ಕಲಬುರಗಿಯಲ್ಲಿ ಜೋಯಾಲುಕ್ಕಾಸ್ನ ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’

ಕಲಬುರಗಿ, ಆ.14: ವಿಶ್ವದ ಖ್ಯಾತ ಆಭರಣ ಬ್ರ್ಯಾಂಡ್ ಜೋಯಾಲುಕ್ಕಾಸ್ ನಗರದ ತನ್ನ ಶೋರೂಮ್ನಲ್ಲಿ ಆಗಸ್ಟ್ 16ರಿಂದ 30ರವರೆಗೆ ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’ ಆಯೋಜಿಸಿದೆ.
ವಜ್ರಾಭರಣಗಳ ಕಲಾತ್ಮಕತೆ, ಸೊಬಗು ಹಾಗೂ ಆಧುನಿಕ ವಿನ್ಯಾಸಗಳ ವಿಶೇಷ ಸಂಗ್ರಹವನ್ನು ಈ ಪ್ರದರ್ಶನದಲ್ಲಿ ಅನಾವರಣಗೊಳಿಸಲಾಗುತ್ತಿದೆ. ಮದುವೆ, ವಿಶೇಷ ಸಮಾರಂಭಗಳು ಹಾಗೂ ದೈನಂದಿನ ಬಳಕೆಗೆ ಸೂಕ್ತವಾಗಿರುವ ವಿವಿಧ ಮಾದರಿಯ ವಜ್ರಾಭರಣಗಳನ್ನು ಗ್ರಾಹಕರಿಗೆ ಒಂದೇ ವೇದಿಕೆಯಲ್ಲಿ ಪರಿಚಯಿಸಲಾಗುತ್ತಿದೆ.
ಪ್ರದರ್ಶನದಲ್ಲಿರುವ ಪ್ರತಿಯೊಂದು ಆಭರಣವೂ ವಿಶಿಷ್ಟ ವಿನ್ಯಾಸ, ಸೂಕ್ಷ್ಮ ಕರಕುಶಲತೆ ಮತ್ತು ಕಾಲಾತೀತ ಸೌಂದರ್ಯದೊಂದಿಗೆ ರೂಪುಗೊಂಡಿದ್ದು, ಈ ವಿಶೇಷ ಸಂಗ್ರಹವು ಪ್ರದರ್ಶನದ ಅವಧಿಯಲ್ಲಿ ಮಾತ್ರ ಲಭ್ಯವಿರಲಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಕುರಿತು ಜೋಯಾಲುಕ್ಕಾಸ್ ಸಮೂಹದ ಸಿಎಂಡಿ ಡಾ. ಜೋಯ್ ಆಲುಕ್ಕಾಸ್ ಮಾತನಾಡಿ, ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ ನಮ್ಮ ಗುಣಮಟ್ಟ, ನಂಬಿಕೆ ಮತ್ತು ವಿನ್ಯಾಸದ ಶ್ರೇಷ್ಠತೆಯ ಪ್ರತೀಕವಾಗಿದೆ. ಕಲಬುರಗಿಯ ಗ್ರಾಹಕರಿಗೆ ಅತ್ಯಾಧುನಿಕ ಹಾಗೂ ಆಕರ್ಷಕ ವಜ್ರಾಭರಣಗಳ ವಿಶೇಷ ಸಂಗ್ರಹವನ್ನು ಪರಿಚಯಿಸಲು ಸಂತೋಷವಾಗುತ್ತಿದೆ’ ಎಂದು ಹೇಳಿದರು.
ಪ್ರದರ್ಶನದ ಅಂಗವಾಗಿ ವಿಶೇಷ ಕೊಡುಗೆಗಳನ್ನು ಘೋಷಿಸಲಾಗಿದ್ದು, ₹1 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ವಜ್ರಾಭರಣ ಖರೀದಿಸುವ ಗ್ರಾಹಕರಿಗೆ ಉಚಿತ ಚಿನ್ನದ ನಾಣ್ಯ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಆಭರಣ ಪ್ರಿಯರಿಗೆ ವಿಶಿಷ್ಟ ಖರೀದಿ ಅನುಭವ ನೀಡುವ ಉದ್ದೇಶದಿಂದ ಆಯೋಜಿಸಿರುವ ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’ ಆಗಸ್ಟ್ 16ರಿಂದ 30ರವರೆಗೆ ಕಲಬುರಗಿಯ ಜೋಯಾಲುಕ್ಕಾಸ್ ಶೋರೂಮ್ನಲ್ಲಿ ನಡೆಯಲಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.