ಕಲಬುರಗಿಜಿಲ್ಲಾಸುದ್ದಿ

ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ

ಕೆಂಭಾವಿ : ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ, ಜಾತಿ–ಧರ್ಮ ಭೇದ ಮರೆತು ಆಚರಿಸುವಂತೆ ಕೆಂಭಾವಿ ಪೊಲೀಸ್ ಠಾಣೆಯ ಪಿಎಸ್ಐ ಅಮೋಜ ಕಾಂಬಳೆ ಹೇಳಿದರು.

ಪಟ್ಟಣದ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ಶಾಂತಿ ಸಭೆಯನ್ನುದ್ದೇಶ ಮಾತನಾಡಿದವರು ಎಲ್ಲರೂಸಾಮಾಜಿಕ ಮಾಧ್ಯಮಗಳಲ್ಲಿ ಹಳೆಯ ಫೋಟೋ/ವೀಡಿಯೊಗಳು ಹಬ್ಬದ ಹೆಸರಿನಲ್ಲಿ ಹಂಚಿ, ಸೌಹಾರ್ದದಲ್ಲಿ ಕೊಳಕು ಹಾಕುವವರ ವಿರುದ್ಧ ಎಚ್ಚರಿಕೆ ನೀಡಿದರು.

ಸಣ್ಣ ಹುಡಗರನ್ನು ಹಬ್ಬದ ಹಿನ್ನಲೆಯಲ್ಲಿ ರಾತ್ರಿ ಸುತ್ತಾಡುವುದನ್ನು ನಿಲ್ಲಿಸಬೇಕು.ಕಾನೂನು ಸುವ್ಯವಸ್ಥೆ, ಸೌಹಾರ್ದತೆ ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸ್ಪಷ್ಟಪಡಿಸಿದರು.

ಹಿಂದೂ–ಮುಸ್ಲಿಂ ಬಾಂಧವರು ಒಗ್ಗಟ್ಟಾಗಿ ಶಾಂತಿಯಿಂದ ಹಬ್ಬ ಆಚರಿಸಬೇಕು, ಯಾವುದೇ ಅನುಮಾನಿತ ವ್ಯಕ್ತಿಗಳು ಅಥವಾ ಅಸಹಜ ಸಂದೇಹಗಳು ಬಂದರೆ ತಕ್ಷಣ ಠಾಣೆಗೆ ಮಾಹಿತಿ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಖಾಜಾ ಪಟೇಲ್ ಕಾಚುರ್, ನಯುಮ್ ಖಾಜಿ,ಮಹಮ್ಮದ್ ಹನೀಫ್ ನಾಸಿ, ಸತ್ತಾರ್ ಹುಣಶ್ಯಾಳ, ಪ್ರಭು ಧರಿ,ವಾಹೀದ್, ಬಂದೆನವಾಜ್ ಸಿಲೆದಾರ್, ಯುವಕರು ಬೇರೆ ಬೇರೆ ಗ್ರಾಮದ ಮುಖಂಡರು ಹಾಜರಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button