ಕಲಬುರಗಿಜಿಲ್ಲಾಸುದ್ದಿ

ಖಾಲಿ ಕಟ್ಟಡದಲ್ಲಿ ಬೀದಿ ನಾಯಿಗಳ ಗುಂಪು: ನಿವಾಸಿಗಳಿಗೆ ನಿದ್ರಾಹೀನತೆ

ಕಲಬುರಗಿ : ನಗರದ ಅಶೋಕನಗರ ಹಾಗೂ ಶಾಂತಿನಗರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸ್ಥಳೀಯ ನಿವಾಸಿಗಳು ಗಂಭೀರ ತೊಂದರೆ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಒಂದು ಖಾಲಿ ಕಟ್ಟಡದಲ್ಲಿ ನೂರಾರು ಬೀದಿ ನಾಯಿ ಗಳು ಸೇರಿಕೊಂಡು ರಾತ್ರಿ ಪೂರ್ತಿ ಬೊಗಳುವು ದರಿಂದ ಜನರು ನಿದ್ದೆ ಮಾಡಲಾಗದ ಸ್ಥಿತಿ ನಿರ್ಮಾಣವಾ ಗಿದೆ.

ಸ್ಥಳೀಯರ ಪ್ರಕಾರ, ಕಳೆದ ಸುಮಾರು 12 ವರ್ಷಗಳಿಂದ ಮನೆ ಎದುರುಗಡೆ ಇರುವ ಈ ಕಟ್ಟಡ ಖಾಲಿಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಇದು ಬೀದಿ ನಾಯಿಗಳ ಆಶ್ರಯಸ್ಥಳವಾಗಿ ಮಾರ್ಪಟ್ಟಿದೆ. ರಾತ್ರಿ ಸಮಯದಲ್ಲಿ ನಾಯಿಗಳ ಗುಂಪು ಗದ್ದಲ ಮಾಡುತ್ತಿದ್ದು, ಮಕ್ಕಳಿಂದ ವೃದ್ಧರ ತನಕ ಎಲ್ಲರೂ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ.

ಈ ಕುರಿತು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಆರೋಗ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವ ನಿವಾಸಿಗಳು, ಕೂಡಲೇ ಕ್ರಮ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಖಿಲ ಕರ್ನಾಟಕ ಹೆಳವ ಸಮಾಜ (ರಿ.) ರಾಜ್ಯ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್ ಬಿ.ಹೆಳವರ ರಾಜೇಶ್ವರಿ ಬಿ. ಹರಾವಾಳ, ಮಲ್ಕಮ್ಮ ಜಮಾದಾರ, ಚಂದ್ರಕಾಂತ ಟಾಂಗಾವಾಲಾ ಸೇರಿದಂತೆ ಹಲವು ಮುಖಂಡರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button