ವಡ್ಡರ ಗಲ್ಲಿಯಲ್ಲಿ ಆಷಾಢ ಜಾತ್ರಾ ಮಹೋತ್ಸವ ಸಂಭ್ರಮ

ಕಲಬುರಗಿ: ನಗರದ ವಡ್ಡರ ಗಲ್ಲಿಯಲ್ಲಿ ಆಷಾಢ ಜಾತ್ರಾ ಮಹೋತ್ಸವವನ್ನು ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಪೂಜಾ–ವಿಧಿವಿಧಾನಗಳು ನೆರವೇರಿದವು. ವಡ್ಡರ ಸಮಾಜದ ಹಿರಿಯರು, ಮುಖಂಡರು, ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಭೀಮಶಂಕರ್ ಬಂಕುರ್, ರಾಜು ಎಂ. ಪುರೆ, ತಿಮ್ಮಣ್ಣ ಜಾದವ್, ಬಸವರಾಜ್ ಇಂಚಲಗಿ, ರಾಘವೇಂದ್ರ ಲಸ್ಕರಿ, ಶಿವಕುಮಾರ ಎಂ. ಪುರೆ, ದೀಪಕ್ ಪಪ್ಪು ಹಾಗೂ ನೀಲಕಂಠ ಸಿದ್ದಮ್ಮ ಭೋವಿ ಸೇರಿದಂತೆ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು.
ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ ಸಮಾಜದ ಸದಸ್ಯರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಸಮಾಜದ ಐಕ್ಯತೆ, ಸೌಹಾರ್ದ ಹಾಗೂ ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು.
ಧಾರ್ಮಿಕ ಆಚರಣೆಗಳೊಂದಿಗೆ ನಡೆದ ಜಾತ್ರಾ ಮಹೋತ್ಸವವು ಸಮಾಜದ ಸದಸ್ಯರಲ್ಲಿ ಭಕ್ತಿ ಹಾಗೂ ಒಗ್ಗಟ್ಟಿನ ಸಂದೇಶ ಸಾರುವ ಮೂಲಕ ಅರ್ಥಪೂರ್ಣವಾಗಿ ನೆರವೇರಿತು.



