರಗಿ

ಶ್ರಾವಣ ಮಾಸದ ಸಮಾರೋಪ: ಡಾ. ಬಿ.ಬಿ. ನಾಯಕ್‌ಗೆ ಸನ್ಮಾನ

ಶಾಹಾಬಾದ್: ನಗರದ ಬಂಜಾರಾ ನಗರ ತಾಂಡಾದ ಪವನಪುತ್ರ ರಾಮಭಕ್ತ ಹನುಮಾನ್ ಮಂದಿರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ ಶುಕ್ರವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.

ತಾಂಡಾದ ಯುವಕರು, ಹಿರಿಯರು ಹಾಗೂ ಭಕ್ತರು ಭಾಗವಹಿಸಿ ಹೋಮ-ಹವನ, ಯಜ್ಞ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಿದರು.

ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ತಾಂಡಾದ ಹಿರಿಯರಾದ ಡಾ. ಬಿ.ಬಿ. ನಾಯಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಿವೃತ್ತಿಯ ಬಳಿಕವೂ ಸಮಾಜ ಸೇವೆಯಲ್ಲಿ ಸಕ್ರಿಯರಾಗಿರುವ ಡಾ. ಬಿ.ಬಿ. ನಾಯಕ್ ಅವರು ಬಡವರಿಗಾಗಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳಿಗೆ ನೆರವು ನೀಡುತ್ತಿದ್ದಾರೆ. ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿ ಉಚಿತ ಔಷಧಿಗಳನ್ನು ವಿತರಿಸುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಅವರ ಸಮಾಜ ಸೇವೆಯನ್ನು ಗುರುತಿಸಿ ಕನ್ನಡ ರತ್ನ ಪ್ರಶಸ್ತಿ, ಸರ್ಟಿಫಿಕೇಟ್ ಆಫ್ ಆನರ್, ನವದೆಹಲಿಯ ಬಂಜಾರಾ ಸೇವಾ ಶಿರೋಮಣಿ ಪ್ರಶಸ್ತಿ ಹಾಗೂ ಅಮೆರಿಕನ್ ವೆಸ್ಟರ್ನ್ ಪೀಸ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಗೌರವಗಳು ಲಭಿಸಿವೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.

ತಾಂಡಾದ ಹೆಸರನ್ನು ವಿವಿಧ ಕ್ಷೇತ್ರಗಳಲ್ಲಿ ಗುರುತಿಸುವಂತೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಾಂಡಾದ ಹಿರಿಯರು, ಯುವಕರು ಹಾಗೂ ಭಕ್ತರು ಡಾ. ಬಿ.ಬಿ. ನಾಯಕ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಕಿಶನ್ ನಾಯಕ್, ಸುರೇಶ್ ನಾಯಕ್, ಕುಮಾರ ಚವಾಣ್, ಸೂರಜ್ ರಾಠೋಡ್, ಕಿರಣ್ ಕುಮಾರ ಚವಾಣ್, ದೇವರಾಜ ರಾಠೋಡ್, ನರಸಿಂಹ ರಾಠೋಡ್, ಪ್ರೇಮ್ ರಾಠೋಡ್, ತಾರಾಸಿಂಗ್ ರಾಠೋಡ್, ಮೋಹನ್ ರಾಠೋಡ್, ಗೋಪಾಲ್ ಪವಾರ್, ಚಂದ್ರ ನಾಯಕ್, ಮದನಲಾಲ್, ಆನಂದ ಚವಾಣ್, ರಾಜು, ಖೀರು ನಾಯಕ್, ನರಸಿಂಹ ಮಹಾರಾಜ್, ರೇಖಾ ನಾಯಕ್ ಹಾಗೂ ಸೀನಾಬಾಯಿ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಕಿರಣ್ ಕುಮಾರ್ ಚವಾಣ್, ಶಾಹಾಬಾದ್ ಅವರು ಹೃದಯಪೂರ್ವಕ ಧನ್ಯವಾದ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button