ಶ್ರಾವಣ ಮಾಸದ ಅಂಗವಾಗಿ ಅಣವೀರಭದ್ರೇಶ್ವರ ಮಹಾಪುರಾಣ ಉದ್ಘಾಟನೆ

ಕಲಬುರಗಿ, ಆ.14: ಶ್ರಾವಣ ಮಾಸದ ಅಂಗವಾಗಿ ನಗರದ ಮಹಾತ್ಮ ಬಸವೇಶ್ವರ ಕಾಲನಿಯಲ್ಲಿರುವ ಸುಕ್ಷೇತ್ರ ಕೋರವಾರದ ಶ್ರೀ ಅಣವೀರಭದ್ರೇಶ್ವರ ಮಹಾಪುರಾಣ ಕಾರ್ಯಕ್ರಮವು ಭಕ್ತಿಭಾವದಿಂದ ಶುಕ್ರವಾರ ಆರಂಭಗೊಂಡಿತು.
ಕಾರ್ಯಕ್ರಮವನ್ನು ಗದ್ದುಗೆ ಮಠದ ಶ್ರೀ ಮ.ನಿ.ಪ್ರ. ಚರಲಿಂಗ ಮಹಾಸ್ವಾಮೀಜಿ ಉದ್ಘಾಟಿಸಿದರು. ಪುರಾಣ ಪ್ರವಚನಕಾರರಾದ ಶ್ರೀ ಷ.ಬ್ರ. ವಿಜಯ ಮಹಾಂತೇಶ್ವರ ಶಿವಾಚಾರ್ಯರು ಧಾರ್ಮಿಕ ಪ್ರವಚನ ನೀಡಿ, ಶ್ರಾವಣ ಮಾಸದ ಆಚರಣೆಗಳ ಮಹತ್ವ, ಭಕ್ತಿ, ಧರ್ಮ ಹಾಗೂ ಸನಾತನ ಸಂಸ್ಕೃತಿಯ ಮೌಲ್ಯಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಪುರಾಣ ಸಮಿತಿ ಅಧ್ಯಕ್ಷ ಶರಣಪ್ಪ ಗೊಬ್ಬೂರು, ಗುರುಸ್ವಾಮಿ, ಶಿವಾನಂದ ಯಳವಂತಗಿ, ಶ್ರೀಕಾಂತ್ ಶೆಟ್ಟಿ, ವಿರೂಪಾಕ್ಷಯ್ಯ ಮಠಪತಿ, ಸಿದ್ರಾಮಪ್ಪ ಮಹಾಗಾಂವ್ಕರ್, ಮನೋಹರ್ ಮಾದುಗೋಳ, ಶರಣಪ್ಪ ಮರಬ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.
ಶ್ರಾವಣ ಮಾಸದ ಪವಿತ್ರ ಸಂದರ್ಭದಲ್ಲಿ ಆಯೋಜಿಸಲಾದ ಮಹಾಪುರಾಣ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಅಣವೀರಭದ್ರೇಶ್ವರರ ಕೃಪೆಗೆ ಪಾತ್ರರಾದರು.



